ದೃಶ್ಯ ಮಾಧ್ಯಮ ವೀಕ್ಷಕರಲ್ಲಿ ಸಾಹಿತ್ಯಾಸಕ್ತಿ ಕುಂದುತ್ತಿದೆ
ಮೈಸೂರು

ದೃಶ್ಯ ಮಾಧ್ಯಮ ವೀಕ್ಷಕರಲ್ಲಿ ಸಾಹಿತ್ಯಾಸಕ್ತಿ ಕುಂದುತ್ತಿದೆ

December 20, 2021

ಮೈಸೂರು,ಡಿ.19(ಪಿಎಂ)- ದೃಶ್ಯ ಮಾಧ್ಯಮದ ವೀಕ್ಷಕರಲ್ಲಿ ಹಿಂದೆ ಇದ್ದಂತಹ ಸಾಹಿತ್ಯಾಸಕ್ತಿ ಈಗ ಕಳೆದು ಹೋಗುತ್ತಿದೆ. ಅದರಲ್ಲೂ ಓಟಿಟಿಯಲ್ಲಿ (ಓವರ್ ದಿ ಟಾಪ್) ಸಾಹಿತ್ಯಾಸಕ್ತಿ ಪ್ರೇಕ್ಷಕರಲ್ಲಿ ಇಲ್ಲವಾಗುತ್ತಿದೆ… ಪೌರಾಣಿಕ ಸಿನಿಮಾ ಡಬ್ ಮಾಡಿದರೆ ದೇಶದ ಯಾವುದೇ ಭಾಷಿಕರಿಗಾದರೂ ಮುಟ್ಟುತ್ತವೆ. ಆದರೆ ಸಾಮಾಜಿಕ ಹಿನ್ನೆಲೆಯಲ್ಲಿ ವಿಷಯಗಳಲ್ಲಿ ಡಬ್ ಪರಿಣಾಮಕಾರಿ ಆಗದು…

ಕಿರುತೆರೆಯಲ್ಲಿ ನಟನೆ-ನಿರ್ದೇಶನದಲ್ಲಿ ತಮ್ಮದೇ ಛಾಪು ಮೂಡಿಸಿರುವ ಟಿ.ಎನ್. ಸೀತಾರಾಮ್ ಮತ್ತು ಪುಕ್ಸಟ್ಟೆ ಲೈಫ್ ಪುರ ಸೋತ್ತೇ ಇಲ್ಲ ಚಿತ್ರದ ನಿರ್ದೇಶಕ ಅರವಿಂದ ಕುಪ್ಲೀಕರ್ ಅವರು ದೃಶ್ಯ ಮಾಧ್ಯಮಕ್ಕೆ ಸಂಬಂ ಧಿಸಿದಂತೆ ತಮ್ಮ ಅನುಭವಕ್ಕೆ ಬಂದ ಹಲವು ವಿಚಾರಗಳನ್ನು ಹೀಗೆ ಹಂಚಿಕೊಂಡರು.

ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ಜಂಟಿ ಆಶ್ರಯದಲ್ಲಿ `ಹಿರಿತೆರೆ, ಕಿರಿತೆರೆ ಮತ್ತು ಓಟಿಟಿ (ಓವರ್ ದಿ ಟಾಪ್/ಅಂತರ್ಜಾಲ, ಅಪ್ಲಿಕೇಶನ್ ಮೂಲಕ ವೀಕ್ಷಿಸುವುದು) ಮಾಧ್ಯಮದಲ್ಲಿ ಹೊಸ ವೀಕ್ಷಕರ ಮೂಲಕ ಆಗುತ್ತಿರುವ ಬದಲಾವಣೆ ಗಳು’ ಕುರಿತು ಪತ್ರಕರ್ತೆ, ರಂಗಕರ್ಮಿ ಪ್ರೀತಿ ನಾಗರಾಜ್ ಅವರು ನಡೆಸಿಕೊಟ್ಟ ಸಂವಾದ ಕಾರ್ಯಕ್ರಮದಲ್ಲಿ (ಮೈಸೂರು ಲಿಟರರಿ ಫೆಸ್ಟಿವಲ್ ಭಾಗವಾಗಿ ನಡೆದ ಕಾರ್ಯಕ್ರಮ) ಅವರು ಮಾತನಾಡಿದರು.

ಟಿ.ಎನ್.ಸೀತಾರಾಮ್ ಮಾತನಾಡಿ, 1993 ರಲ್ಲಿ ಕಿರುತೆರೆಗೆ ಆಕಸ್ಮಿಕವಾಗಿ ಬಂದು ಈವರೆಗೆ ಒಟ್ಟಾರೆ 6,600 ಸಂಚಿಕೆ ಮಾಡಿ ದ್ದೇನೆ. ಈ ಪೈಕಿ ಹೆಚ್ಚಿನವು ಯಶಸ್ವಿಯಾಗಿವೆ. ನನಗೆ ಕಾದಂಬರಿ ಆಧಾರಿತ ಧಾರಾವಾಹಿ ನಿರ್ದೇಶನಕ್ಕೆ ಹೆಚ್ಚು ಆಸಕ್ತಿ ಇರಲಿಲ್ಲ. ದೃಶ್ಯ ಮಾಧ್ಯಮ ಸೇರಿ ಯಾವುದೇ ಮಾಧ್ಯಮ ಕ್ಕಾದರೂ ಸ್ಥಿತಿಯಿಂದ ಗತಿಗೆ ಹೋಗುವಂತೆ ಕಥೆ ಸಿದ್ಧಪಡಿಸಿಕೊಳ್ಳುತ್ತಿದ್ದೆ. ಮಧ್ಯಮ ವರ್ಗದ ಅಸಹಾಯಕ ಜಗತ್ತು ಅನಾವರÀಣಗೊಳಿ ಸುವಂತಹ ಕಥೆ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ನಾನೂ ಮಧ್ಯಮ ವರ್ಗದ ನೋವು ಅನು ಭವಿಸಿದ್ದ ಹಿನ್ನೆಲೆಯಲ್ಲಿ ಈ ಕಥೆಗಳ ನಿರ್ದೇಶನ ನನಗೆ ಸುಲಭವಾಯಿತು ಎಂದರು.

ಅನುಚಿತ ಮತ್ತು ಅಶ್ಲೀಲತೆ ನುಸುಳಬಾರ ದೆಂದು ಸ್ಕ್ರಿಪ್ಟ್ ಮತ್ತು ಎಡಿಟಿಂಗ್ ಬಗ್ಗೆ ವಿಶೇಷ ಕಾಳಜಿ ವಹಿಸಿ, ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಬಹುತೇಕ ಚಾನಲ್‍ಗಳಿಗೆ ವ್ಯವಹಾರ ಮುಖ್ಯ ವಾಗಿದ್ದ ಹಿನ್ನೆಲೆಯಲ್ಲಿ ಭಾವನೆಗಳೇ ದುಡ್ಡು ಹುಟ್ಟಿಸುವಂತ ಕಥೆಗಳನ್ನು ತೆರೆ ಮೇಲೆ ತರಲು ಜಾಣ ಸರ್ಕಸ್ ಅನ್ನು ಅನೇಕ ಬಾರಿ ಮಾಡ ಬೇಕಾಯಿತು. ಹಾಗಾಗಿ ಕಥೆಗಳನ್ನು ಆಯ್ಕೆ ಮಾಡು ವುದೇ ಇಂದು ಕಷ್ಟವಾಗಿದೆ ಎಂದು ಹೇಳಿದರು.

ನಾನು ಸಿನಿಮಾಗೆ ಬಂದಾಗ ಒಂದೊಂದು ತಲೆಮಾರು ಬದಲಾವಣೆ 25 ವರ್ಷ ಕ್ಕೊಮ್ಮೆ ಆಗುತ್ತಿದ್ದರೆ, ಈಗ ಅದರ ವೇಗ ಹೆಚ್ಚಾಗಿದೆ. `ಮಾಯಾಮೃಗ’ ಮಾಡಿ `ಮುಕ್ತ’ ಮಾಡುವ ವೇಳೆಗೆ ಪ್ರೇಕ್ಷಕರ ಚಿಂತನೆಯೇ ಬೇರೆಯಾಗಿತ್ತು. ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ `ಮತದಾನ’ ಕಾದಂಬರಿ ಆಧರಿಸಿದ ಅದೇ ಹೆಸರಿನ ಚಿತ್ರ ವನ್ನು ಮೊದಲ ಬಾರಿಗೆ ನಿರ್ದೇಶನ ಮಾಡಿದೆ. ಇದು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುವವರ ಕಥೆ ಒಳಗೊಂಡಿತ್ತು. ಹೀಗೆ, ಸೋತವರ ಕಥೆಯನ್ನು ಸಿನಿಮಾ ಮಾಡಿ ರಾಷ್ಟ್ರ ಪ್ರಶಸ್ತಿ ಗೆಲ್ಲುವಂತಾಯಿತು ಎಂದು ಹಾಸ್ಯ ಚಟಾಕಿ ಹಾರಿಸಿದರು.

ಪೌರಾಣಿಕ ಸಿನಿಮಾ ಡಬ್ ಮಾಡಿದರೆ ದೇಶದ ಯಾವುದೇ ಭಾಷಿಕರಿಗಾದರೂ ಮುಟ್ಟುತ್ತವೆ. ಆದರೆ ಸಾಮಾಜಿಕ ಹಿನ್ನೆಲೆ ಯಲ್ಲಿ ವಿಷಯಗಳಲ್ಲಿ ಡಬ್ ಪರಿಣಾಮಕಾರಿ ಆಗದು. ಜೊತೆಗೆ ಕೋವಿಡ್ ಹಿನ್ನೆಲೆ ಯಲ್ಲಿ ಚಿತ್ರಮಂದಿರಗಳಿಗೆ ಬದಲಾಗಿ ಮನೆಯಲ್ಲೇ ನೋಡಬೇಕೆಂಬ ಮನೋಭಾವ ಹೆಚ್ಚಾಗುತ್ತಿದೆ ಎಂದರು. ಟ್ರಸ್ಟ್ ಮತ್ತು ಬುಕ್ ಕ್ಲಬ್ ಸಂಸ್ಥಾಪಕ ಟ್ರಸ್ಟಿ ಶುಭಾ ಸಂಜಯ್ ಅರಸ್ ಮತ್ತಿತರರು ಹಾಜರಿದ್ದರು.

Translate »