ಚಾಮರಾಜನಗರ ದುರಂತ: ಯಾರನ್ನೂ  ರಕ್ಷಣೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ
ಮೈಸೂರು

ಚಾಮರಾಜನಗರ ದುರಂತ: ಯಾರನ್ನೂ ರಕ್ಷಣೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ

May 6, 2021

ಎಷ್ಟೇ ದೊಡ್ಡವರಿರಲಿ, ತಪ್ಪಿತಸ್ಥರ ಶಿಕ್ಷಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವಾಗಿದೆ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು, ಮೇ 5(ಆರ್‍ಕೆಬಿ)- ಚಾಮರಾಜನಗ ರದ ಸರ್ಕಾರಿ ಆಸ್ಪತ್ರೆ ದುರಂತಕ್ಕೆ ಸಂಬಂಧಿಸಿದಂತೆ ಯಾರನ್ನೂ ರಕ್ಷಣೆ ಮಾಡುವ ಉದ್ದೇಶ ಸರ್ಕಾರ ಕ್ಕಿಲ್ಲ. ಯಾರು ಎಷ್ಟೇ ದೊಡ್ಡವÀರಿರಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಸಚಿವ ಸಂಪುಟದ ಸಭೆಯಲ್ಲೂ ನಿರ್ಧಾರವಾಗಿದೆ. ಹಾಗಾಗಿ ಸತ್ಯಾಂಶವೇನೆಂಬು ದನ್ನು ರಾಜ್ಯದ ಜನರಿಗೆ ತಿಳಿಸಬೇಕಿದೆ. ಮುಂದೆ ಇಂತಹ ಅನಾಹುತ ಎಲ್ಲೂ ಆಗಬಾರದು ಎಂಬುದು ಸರ್ಕಾರದ ದೃಷ್ಟಿ ಎಂದು ಸಹಕಾರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪಂಚಾಯತ್‍ನ ಡಿ.ದೇವ ರಾಜ ಅರಸು ಸಭಾಂಗಣದಲ್ಲಿ ಕೋವಿಡ್-19 ನಿರ್ವಹಣೆ ಸಂಬಂಧ ಕರೆದಿದ್ದ ಜಿಲ್ಲೆಯ ಶಾಸಕರು, ಸಂಸದರ ಸಭೆಯ ಬಳಿಕ ಅವರು ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.

ಇಬ್ಬರು ಶಾಸಕರನ್ನು ಹೊರತುಪಡಿಸಿ ಉಳಿದೆಲ್ಲಾ ಶಾಸಕರು, ಇಬ್ಬರು ಸಂಸದರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಜಿಪಂ ಅಧ್ಯಕ್ಷರು, ಮೇಯರ್ ಸಭೆಯಲ್ಲಿ ಭಾಗವಹಿಸಿದ್ದರು. ಅವರೆಲ್ಲರೂ ತಮ್ಮ ಕ್ಷೇತ್ರಗಳಲ್ಲಿನ ಕೋವಿಡ್ ಸಂಬಂಧಿತ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆಕ್ಸಿಜನ್, ರೆಮ್ಡಿಸಿವಿರ್, ವೆಂಟಿಲೇಟರ್, ವ್ಯಾಕ್ಸಿನ್ ಇನ್ನಿತರ ಸಮಸ್ಯೆಗಳ ಕುರಿತು ಸಭೆಯಲ್ಲಿ ಸಮಗ್ರವಾಗಿ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.
ಶಾಸಕರಲ್ಲಿ ಕೆಲವರು ರೆಮ್ಡಿಸಿವಿರ್ ಚುಚ್ಚುಮದ್ದಿನ ಕೊರತೆ ಬಗ್ಗೆ ಗಮನ ಸೆಳೆದರೆ, ಇನ್ನು ಕೆಲವರು ಆಕ್ಸಿ ಜನ್, ಬೆಡ್, ವೈದ್ಯರು, ನರ್ಸ್‍ಗಳ ಕೊರತೆ ಇರುವ ಬಗ್ಗೆ ತಿಳಿಸಿದ್ದಾರೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಲಿದೆ. ಒಟ್ಟಾರೆ ಕೊರೊನಾ ತಡೆಗೆ ಎಲ್ಲರೂ ಯಾವುದೇ ಸಮಸ್ಯೆ ಬರದಂತೆ ಒಗ್ಗಟ್ಟಿನಿಂದ ಹೋಗಲು ನಿರ್ಧರಿಸಲಾಗಿದೆ ಎಂದರು.

ಯಾವ ತಾಲೂಕಿಗೆ ಎಷ್ಟು ರೆಮ್ಡಿಸಿವಿರ್ ಬೇಕು, ಆಕ್ಸಿಜನ್ ಸಿಲಿಂಡರ್‍ಗಳೆಷ್ಟು ಅಗತ್ಯವಿದೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದು, ನಾಳೆಯೊಳಗೆ ಸರಿಪಡಿಸಲಿ ದ್ದೇವೆ. ಇವುಗಳ ಕೊರತೆ ಇದ್ದರೆ ಗಮನಕ್ಕೆ ತಂದರೆ ಸರ್ಕಾರದಿಂದ ಪೂರೈಸಲಾಗುವುದು ಎಂದರು.

ಇದಕ್ಕೂ ಮುನ್ನ ನಡೆದ ಶಾಸಕರ ಸಭೆಯಲ್ಲಿ ಚಾಮ ರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್, ಮೈಸೂರು -ಕೊಡಗು ಸಂಸದ ಪ್ರತಾಪ್‍ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್‍ಸೇಠ್, ಮಂಜುನಾಥ್, ಸಾ.ರಾ.ಮಹೇಶ್, ಎಲ್.ನಾಗೇಂದ್ರ, ಡಾ.ಯತೀಂದ್ರ ಸಿದ್ದರಾಮಯ್ಯ, ವೆಂಕಟೇಶ್, ಹರ್ಷವರ್ಧನ್, ಅಶ್ವಿನ್ ಕುಮಾರ್, ಎಂಎಲ್‍ಸಿಗಳಾದ ಹೆಚ್.ವಿಶ್ವನಾಥ್, ಧರ್ಮಸೇನಾ, ಜಿಪಂ ಅಧ್ಯಕ್ಷೆ ಬಿ.ಸಿ.ಪರಿಮಳಾ ಶ್ಯಾಂ, ಮೇಯರ್ ರುಕ್ಮಿಣಿ ಮಾದೇಗೌಡ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇನ್ನಿತರರು ಉಪಸ್ಥಿತರಿದ್ದರು.

Translate »