ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಗುರಿಯಾಗಿಸಿ ಹಿಂಸಾಚಾರ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ
ಮೈಸೂರು

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಗುರಿಯಾಗಿಸಿ ಹಿಂಸಾಚಾರ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ

May 6, 2021

ಮೈಸೂರು,ಮೇ 5(ಪಿಎಂ)- ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಗುರಿಯಾಗಿಸಿ ಹಿಂಸಾಚಾರ ನಡೆಸಲಾಗು ತ್ತಿದೆ ಎಂದು ಆರೋಪಿಸಿ ಮೈಸೂರಿನ ಬಿಜೆಪಿ ಕಚೇರಿ ಎದುರು ಬಿಜೆಪಿ ಮುಖಂಡರು, ಕಾರ್ಯಕರ್ತರು ಬುಧವಾರ ಸಾಂಕೇತಿಕ ಹಾಗೂ ಮೌನ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡಿದ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಪಶ್ಚಿಮ ಬಂಗಾಳದಲ್ಲಿ ಮೊನ್ನೆ ತಾನೆ ಅಧಿ ಕಾರಕ್ಕೆ ಬಂದ ಟಿಎಂಸಿ ಕಾರ್ಯಕರ್ತರ ಪಡೆ ಗೂಂಡಾಗಳ ರೀತಿಯಲ್ಲಿ ವರ್ತನೆ ಮಾಡುತ್ತಿದೆ. 9 ಮಂದಿ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದೆ ಎಂದು ಆರೋಪಿಸಿದರು.

ಬಿಜೆಪಿ ಕಚೇರಿಗಳನ್ನು ಬೆಂಕಿಗಾಹುತಿ ಮಾಡಿ ವಿಕೃತಿ ಮೆರೆದಿದ್ದಾರೆ. ಬಿಜೆಪಿ ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡುವ ಹಂತದಲ್ಲಿ ಆತನ ತಾಯಿ ಅಂಗಲಾಚಿ ಬೇಡಿದರೂ ಬಿಡದೇ ಕ್ರೂರವಾಗಿ ನಡೆದು ಕೊಂಡಿದ್ದಾರೆ. ಮೊದಲು ಆ ತಾಯಿ ಹತ್ಯೆ ಗೈದು ಬಳಿಕ ಬಿಜೆಪಿ ಕಾರ್ಯಕರ್ತನನ್ನು ಕೊಂದು ಹಾಕಿ ಕಠೋರವಾಗಿ ವರ್ತಿಸಿದ್ದಾರೆ. 13 ಕಡೆಗಳಲ್ಲಿ ಬಿಜೆಪಿ ಕಚೇರಿಗಳನ್ನು ಧ್ವಂಸ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್, ಜಿಲ್ಲಾಧ್ಯಕ್ಷೆ ಮಂಗಳಾ ಸೋಮ ಶೇಖರ್, ಪಕ್ಷದ ಮುಖಂಡರಾದ ಜೋಗಿ ಮಂಜು, ಸೋಮಸುಂದರ್, ಪ್ರತಾಪ್ ದೇವನೂರು, ಮೋಹನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »