ಮೈಸೂರು ಬೀದಿಬದಿ ವರ್ತಕರಿಗೆ ಬಿಜೆಪಿ ವ್ಯಾಪಾರಿಗಳ ಪ್ರಕೋಷ್ಠದ ಸನ್ಮಾನ
ಮೈಸೂರು

ಮೈಸೂರು ಬೀದಿಬದಿ ವರ್ತಕರಿಗೆ ಬಿಜೆಪಿ ವ್ಯಾಪಾರಿಗಳ ಪ್ರಕೋಷ್ಠದ ಸನ್ಮಾನ

January 21, 2021

ಮೈಸೂರು,ಜ.20(ಎಂಟಿವೈ)-`ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನ’ ಆಚರಣೆ ಅಂಗವಾಗಿ ಬಿಜೆಪಿ ವ್ಯಾಪಾರಿಗಳ ಪ್ರಕೋಷ್ಠದಿಂದ ಮೈಸೂ ರಿನಲ್ಲಿ ಬುಧವಾರ ಬೀದಿಬದಿ ವ್ಯಾಪಾರಿಗಳಲ್ಲಿ 6 ಮಂದಿಯನ್ನು ಸನ್ಮಾನಿಸಲಾಯಿತು.

ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಸಚಿನ್ ರಾಜೇಂದ್ರ ಭವನದಲ್ಲಿ ನಡೆದ ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನಾಚರಣೆಯಲ್ಲಿ ಹೂವಿನ ವ್ಯಾಪಾರಿ ಎಂ.ಆನಂದಕುಮಾರ್, ನಿಂಬೆಹಣ್ಣು ವ್ಯಾಪಾರಿ ವಿಶೇಷಚೇತನ ನಾಗರಾಜು, ಚುರುಮುರಿ ವ್ಯಾಪಾರಿ ವೆಂಕಟರಮಣ, ವಿಳ್ಳೇದೆಲೆ ವ್ಯಾಪಾರಿ ಪುಟ್ಟಮ್ಮ, ತರಕಾರಿ ವ್ಯಾಪಾರಿ ಭಾಗ್ಯಮ್ಮ, ಬೀದಿಬದಿ ಸ್ವಉದ್ಯೋಗ ನಡೆಸುತ್ತಿರುವ ಪದವೀಧರ ರಾಘ ವೇಂದ್ರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಮಾತನಾಡಿ, ರಸ್ತೆಬದಿ ವ್ಯಾಪಾರಿ ಗಳಿಗೆ ಬಿಜೆಪಿ ಸರ್ಕಾರ ಆರ್ಥಿಕ ಸಹಾಯ ನೀಡಿದೆ. ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿಯಿಂದ ಸಾಲ ನೀಡಲಾಗಿದೆ. ತಳ ಮಟ್ಟದ ಜನರ ಪರವಾಗಿ ಬಿಜೆಪಿ ಸರ್ಕಾರ ಇದೆ ಎಂದರು.

ಮೈಸೂರಿನಲ್ಲಿ ಪ್ರಕೋಷ್ಠದಿಂದ ಶಿಫಾರಸು ಮಾಡಿದ 20 ವ್ಯಾಪಾರಿಗಳÀಲ್ಲಿ 17 ಮಂದಿಗೆ ಸಾಲ ಮಂಜೂರಾಗಿದೆ. ಫೆಬ್ರವರಿಯಲ್ಲಿ ಪಕ್ಷದ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿ ಜನಸ್ನೇಹಿ ಕಚೇರಿಯಾಗಿಸಲಾಗುವುದು ಎಂದರು. ವ್ಯಾಪಾರಿಗಳ ಪ್ರಕೋಷ್ಠದ ಸಂಚಾಲಕ ಆರ್. ಪರಮೇಶ್ ಮಾತನಾಡಿ, ರಸ್ತೆಬದಿ ವ್ಯಾಪಾರಿಗಳಿಗೆ ಪೆÇ್ರೀತ್ಸಾಹ ನೀಡುತ್ತಿರುವ ಏಕೈಕ ಪಕ್ಷ ಬಿಜೆಪಿ. ರಸ್ತೆ ಬದಿ ವ್ಯಾಪಾರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಿ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿದ್ದಾರೆ ಎಂಬುದಕ್ಕೆ ನಾನೇ ಉದಾಹರಣೆ. ರಸ್ತೆ ವ್ಯಾಪಾರಿ ಯೊಬ್ಬ ಪಾಲಿಕೆ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಆತ್ಮಸ್ಥೈರ್ಯವನ್ನು ಪಕ್ಷ ನೀಡಿದೆ ಎಂದು ಸ್ಮರಿಸಿದರು. ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಣೀಶ್ ಕುಮಾರ್, ವ್ಯಾಪಾರಿಗಳ ಪ್ರಕೋಷ್ಠದ ಉಸ್ತುವಾರಿಯಾದ ಪಾಲಿಕೆ ಸದಸ್ಯೆ ಸಿ.ವೇದಾವತಿ, ಪ್ರಕೋಷ್ಠದ ಸಹ ಸಂಚಾಲಕ ಆರ್.ಸೋಮ ಶೇಖರ್, ಮೃಗಾಲಯ ಪ್ರಾಧಿಕಾರ ಸದಸ್ಯ ಗೋಕುಲ ಗೋವರ್ಧನ್, ಬಿಜೆಪಿ ಮಾಜಿ ನಗರಾಧ್ಯಕ್ಷ ಶಿವ ಕುಮಾರ್, ಪಾಲಿಕೆ ಮಾಜಿ ಸದಸ್ಯ ಶ್ರೀರಾಮ್, ಪದಾಧಿಕಾರಿಗಳಾದ ಲೋಹಿತ್, ಅನು, ಅನಿತಾ, ಅನಂತರಾಮು, ಎನ್.ಸುರೇಂದ್ರ, ಶ್ರೀನಿವಾಸ್, ಎನ್. ಪ್ರದೀಪ್ ಕುಮಾರ್, ಗಿರಿಧರ್ ವಾಣೀಶ್, ಗಂಗಣ್ಣ, ಲಕ್ಷ್ಮೀ ಇನ್ನಿತರರು ಉಪಸ್ಥಿತರಿದ್ದರು.

Translate »