ಆರ್‍ಟಿಓ ಪಶ್ಚಿಮ ಕಚೇರಿ ಸೇವೆಗಳಲ್ಲಿ ಅನಾನುಕೂಲ; ಆರೋಪ
ಮೈಸೂರು

ಆರ್‍ಟಿಓ ಪಶ್ಚಿಮ ಕಚೇರಿ ಸೇವೆಗಳಲ್ಲಿ ಅನಾನುಕೂಲ; ಆರೋಪ

January 21, 2021

ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘ ಪ್ರತಿಭಟನೆ
ಮೈಸೂರು,ಜ.20(ಪಿಎಂ)- ಮೈಸೂರು ಚಾಮರಾಜಪುರಂನಲ್ಲಿರುವ ಪಶ್ಚಿಮ ಪ್ರಾದೇ ಶಿಕ ಸಾರಿಗೆ ಕಚೇರಿಯಲ್ಲಿ (ಆರ್‍ಟಿಓ ಪಶ್ಚಿಮ) ಕಲಿಕಾ ಪರವಾನಗಿ ಪಡೆಯುವುದೂ ಸೇರಿ ದಂತೆ ಇನ್ನಿತರ ಕಾರ್ಯಗಳಲ್ಲಿ ಸಾಕಷ್ಟು ಅನಾನುಕೂಲ ಇದ್ದು, ಇದನ್ನು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘದ (ಆರ್‍ಟಿಓ ಮೈಸೂರು ಪಶ್ಚಿಮ) ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ವಾಣಿವಿಲಾಸ ರಸ್ತೆಯಲ್ಲಿರುವ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಈ ಸಾರಿಗೆ ಕಚೇರಿಗೆ ಸಂಬಂಧಿಸಿದಂತೆ ಕಲಿಕಾ ಪರವಾನಗಿ ಪಡೆಯಲು 10 ಕಿ.ಮೀ. ದೂರದ ಪೂರ್ವ ಕಚೇರಿ ಇ-ಟ್ರ್ಯಾಕ್‍ಗೆ (ವಿದ್ಯುನ್ಮಾನ ಚಾಲನಾ ಪರೀಕ್ಷಾ ಪಥ) ಹೋಗಿ ಚಾಲನೆ ಪರೀಕ್ಷೆ ಎದುರಿಸಬೇಕಾ ಗಿದೆ. ಪಶ್ಚಿಮ ಕಚೇರಿಯ ಇ-ಟ್ರ್ಯಾಕ್ ಆಗು ವವರೆಗೆ ಈ ಹಿಂದಿನ ವ್ಯವಸ್ಥೆಯನ್ನೇ ಮುಂದುವರೆಸಬೇಕು. ಜೊತೆಗೆ ಪೂರ್ವ ಕಚೇರಿಯ ಇ-ಟ್ರ್ಯಾಕ್‍ನಲ್ಲಿ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಪ್ರಾಥ ಮಿಕ ಆರೋಗ್ಯ ಕೇಂದ್ರವಿಲ್ಲ. ಶೌಚಾಲಯ ಇದ್ದರೂ ಸ್ವಚ್ಛತೆ ಇಲ್ಲ ಎಂದು ದೂರಿದರು.

ಅಭ್ಯರ್ಥಿಯೊಬ್ಬರು ಬೆಳಗ್ಗೆ 9ಕ್ಕೆ ಪಶ್ಚಿಮ ಕಚೇರಿಗೆ ಬಂದು ಶುಲ್ಕ ಪಾವತಿಸಿ, ಬಳಿಕ ಫೋಟೋ (ಬಯೋಮೆಟ್ರಿಕ್) ತೆಗೆಸಿ, ದಾಖಲೆ ಗಳ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸು ವುದಕ್ಕೆ ಅರ್ಧ ದಿನವೇ ಬೇಕಾಗುತ್ತಿದೆ. ಇದಾದ ಬಳಿಕ ಪೂರ್ವ ಕಚೇರಿಯ ಇ-ಟ್ರ್ಯಾಕ್‍ಗೆ ಚಾಲನಾ ಪರೀಕ್ಷೆಗೆ ಹೋಗುವುದು ಕಷ್ಟವಾಗು ತ್ತಿದೆ. ಇದು ಕೇವಲ ಡ್ರೈವಿಂಗ್ ಸ್ಕೂಲ್ ಅಭ್ಯರ್ಥಿಗಳಿಗೆ ಮಾತ್ರ ಆಗುತ್ತಿರುವ ಸಮಸ್ಯೆ ಯಲ್ಲ. ಎಲ್ಲಾ ನಾಗರಿಕರೂ ತೊಂದರೆ ಅನು ಭವಿಸುವಂತಾಗಿದೆ. ಕೂಡಲೇ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು. ಭಾರೀ ವಾಹನಾ ಚಾಲನಾ ಪರವಾನಗಿ ನವೀಕರಣ ಸಂಬಂಧ ಪುನ ಶ್ಚೇತನ ಕಾರ್ಯಾಗಾರ ಪತ್ರವನ್ನು ಸಲ್ಲಿಸಲು ಸಾರಿಗೆ ಆಯುಕ್ತರು ಸುತ್ತೋಲೆ ಹೊರಡಿಸಿ ದ್ದಾರೆ. ಆದರೆ ಸರ್ಕಾರ 2020ರ ಫೆ.1 ರಿಂದ ಪರವಾನಗಿ ನವೀಕರಣ ಮಾಡಿಸ ಬೇಕಿರುವ ಸಂಬಂಧ ಅವಧಿಯನ್ನು ಮಾ.31 ರವರೆಗೆ ವಿಸ್ತರಿಸಿದೆ. ಹೀಗಾಗಿ ಭಾರೀ ವಾಹನಾ ಚಾಲನಾ ಪರವಾನಗಿ ನವೀಕರಣ ಸಂಬಂಧ ಹೊರಡಿಸಿರುವ ಸುತ್ತೋಲೆ ಕೈಬಿಡಬೇಕು ಎಂದು ಆಗ್ರಹಿಸಿದರು. ಸಂಘದ ಅಧ್ಯಕ್ಷೆ ಎಸ್.ಎನ್. ವೀಣಾ, ವಿವಿಧ ಡ್ರೈವಿಂಗ್ ಸ್ಕೂಲ್ ಗಳ ಮಾಲೀಕರಾದ ತೇಜಸ್, ರಾಜು, ಸಂತೋಷ್, ಗೋಪಾಲ್, ರಮೇಶ್, ರಾಘವೇಂದ್ರ, ಬಾಬು ರವಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »