ಬಿಬಿಎಂಪಿಗೆ ಮೈಸೂರು ಮಹಾನಗರ ಪಾಲಿಕೆ ತಂಡ ಭೇಟಿ
ಮೈಸೂರು

ಬಿಬಿಎಂಪಿಗೆ ಮೈಸೂರು ಮಹಾನಗರ ಪಾಲಿಕೆ ತಂಡ ಭೇಟಿ

December 20, 2021

ಮೈಸೂರು, ಡಿ.19(ಆರ್‍ಕೆಬಿ)- ಬಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ)ಗೆ ಮೈಸೂರು ಮಹಾ ನಗರಪಾಲಿಕೆ ತಂಡ ಭೇಟಿ ನೀಡಿ, ಬಿ-ರಿಜಿಸ್ಟರ್ ಅನು ಷ್ಠಾನ ಕುರಿತು ಮಾಹಿತಿ ಪಡೆದುಕೊಂಡಿತು.

ಉಪಮೇಯರ್ ಅನ್ವರ್ ಬೇಗ್ ಹಾಗೂ ಅವರ ತಂಡ ಬಿಬಿಎಂಪಿಗೆ ಭೇಟಿ ನೀಡಿ, ಈ ಕುರಿತು ಮಾಹಿತಿ ಪಡೆದುಕೊಂಡಿದ್ದು, ಶೀಘ್ರದಲ್ಲೇ ಮೈಸೂರು ನಗರ ಪಾಲಿಕೆಯಲ್ಲೂ ಬಿ-ರಿಜಿಸ್ಟರ್ ಅನುಷ್ಠಾನಗೊಳ್ಳಲಿದೆ.

ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 61 ಕಂದಾಯ, ಬಡಾವಣೆಗಳಲ್ಲಿ ಸುಮಾರು 31 ಸಾವಿರ ಕಂದಾಯ ಆಸ್ತಿಗಳನ್ನು ಇವುಗಳಿಂದ ಆಸ್ತಿ ತೆರಿಗೆಯನ್ನು ಸಂಗ್ರಹಿಸಿ, ಈ ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಈ ಆಸ್ತಿಗಳ ದಾಖಲೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅನುಷ್ಠಾನದಲ್ಲಿರುವಂತೆ ಮೈಸೂರು ಮಹಾನಗರ ಪಾಲಿಕೆಯಲ್ಲಿಯೂ ಸಹ ಬಿ-ರಿಜಿಸ್ಟರ್ ಅನ್ನು ಅನುಷ್ಠಾನಗೊಳಿಸುವ ಬಗ್ಗೆ ಮಾಹಿತಿ ಪಡೆದುಕೊಂಡಿತು. ಈ ವೇಳೆ ಮೈಸೂರು ಮಹಾನಗರ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಬಿಬಿಎಂಪಿ ಕಂದಾಯ ವಿಭಾಗದ ಜಂಟಿ ಆಯುಕ್ತ ವೆಂಕಟಾಚಲಪತಿ, ಮೈಸೂರು ನಗರಪಾಲಿಕೆಯ ಉಪ ಆಯುಕ್ತ ಶಶಿಕುಮಾರ್ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Translate »