ಕೊರೊನಾ ಲಸಿಕೆ ಅಭಿಯಾನ: ಮೈಸೂರಿಗೆ ಏಳನೇ ಸ್ಥಾನ ಪ್ರಾಪ್ತಿ
ಮೈಸೂರು

ಕೊರೊನಾ ಲಸಿಕೆ ಅಭಿಯಾನ: ಮೈಸೂರಿಗೆ ಏಳನೇ ಸ್ಥಾನ ಪ್ರಾಪ್ತಿ

December 20, 2021

ಮೈಸೂರು, ಡಿ.19 – ಸಂಭವನೀಯ ಕೊರೊನಾ ಮೂರನೇ ಅಲೆ ಹಾಗೂ ರೂಪಾಂತರಿ ಒಮಿಕ್ರಾನ್ ಮತ್ತು ಡೆಲ್ಟಾ ವೈರಸ್‍ನ ದುಷ್ಪರಿಣಾಮದಿಂದ ಜನರ ಪ್ರಾಣ ರಕ್ಷಣೆಗಾಗಿ ಲಸಿಕೆಯೊಂದೇ ಪರಿಹಾರವಾಗಿದ್ದು, ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೈಗೊಂಡಿರುವ ಕಾಳಜಿಯ ಕ್ರಮದಿಂದಾಗಿ ಲಸಿಕೆ ಅಭಿಯಾನದಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲೇ ಏಳನೇ ಸ್ಥಾನ ಪಡೆದಿದೆ.

ಬೆಂಗಳೂರು ನಗರ ಜಿಲ್ಲೆಯು ಶೇ.96 ರಷ್ಟು ಲಸಿಕೆ ಹಾಕುವ ಅಭಿಯಾನದಲ್ಲಿ ಸಾಧನೆ ಮಾಡಿ, ಮೊದಲ ಸ್ಥಾನ ಪಡೆ ದಿದ್ದರೆ, ಕೊಡಗು ಶೇ.88ರಷ್ಟು ಮಂದಿಗೆ ಲಸಿಕೆ ಹಾಕುವ ಮೂಲಕ 2ನೇ ಸ್ಥಾನ ಪಡೆದಿದೆ. ಮಂಡ್ಯ ಜಿಲ್ಲೆಯಲ್ಲಿ ಶೇ.82 ರಷ್ಟು ಮಂದಿಗೆ ಲಸಿಕೆಯನ್ನು ಹಾಕ ಲಾಗಿದ್ದು, 3ನೇ ಸ್ಥಾನ ಪಡೆದಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು ಶೇ.76ರಷ್ಟು ಮಂದಿಗೆ ಲಸಿಕೆ ಹಾಕಲಾಗಿದ್ದು, 7ನೇ ಸ್ಥಾನ ಪಡೆದಿದೆ. ಇನ್ನು ಚಾಮರಾಜನಗರದಲ್ಲಿ ಶೇ.74ರಷ್ಟು ಮಂದಿಗೆ ಲಸಿಕೆ ಹಾಕಲಾಗಿದ್ದು, 17ನೇ ಸ್ಥಾನ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನಡೆಯುತ್ತಿರುವ ಲಸಿಕೆ ಅಭಿಯಾನ ದಿನದಿಂದ ದಿನಕ್ಕೆ ಚುರುಕು ಪಡೆಯುತ್ತಿದ್ದು, 18 ವರ್ಷ ಮೇಲ್ಪಟ್ಟವರಿಗೆ ಸುಲಭವಾಗಿ ಲಸಿಕೆ ದೊರಕಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ವಿವಿಧ ರೂಪದಲ್ಲಿ ಮಗ್ಗಲು ಬದಲಾ ಯಿಸುತ್ತಿರುವ ಕೊರೊನಾ ಸೋಂಕು ದೇಹದ ಯಾವ ಅಂಗಾಂಗದ ಮೇಲೆ ದುಷ್ಪರಿಣಾಮ ಬೀರಿ ಜೀವ ಹಾನಿ ಮಾಡು ವುದು ಎಂಬುದನ್ನು ಸುಲಭವಾಗಿ ಪತ್ತೆ ಮಾಡುವುದು ಕಷ್ಟ ಸಾಧ್ಯವಾಗುತ್ತಿ ರುವುದರಿಂದ ಲಸಿಕೆ ಹಾಕುವುದೇ ಅಂತಿಮ ಮಾರ್ಗವಾಗಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಾ ದ್ಯಂತ ಮನೆ ಬಾಗಿಲಿಗೆ ಲಸಿಕೆ ಹಾಕುವ ಅಭಿಯಾನ ಕೈಗೊಂಡಿರುವುದು ಲಸಿಕಾ ಅಭಿಯಾನದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಲಸಿಕೆ ಪಡೆಯಲು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದ ಜನರ ಮನಸ್ಥಿತಿ ಇತ್ತೀಚೆಗೆ ಬದಲಾಗಿದ್ದು, ಅವಧಿ ಮುಗಿದಿದ್ದರೂ ಎರಡನೇ ಡೋಸ್ ಪಡೆಯಲು ಹಲವು ಮಂದಿ ಮುಂದೆ ಬಂದಿರಲಿಲ್ಲ. ಹೀಗಾಗಿ ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲೇ ಒಂದು ಲಕ್ಷ ಮಂದಿ ಸೇರಿದಂತೆ ಜಿಲ್ಲೆಯಲ್ಲಿ ಎರಡು ಲಕ್ಷ ಮಂದಿ ಮೊದಲ ಡೋಸ್ ಪಡೆದು 84 ದಿನ ಆಗಿದ್ದರೂ ಎರಡನೇ ಡೋಸ್ ಪಡೆಯಲು ಬಂದಿರಲಿಲ್ಲ. ಇದನ್ನು ಮನಗಂಡು ಮನೆ ಬಾಗಿಲಿಗೆ ಲಸಿಕೆ ಹಾಗೂ ಜನನಿಬಿಡ ಪ್ರದೇಶದಲ್ಲಿ ಮೊಬೈಲ್ ಯುನಿಟ್ ಮೂಲಕ ಲಸಿಕೆ ಹಾಕಲು ವಿಶೇಷ ಅಭಿಯಾನ ಆರಂಭಿಸಲಾಗಿತ್ತು. ಇದರಿಂದ ಲಸಿಕೆ ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಸುಧಾರಣೆ ಕಾಣುತ್ತಿದೆ.

ಏಳನೆ ಸ್ಥಾನ: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಹಾಕಲು 18 ವರ್ಷ ಮೇಲ್ಪಟ್ಟ 24,38,000 ಮಂದಿಯನ್ನು ಗುರುತಿಸಲಾಗಿತ್ತು. ಅದರಲ್ಲಿ ಈಗಾಗಲೇ ಶೇ.96ರಷ್ಟು 23,47,918 ಮಂದಿಗೆ ಮೊದಲ ಡೋಸ್ ನೀಡಲಾಗಿದೆ. ಅಲ್ಲದೆ, ಶೇ.76ರ ಪ್ರಮಾಣದಲ್ಲಿ 18,54,816 ಮಂದಿಗೆ ಎರಡನೇ ಡೋಸ್ ಹಾಕಲಾಗಿದೆ. ಇನ್ನು 90,082 ಮಂದಿಗೆ ಮೊದಲ ಡೋಸ್ ನೀಡಬೇಕಾಗಿದೆ. 5,83,188 ಮಂದಿ ಇಂದಿಗೂ ಎರಡನೇ ಡೋಸ್ ಪಡೆಯ ಬೇಕಾಗಿದೆ. ಆದರೂ ರಾಜ್ಯದಲ್ಲಿ ಮೈಸೂರು ಜಿಲ್ಲೆ ಲಸಿಕಾ ಅಭಿಯಾನದಲ್ಲಿ ಏಳನೇ ಸ್ಥಾನ ಪಡೆದಿದೆ. ಬೆಂಗಳೂರು ನಗರ ಮೊದಲ ಸ್ಥಾನ ಪಡೆದಿದ್ದರೆ, ಕೊಡಗು ಎರಡನೇ ಸ್ಥಾನ, ಮಂಡ್ಯ ಮೂರನೇ ಸ್ಥಾನ, ಚಾಮ ರಾಜನಗರ 18ನೇ ಸ್ಥಾನ ಪಡೆದಿದ್ದರೆ, ಗುಲ್ಪರ್ಗಾ ಕೊನೆಯ(31) ಸ್ಥಾನ ಪಡೆದಿದೆ.
ಮೈಸೂರು ನಗರದಲ್ಲಿ 65 ಮೊಬೈಲ್ ಯುನಿಟ್: ಮೈಸೂರು ನಗರ ಪಾಲಿಕೆ ಸಹಕಾರದಿಂದ ಪಾಲಿಕೆಯ 65 ವಾರ್ಡ್ ಗಳಲ್ಲೂ ಲಸಿಕೆ ಹಾಕಲು ತಲಾ ಒಂದೊಂದು ಮೊಬೈಲ್ ಯೂನಿಟ್ ಸಜ್ಜುಗೊಳಿಸಲಾಗಿದೆ. ಇದು ಮಾತ್ರವಲ್ಲದೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ಹಾಕ ಲಾಗುತ್ತಿದೆ. ಒಂದೊಂದು ಯೂನಿಟ್‍ನಲ್ಲಿ ಲಸಿಕೆ ಹಾಕಲು ಇಬ್ಬರು ಸಿಬ್ಬಂದಿ, ಸ್ಟಾಟಿಸ್ಟಿಕ್ಸ್ ಸಿಬ್ಬಂದಿಗಳಿರುತ್ತಾರೆ. ಇದರೊ ಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯ ಕರ್ತರು, ಪಾಲಿಕೆ ಸಿಬ್ಬಂದಿ, ಪಾಲಿಕೆ ಸದಸ್ಯರು ಮನೆ ಮನೆ ಬಾಗಿಲಿಗೆ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆದು ಕೊಂಡು 3ನೇ ಅಲೆಯ ಅಪಾಯದಿಂದ ಪಾರಾಗುವಂತೆ ಡಿಹೆಚ್‍ಓ ಡಾ. ಕೆ.ಹೆಚ್.ಪ್ರಸಾದ್ ಸಲಹೆ ನೀಡಿದರು.

ಜಿಲ್ಲೆಯಲ್ಲಿ 400 ತಂಡ: ಮೈಸೂರು ಪಾಲಿಕೆ ವ್ಯಾಪ್ತಿಯೊಳಗೆ 65 ಮೊಬೈಲ್ ಯೂನಿಟ್ ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನ ನಡೆಸಲು ಒಟ್ಟು 400 ತಂಡ ರಚಿಸಲಾಗಿದೆ. ಅದರಲ್ಲಿ 130 ತಂಡ ಸಂಚಾರಿ ತಂಡವಾಗಿದೆ. ಜನ ನಿಬಿಡ ಪ್ರದೇಶಕ್ಕೆ ಹೋಗಿ ಯಾರು ಲಸಿಕೆ ಹಾಕಿಸಿಕೊಂಡಿಲ್ಲವೋ ಅಂತಹವರನ್ನು ಗುರುತಿಸಿ ಲಸಿಕೆ ಹಾಕಲಾಗುತ್ತದೆ. ಈ ಅಭಿಯಾನ ಸದುಪಯೋಗ ಪಡೆದು ಕೊಂಡು ಎಲ್ಲರೂ ಲಸಿಕೆ ಪಡೆದು ಕೊಳ್ಳಬೇಕು ಎಂದು ಮನವಿ ಮಾಡಿದರು.

ಚುರುಕಾಗಿದೆ: ಕಳೆದ ಎರಡು ತಿಂಗಳ ಹಿಂದೆ ಲಸಿಕೆ ಕೊಡುತ್ತೇವೆ ಎಂದರೂ ಜನ ಹಿಂದೇಟು ಹಾಕುತ್ತಿದ್ದರು. ಒಮಿಕ್ರಾನ್ ನಿಂದಾಗಿ ಇದೀಗ ಜನರಲ್ಲಿ ಲಸಿಕೆ ಮಹತ್ವದ ಅರಿವಾಗುತ್ತಿದೆ. ಕಳೆದ ಒಂದು ವಾರದಿಂದ ಲಸಿಕಾ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿಂದೆ ದಿನಕ್ಕೆ 5 ಮಂದಿ ಮಾತ್ರ ಲಸಿಕೆ ಪಡೆಯುತ್ತಿದ್ದರು. ಇದೀಗ ದಿನಕ್ಕೆ 20 ಸಾವಿರಕ್ಕೂ ಹೆಚ್ಚಿನ ಮಂದಿ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಇನ್ನಷ್ಟು ಮಂದಿ ಲಸಿಕೆ ಪಡೆದುಕೊಳ್ಳಬೇಕು. ಎಲ್ಲಾ ಕೇಂದ್ರಗಳಲ್ಲೂ ಲಸಿಕೆ ದಾಸ್ತಾನು ಇಡಲಾಗಿದೆ. ಯಾವುದೇ ಕಾರಣಕ್ಕೂ ಮೈಮರೆಯದಂತೆ ಸಲಹೆ ನೀಡಿದರು.

Translate »