ಮೈಸೂರು ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್ ಪ್ರವೇಶ   ಇನ್ನು `ಬಲು ಭಾರ’; ಟಿಕೆಟ್ ದರ 50 ರೂ.ಗೆ ಏರಿಕೆ!
ಮೈಸೂರು

ಮೈಸೂರು ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್ ಪ್ರವೇಶ  ಇನ್ನು `ಬಲು ಭಾರ’; ಟಿಕೆಟ್ ದರ 50 ರೂ.ಗೆ ಏರಿಕೆ!

September 30, 2020

ಮೈಸೂರು, ಸೆ.29(ಆರ್‍ಕೆಬಿ)- ಮೈಸೂರು ರೈಲು ನಿಲ್ದಾ ಣದ ಪ್ಲಾಟ್‍ಫಾರ್ಮ್ ಪ್ರವೇಶ `ಬಲು ಭಾರ’ವಾಗಲಿದೆ. ಪ್ಲಾಟ್‍ಫಾರ್ಮ್ ಟಿಕೆಟ್ ದರವನ್ನು ತಕ್ಷಣದಿಂದ ಜಾರಿಗೆ ಬರುವಂತೆ 50 ರೂ. ಹೆಚ್ಚಿಸಲಾಗಿದೆ. ಇದು ಈ ವರ್ಷಾಂತ್ಯದವರೆಗೂ ಮುಂದುವರಿಯಲಿದೆ.

ಕೋವಿಡ್-19 ಹೆಚ್ಚು ವೇಗವಾಗಿ ಹರಡುತ್ತಿರುವು ದರಿಂದ ಪ್ಲಾಟ್‍ಫಾರ್ಮ್‍ನಲ್ಲಿ ಜನದಟ್ಟಣೆ ತಪ್ಪಿಸಬೇಕಿದೆ. ಸಾರ್ವಜನಿಕರ ಹಿತ ಗಮನದಲ್ಲಿಟ್ಟುಕೊಂಡೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ನಿಲ್ದಾಣದಿಂದ ವಿಶೇಷ ರೈಲುಗಳ ಸಂಚರಿ ಸಲಿವೆ. ಕೆಎಸ್‍ಆರ್ ಬೆಂಗಳೂರು-ಮೈಸೂರು-ಕೆಎಸ್‍ಆರ್ ಬೆಂಗಳೂರು (ದೈನಂದಿನ) ವಿಶೇಷ ಎಕ್ಸ್‍ಪ್ರೆಸ್ (ಸಂಖ್ಯೆ 06503 /06504), ಕೆಎಸ್‍ಆರ್ ಬೆಂಗಳೂರು-ಮೈಸೂರು-ಕೆಎಸ್‍ಆರ್ ಬೆಂಗಳೂರು (ದೈನಂದಿನ) ವಿಶೇಷ ಎಕ್ಸ್‍ಪ್ರೆಸ್(06539/06540), ಮೈಸೂರು-ಸೋಲಾಪುರ-ಮೈಸೂರು (ದೈನಂ ದಿನ) ವಿಶೇಷ ಎಕ್ಸ್‍ಪ್ರೆಸ್(06535/06536), ಹುಬ್ಬಳ್ಳಿ-ಮೈಸೂರು-ಹುಬ್ಬಳ್ಳಿ (ದೈನಂದಿನ) ವಿಶೇಷ ಎಕ್ಸ್‍ಪ್ರೆಸ್ (06581/06582), ಮೈಸೂರು-ಜೈಪುರ-ಮೈಸೂರು (ವಾರ ದಲ್ಲಿ 2 ದಿನ) ಸೂಪರ್‍ಫಾಸ್ಟ್ ವಿಶೇಷ ಎಕ್ಸ್‍ಪ್ರೆಸ್ (02975 /02976), ಕೆಎಸ್‍ಆರ್ ಬೆಂಗಳೂರು-ಮಂಗಳೂರು ಕೇಂದ್ರ-ಕೆಎಸ್‍ಆರ್ ಬೆಂಗಳೂರು (ವಾರದಲ್ಲಿ 3 ದಿನ) ವಿಶೇಷ ಎಕ್ಸ್‍ಪ್ರೆಸ್ (06517/06518) ಸಂಚರಿಸಲಿವೆ.

 

 

Translate »