ಮೈಸೂರು ಪೊಲೀಸ್ ಶ್ವಾನದಳದ `ಸೀಮಾ’ ಇನ್ನಿಲ್ಲ
ಮೈಸೂರು

ಮೈಸೂರು ಪೊಲೀಸ್ ಶ್ವಾನದಳದ `ಸೀಮಾ’ ಇನ್ನಿಲ್ಲ

January 21, 2021

ಮೈಸೂರು, ಜ.20(ವೈಡಿಎಸ್)- ಮೈಸೂರು ನಗರ ಪೊಲೀಸ್ ಘಟಕದ ಶ್ವಾನದಳದಲ್ಲಿ ಸ್ಫೋಟಕ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ `ಸೀಮಾ’ ಎಂಬ ಶ್ವಾನ ಬುಧವಾರ ಸಾವನ್ನಪ್ಪಿದೆ. 2009ರ ನ.14 ರಿಂದ ಸೂಕ್ತ ತರಬೇತಿಯೊಂದಿಗೆ ಇಲಾ ಖೆಗೆ ಸೇರಿದ ಸೀಮಾ, ಹಲವು ಡಾಗ್ ಶೋ, ಮಾಕ್ ಡ್ರಿಲ್(ಅಣುಕು ಕಾರ್ಯಾ ಚರಣೆ)ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಗಣ್ಯ ವ್ಯಕ್ತಿಗಳ ಭದ್ರತೆ ಮತ್ತು ನಾಡಹಬ್ಬದ ಭದ್ರತೆ ಬಂದೋಬಸ್ತ್‍ಗಳ ಕರ್ತವ್ಯದ ಸಂದರ್ಭ ಎಎಸ್‍ಸಿ ತಂಡದೊಂ ದಿಗೆ ಉತ್ತಮ ಕರ್ತವ್ಯ ನಿರ್ವಹಿಸಿತ್ತು. 11 ವರ್ಷ 2 ತಿಂಗಳು ಪೊಲೀಸ್ ಇಲಾಖೆ ಯಲ್ಲಿ ಸೇವೆ ಸಲ್ಲಿಸಿದೆ. ವಯೋಸಹಜ ಖಾಯಿಲೆಯಿಂದ ಬುಧವಾರ ಸಾವನ್ನಪ್ಪಿದೆ.

2016ನೇ ಸಾಲಿನಲ್ಲಿ ಮೈಸೂರಿನ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಬಾಂಬ್ ಸ್ಫೋಟದ ಸಂದರ್ಭ `ಸೀಮಾ’ ಪರಿಣಾಮ ಕಾರಿಯಾಗಿ ಕಾರ್ಯನಿರ್ವಹಿಸಿತ್ತು. ಜಿ. ಮಂಜು ಅದರ ತರಬೇತುದಾರರಾಗಿದ್ದರು.

ಡಿಸಿಪಿ ಸಿಎಆರ್ ಕೇಂದ್ರ ಸ್ಥಾನದ ಶಿವ ರಾಜು ಅವರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನ ಗಳನ್ನು ನೆರವೇರಿಸಲಾಯಿತು. ಈ ವೇಳೆ ಎಸಿಪಿ ಸುದರ್ಶನ್, ಶ್ವಾನದಳದ ಉಸ್ತು ವಾರಿ ಅಧಿಕಾರಿ ಕೆ.ಎಂ.ಮೂರ್ತಿ, ಉಪ ನಿರೀಕ್ಷಕ ಸುರೇಶ್ ಹಾಗೂ ಶ್ವಾನದಳದ ಇತರೆ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು. `ಸೀಮಾ’ ಸಾವಿಗೆ ಶ್ವಾನದಳದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.

 

Translate »