ಕೆಆರ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಹಾಸಿಗೆ ಇಲ್ಲ!
ಮೈಸೂರು

ಕೆಆರ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಹಾಸಿಗೆ ಇಲ್ಲ!

May 6, 2021
  • ಆಮ್ಲಜನಕ ನೀಡಿದರೆ ಸಾಕು, ನೆಲದಲ್ಲೇ ಮಲಗಿ ಚಿಕಿತ್ಸೆ ಪಡೆಯುತ್ತೇವೆ ಎನ್ನುವ ರೋಗಿಗಳು
  • `ದೊಡ್ಡಾಸ್ಪತ್ರೆ’ಯ ಸ್ಥಿತಿ ಸೋಂಕಿತರು, ಕುಟುಂಬದವರನ್ನು ತೀವ್ರ ಆತಂಕಕ್ಕೆ ಗುರಿ ಮಾಡಿದೆ

ಮೈಸೂರು, ಮೇ 5(ಎಂಕೆ)- ಮೈಸೂ ರಿನಲ್ಲಿ ಕೊರೋನಾ ಸೋಂಕಿನ ಪ್ರಕರಣ ಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನೊಂ ದೆಡೆ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಗಳೇ ದೊರಕದಂತಾಗಿದ್ದು, ಆಕ್ಸಿಜನ್ ನೀಡಿದರೆ ಸಾಕು ನೆಲದಲ್ಲಿಯೇ ಮಲಗಿ ಚಿಕಿತ್ಸೆ ಪಡೆಯಬೇಕಾದ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಬೆಂಗ ಳೂರು ಹೊರತುಪಡಿಸಿ 600ಕ್ಕೂ ಹೆಚ್ಚು ಕೊರೊನಾ ಸೋಂಕಿತರಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗಾಗಿ, ರೋಗಿಗಳನ್ನು ದಾಖಲಿಸಿಕೊಳ್ಳಲು ಬೆಡ್‍ಗಳೇ ಲಭ್ಯವಿಲ್ಲದೇ ಬುಧವಾರ ಹೊಸದಾಗಿ ಸೋಂಕಿಗೆ ಒಳಗಾದವರು ಆಸ್ಪತ್ರೆಗೆ ದಾಖಲಾಗಲು ಪರದಾಡುವಂತಾಯಿತು.

ಕೊರೊನಾ ತುರ್ತು ಚಿಕಿತ್ಸಾ ವಿಭಾಗ ದಲ್ಲಿ ರೋಗಿಗಳನ್ನು ನೋಂದಣಿ ಮಾಡಿ ಕೊಳ್ಳುವ ಜಾಗದಲ್ಲಿಯೇ ಸೋಂಕಿತರಿಗೆ ಆಕ್ಸಿಜನ್ ನೀಡಿ, ಚಿಕಿತ್ಸೆ ನೀಡಲಾರಂಭಿಸ ಲಾಗಿದೆ. ಮೈಸೂರಿನ `ದೊಡ್ಡಾಸ್ಪತ್ರೆ’ಯ ಈಗಿನ ಪರಿಸ್ಥಿತಿ ಕೊರೊನಾ ಸೋಂಕಿತ ರನ್ನು ಮತ್ತು ಅವರ ಕುಟುಂಬದವರನ್ನೂ ತೀವ್ರ ಆತಂಕಕ್ಕೆ ಗುರಿ ಮಾಡಿದೆ.

ಆಂಬ್ಯುಲೆನ್ಸ್ ಸಾಲು: ಬುಧವಾರ ಬೆಳಗ್ಗೆ ಯಿಂದ ಮಧ್ಯಾಹ್ನದವರೆಗೂ ಕೆ.ಆರ್. ಆಸ್ಪತ್ರೆಯ ಕೊರೊನಾ ತುರ್ತು ಚಿಕಿತ್ಸಾ ವಿಭಾಗದ ಎದುರು ಸೋಂಕಿತರನ್ನು ಕರೆ ತಂದ ಆಂಬ್ಯುಲೆನ್ಸ್‍ಗಳು ಸಾಲುಗಟ್ಟಿದ್ದವು. ಸಮರ್ಪಕ ಬೆಡ್‍ಗಳ ವ್ಯವಸ್ಥೆ ಇಲ್ಲದ ಕಾರಣ ಸಕಾಲದಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಸೋಂಕಿತರು ನರಳಾ ಡುತ್ತಿದ್ದ ದೃಶ್ಯ ಕಂಡುಬಂದಿತು.

ಈ ಮೊದಲೇ ದಾಖಲಾಗಿದ್ದ ಸೋಂಕಿ ತರಲ್ಲಿ ಗುಣಮುಖರಾದವರನ್ನು ಸಂಜೆ ವೇಳೆಗೆ ಡಿಸ್ಚಾರ್ಜ್ ಮಾಡಿ, ಖಾಲಿಯಾದ ಬೆಡ್‍ಗಳಿಗೆ ಹೊಸದಾಗಿ ಬಂದ ಸೋಂಕಿ ತರನ್ನು ದಾಖಲಿಸಿಕೊಳ್ಳಲಾಯಿತು.

ತುಂಬಿ ತುಳುಕುತ್ತಿವೆ: ಕೆ.ಆರ್.ಆಸ್ಪತ್ರೆಯ ಕೊರೊನಾ ತುರ್ತು ಚಿಕಿತ್ಸಾ ವಿಭಾಗವೂ ಸೋಂಕಿತರಿಂದ ತುಂಬಿ ತುಳುಕುತ್ತಿದೆ. ನಿತ್ಯ ಮೈಸೂರಿನಲ್ಲಿ 2500ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ಕಾಣಿಸಿ ಕೊಳ್ಳುತ್ತಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ.
ಆಸ್ಪತ್ರೆಗಳೆಲ್ಲ ಭರ್ತಿ: ನಗರದಲ್ಲಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೊರೊನಾ ಸೋಂಕಿತರ ಚಿಕಿತ್ಸಾ ವಿಭಾಗ ಗಳು ನಿತ್ಯವೂ ಪೂರ್ಣ ಭರ್ತಿಯಾಗಿಯೇ ಇರುತ್ತಿವೆ. ವೈದ್ಯಕೀಯ ಸಿಬ್ಬಂದಿ ಕೆಲವೊಮ್ಮೆ ದಿನದ 24 ಗಂಟೆಯೂ ಬಿಡುವಿಲ್ಲದಂತೆ ಕೆಲಸ ಮಾಡಬೇಕಾದ ಸ್ಥಿತಿ ಇದೆ ಎಂದು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ನರ್ಸ್‍ಗಳು ‘ಮೈಸೂರು ಮಿತ್ರ’ನಲ್ಲಿ ತಮ್ಮ ಸಮಸ್ಯೆ ತೆರೆದಿಟ್ಟರು.

ಸ್ವಿಚ್ಡ್ ಆಫ್: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣ ಜವಾ ಬ್ದಾರಿ ಹೊತ್ತಿರುವ ಹಿರಿಯ ವೈದ್ಯಕೀಯ ಅಧಿಕಾರಿಗಳು ರಾತ್ರಿ 8 ಗಂಟೆಯಾಗುತ್ತಿದ್ದಂತೆ ತಮ್ಮ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಕೊಳ್ಳುತ್ತಿದ್ದಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಅಧಿಕಾರಿಗಳ ವರ್ತನೆ ಬೇಸರವನ್ನುಂಟು ಮಾಡುತ್ತಿದೆ ಎಂದು ಮೈಸೂರಿನ ಕೆಲ ನಾಗರಿಕರು ಕಿಡಿಕಾರಿದ್ದಾರೆ.

Translate »