ಗೋಕಾಕ್ ಮಾದರಿ ಹೋರಾಟಕ್ಕೆ ಶಿವರಾಜ್‍ಕುಮಾರ್ ಅಥವಾ ಬೇರೆ ಯಾರಾದರೂ ನೇತೃತ್ವ ವಹಿಸುವುದು ಸೂಕ್ತ
ಮೈಸೂರು

ಗೋಕಾಕ್ ಮಾದರಿ ಹೋರಾಟಕ್ಕೆ ಶಿವರಾಜ್‍ಕುಮಾರ್ ಅಥವಾ ಬೇರೆ ಯಾರಾದರೂ ನೇತೃತ್ವ ವಹಿಸುವುದು ಸೂಕ್ತ

December 20, 2021

ಮೈಸೂರು, ಡಿ.19(ಆರ್‍ಕೆಬಿ)- ಕನ್ನಡಿಗರ ಮೇಲೆ ಹಿಂದಿ, ಸಂಸ್ಕøತವನ್ನು ಬಲವಂತ ವಾಗಿ ಹೇರಲಾಗುತ್ತಿದೆ. ಕನ್ನಡಿ ಗರ ಸ್ವಾಭಿ ಮಾನದ ಸಂಕೇತವಾದ ಕನ್ನಡ ಧ್ವಜವನ್ನು ಸುಡಲಾಗಿದೆ. ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕನ್ನಡ ನೆಲ, ಜಲ, ಭಾಷೆ ಉಳಿವಿಗಾಗಿ ಗೋಕಾಕ್ ಮಾದರಿ ಹೋರಾಟ ಅಗತ್ಯ. ಅದಕ್ಕಾಗಿ ಶಿವರಾಜ್‍ಕುಮಾರ್ ಅಥವಾ ಯಾರಾದರೂ ಹೋರಾಟದ ನೇತೃತ್ವ ವಹಿಸಿಕೊಳ್ಳುವುದು ಸೂಕ್ತ ಎಂದು ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಇಂದಿಲ್ಲಿ ತಿಳಿಸಿದ್ದಾರೆ.

ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಬಳಿಯ ರಾಜೇಂದ್ರ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕನ್ನಡ ಚಳವಳಿ ಕೇಂದ್ರ ಮಂಡಲಿ ಮೈಸೂರು ಘಟಕ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಧ್ವಜ ಸುಟ್ಟ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹೇಳಿಕೆಗಳನ್ನು ನೀಡುತ್ತಿರುವÀ ನಟ, ನಟಿಯರ ಬಗ್ಗೆ ಆಕ್ಷೇಪ ವ್ಯಕ್ತಪಡಿ ಸಿದ ಅವರು, ಕೇವಲ ಟ್ವಿಟ್ಟರ್‍ಗಳಲ್ಲಿ ಹೇಳಿಕೆ ನೀಡುವುದರಿಂದ ಯಾವುದೇ ಪ್ರಯೋಜನ ವಿಲ್ಲ. ಟ್ವಿಟ್ಟರ್ ಹೇಳಿಕೆ ನೀಡುತ್ತಿರುವವರು ಬೀದಿಗಿಳಿದು ಹೋರಾಟ ನಡೆಸಬೇಕು. ಎಲ್ಲಾ ಕ್ಷೇತ್ರದವರೂ ಒಟ್ಟಾಗಿ ಗೋಕಾಕ್ ಮಾದರಿ ಹೋರಾಟ ರೂಪಿಸಬೇಕು. ಹಾಗಾ ದರೆ ಮಾತ್ರ ಕನ್ನಡ ಉಳಿಸಿ, ಬೆಳೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಇಂದು ಕನ್ನಡ ಹೋರಾಟಕ್ಕೆ ನಾಯಕತ್ವದ ಕೊರತೆ ಇರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಅವರು, ಗೋಕಾಕ್ ಮಾದರಿ ಹೋರಾಟ ನಡೆಸಲು ನಟ ಡಾ.ಶಿವರಾಜ್ ಕುಮಾರ್ ಅಥವಾ ಬೇರೆ ಯಾರಾದರೂ ಹೋರಾಟದ ನೇತೃತ್ವ ವಹಿಸಬೇಕು ಎಂದು ಮನವಿ ಮಾಡಿದರು. 80ರ ದಶಕದಲ್ಲಿ ಡಾ.ರಾಜ್‍ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳವಳಿಯಲ್ಲಿ ಬುದ್ಧಿ ಜೀವಿಗಳು, ಬರಹಗಾರರು, ಸಿನಿಮಾ ನಟರು ಸೇರಿದಂತೆ ಲಕ್ಷಾಂತರ ಮಂದಿ ಪ್ರತಿದಿನ ಹೋರಾಟದಲ್ಲಿ ಭಾಗವಹಿಸು ತ್ತಿದ್ದರು. ಅಂಥದೇ ಹೋರಾಟ ಇಂದು ಕನ್ನಡಕ್ಕೆ ಅನಿವಾರ್ಯವಾಗಿದೆ ಎಂದರು.

ಇಂದಿನ ಯುವಕರು ಓದುವುದೇ ಕಡಿಮೆ ಯಾಗಿದೆ. ನಾವಿಂದು ಯುವಕರನ್ನು ತಲುಪ ಬೇಕಿದೆ. ಹೀಗಾಗಿ ಮಾ.8ರಂದು ನನ್ನ ತಂದೆ ಪಿ.ಲಂಕೇಶ್ ಅವರ ಜನ್ಮದಿನ. 20 ವರ್ಷಗಳ ಕಾಲ ಅವರು `ಲಂಕೇಶ್ ಪತ್ರಿಕೆ’ ಯಲ್ಲಿ ಬರೆದ ಪ್ರತಿಯೊಂದು ಲೇಖನವನ್ನು ಪ್ರಚಾರ ಮಾಡುವ ಉದ್ದೇಶ ಇಟ್ಟುಕೊಂಡಿ ದ್ದೇನೆ. ಸಾಮಾಜಿಕ ಜಾಲತಾಣ, ಡಿಜಿಟಲ್ ಮೀಡಿಯಾ ಮೂಲಕ ಲಂಕೇಶ್ ಅವರ ಲೇಖನಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಪ್ರತೀ ವಾರ ಒಂದೊಂದು ಲೇಖನ ಹಾಕಲಿ ದ್ದೇವೆ. ಬರೀ ಟ್ವೀಟ್‍ನಿಂದ ಕನ್ನಡ ಉಳಿಯು ವುದಿಲ್ಲ. ಬೀದಿಗಿಳಿದು ಹೋರಾಟ ನಡೆಸು ವುದು ಅಗತ್ಯ ಎಂದು ಇಂದ್ರಜಿತ್ ಹೇಳಿದರು.

ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕೆ.ಆರ್.ಆಸ್ಪತ್ರೆಯ ನಿವೃತ್ತ ಶುಶ್ರೂಷಕ ಅಧಿಕಾರಿ ಶಿವಮ್ಮ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಳವರ ಹುಂಡಿ ಸಿದ್ದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮು, ಕನ್ನಡ ಚಳವಳಿ ಕೇಂದ್ರ ಮಂಡಲಿ ಮೈಸೂರು ಘಟಕದ ಅಧ್ಯಕ್ಷ ಮೂಗೂರು ನಂಜುಂಡ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Translate »