ಮೈಸೂರು ಪೊಲೀಸರಿಗೆ ‘ಮಹಾಮಂಡಳ’ದಿಂದ  ಎರಡು ಲಕ್ಷ ರೂ. ನಗದು ಬಹುಮಾನ-ಪ್ರಶಂಸೆ
ಮೈಸೂರು

ಮೈಸೂರು ಪೊಲೀಸರಿಗೆ ‘ಮಹಾಮಂಡಳ’ದಿಂದ ಎರಡು ಲಕ್ಷ ರೂ. ನಗದು ಬಹುಮಾನ-ಪ್ರಶಂಸೆ

September 1, 2021

ಮೈಸೂರು, ಆ.31(ಎಂಕೆ)- ಮೈಸೂ ರಿನ ಚಾಮುಂಡಿಬೆಟ್ಟದ ತಪ್ಪಲು ಪ್ರದೇಶ ದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂ ಹಿಕ ಅತ್ಯಾಚಾರ ಪ್ರಕರಣದ ಆರೋಪಿ ಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿದ ಪೊಲೀಸ್ ತಂಡಕ್ಕೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಮಂಗ ಳೂರಿನ ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ನೀಡಿದ 2 ಲಕ್ಷ ರೂ. ನಗದು ಬಹುಮಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅವರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಎಸ್.ಟಿ.ಸೋಮ ಶೇಖರ್, ಮೈಸೂರಿನಲ್ಲಿ ಅಪರಾಧವೆಸೆ ಗಿದರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನಮ್ಮ ಪೊಲೀಸರು ನೀಡಿ ದ್ದಾರೆ. ಮಂಗಳೂರಿಂದ ಬಂದಿರುವ ನವೋ ದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್‍ನ ಪದಾಧಿಕಾರಿಗಳು ಪೊಲೀಸರ ಸಾಹಸ ಕಾರ್ಯವನ್ನು ಮೆಚ್ಚಿ, 2 ಲಕ್ಷ ರೂ. ನಗದು ಬಹುಮಾನ ನೀಡಿದ್ದಾರೆ ಎಂದರು.

ಎರಡು ಪ್ರಕರಣಗಳ ತನಿಖೆ 10-15 ದಿನಗಳಾಗಬಹುದು ಎಂದುಕೊಂಡಿದ್ದೆವು. ಆದರೆ ಕೇವಲ ಎರಡ್ಮೂರು ದಿನದಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಮೈಸೂರು ಪೊಲೀಸರ ತಂಡ ಯಶಸ್ವಿಯಾಗಿದೆ. ಇದಕ್ಕಾಗಿ ಪ್ರತ್ಯೇಕವಾಗಿ ಅಭಿನಂದಿಸಿ ದ್ದೇನೆ. ಯಾವುದೇ ಕಾರಣಕ್ಕೂ ಪುಂಡರು ಮೈಸೂರಿಗೆ ಬಂದು ಅಪರಾಧ ಕೃತ್ಯವೆಸಗ ಬಾರದು ಎಂಬುದನ್ನು ಈ ಪ್ರಕರಣಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಐತಿ ಹಾಸಿಕ ಹಿನ್ನೆಲೆಯುಳ್ಳ ಮೈಸೂರು ನಗರ ದಲ್ಲಿ ಇನ್ನಷ್ಟು ಬಿಗಿಭದ್ರತೆಗೆ ಹಲವು ಕ್ರಮ ಗಳನ್ನು ಕೈಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸಿಪಿ ಪ್ರದೀಪ್ ಗುಂಟಿ, ಮಹಾ ಮಂಡಳ ನಿರ್ದೇಶಕರಾದ ವೈ.ಎನ್.ಶಂಕರೇಗೌಡ, ಆರ್.ಜಯರಾಮ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ರಾದ ದೇವಿಪ್ರಸಾದ್ ಶೆಟ್ಟಿ, ರಾಜ್ ಪೂಜಾರಿ, ಅಶೋಕ್ ಶೆಟ್ಟಿ, ಶಶಿಕುಮಾರ್ ರೈ, ಮಹೇಶ್ ಹೆಗಡೆ, ಸದಾಶಿವ ಉಳ್ಳಾಲ್, ಜಯಪ್ರಕಾಶ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು.

Translate »