ದಸರಾ ವೇಳೆ ಮೈಸೂರು ಬೆಳಗಲು ಹಲವು ಖಾಸಗಿ ಸಂಸ್ಥೆ, ಉದ್ಯಮಗಳ ಸಾಥ್…
ಮೈಸೂರು

ದಸರಾ ವೇಳೆ ಮೈಸೂರು ಬೆಳಗಲು ಹಲವು ಖಾಸಗಿ ಸಂಸ್ಥೆ, ಉದ್ಯಮಗಳ ಸಾಥ್…

October 13, 2021

ಮೈಸೂರು, ಅ.12(ಎಂಕೆ)-ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋ ತ್ಸವಕ್ಕೆ ಕೊರೊನಾ ಮಹಾಮಾರಿ ನಡು ವೆಯೂ ವೈಭವದ ಮೆರಗು ತಂದ ವಿದ್ಯುತ್ ದೀಪಾಲಂಕಾರಕ್ಕೆ ಮೈಸೂರಿನ ಹಲವು ಖಾಸಗಿ ಸಂಸ್ಥೆಗಳು ಕೈಜೋಡಿಸಿವೆ.

ನಗರದ ಹಲವಾರು ವೃತ್ತಗಳಿಗೆ ಹಾಗೂ ಪ್ರಮುಖ ರಸ್ತೆಗಳಿಗೆ ವಿಶೇಷ ದೀಪಾ ಲಂಕಾರದ ಪ್ರಾಯೋಜಕತ್ವ ಪಡೆಯುವ ಮೂಲಕ ಹಲವು ಖಾಸಗಿ ಸಂಸ್ಥೆಗಳು ದಸರಾ ವೈಭವವನ್ನು ಇಮ್ಮಡಿಗೊಳಿಸಲು ಸಹಕರಿಸಿವೆ. ಹಾರ್ಡಿಂಜ್ ವೃತ್ತದ ದೀಪಾ ಲಂಕಾರ, ವೃತ್ತದ ಬದಿಯಲ್ಲಿ ವಿಶೇಷ ಎಲ್‍ಇಡಿ ಪರದೆ ಅಳವಡಿಸಲು ‘ಟಿವಿಎಸ್ ಕಂಪನಿ’, ಪ್ರಾಯೋಜಕತ್ವ ಪಡೆದರೆ, ಜಯಚಾಮರಾಜ ಒಡೆಯರ್ ವೃತ್ತಕ್ಕೆ ‘ಸೋನಾ ಮೋಟಾರ್ಸ್’, ಕೆ.ಆರ್.ವೃತ್ತಕ್ಕೆ ‘ಐಡಿಯಾ ಇನ್ಫೀನಿಟಿ’, ಆಯುರ್ವೇದ ವೃತ್ತಕ್ಕೆ ‘ಎಸ್‍ಬಿಐ’, ಗಾಂಧಿ ವೃತ್ತ ಮತ್ತು ದೊಡ್ಡ ಗಡಿಯಾರ ದೀಪಾಲಂಕಾರದ ಜವಾಬ್ದಾರಿಯನ್ನು ‘ಕೆಎನ್‍ಎಸ್ ಇನ್ಫ್ರಾ’ ಸಂಸ್ಥೆ ಪಡೆದುಕೊಂಡಿದೆ. ದೇವೇಗೌಡ ವೃತ್ತಕ್ಕೆ ‘ಕೆಎಂಎಫ್’, ಮೆಟ್ರೋಪೆÇೀಲ್ ವೃತ್ತ, ದಾಸಪ್ಪ ಸರ್ಕಲ್ ಹಾಗೂ ರಾಮ ಸ್ವಾಮಿ ವೃತ್ತಕ್ಕೆ ‘ಪ್ಯಾಲೆಸ್ ಟೊಯೋಟಾ’, ನಂಜನಗೂಡು-ಮೈಸೂರು ರಿಂಗ್ ರೋಡ್ ಜಂಕ್ಷನ್(ಡಾ.ಎಪಿಜೆ ಅಬ್ದುಲ್ ಕಲಾಂ ವೃತ್ತ)ಗೆ ‘ಎಸ್‍ಕೆಎಫ್’, ಆರ್‍ಟಿಓ ವೃತ್ತಕ್ಕೆ ಕೊಟ್ಟಕ್ಕಲ್ ಆರ್ಯ ವೈದ್ಯ ಸಂಸ್ಥೆ ವಿದ್ಯುತ್ ದೀಪಾಲಂಕಾರ ಮಾಡಿವೆ.

ಅದರಂತೆ ಡಿಆರ್‍ಎಂ ಆಸ್ಪತ್ರೆ ವೃತ್ತಕ್ಕೆ ‘ಥಾಟ್ ಫೋಕಸ್’, ಸೆಂಟ್ ಜೋಸೆಫ್ ವೃತ್ತಕ್ಕೆ ‘ಜೋಗಿತಾ ಪೈಪ್ಸ್ಸ್’, ಒಂಟಿಕೊಪ್ಪಲ್ ಟೆಂಪಲ್ ವೃತ್ತಕ್ಕೆ ‘ಡಿಆರ್‍ಎಂ ಆಸ್ಪತ್ರೆ’, ಪಡುವಾರಹಳ್ಳಿ ವೃತ್ತಕ್ಕೆ ‘ಬೃಂದಾ ವನ ಆಸ್ಪತ್ರೆ’, ಪ್ರೀಮಿಯರ್ ಸ್ಟುಡಿಯೋ ವೃತ್ತಕ್ಕೆ ‘ರಾಬರ್ಟ್ ಡೆವಲಪರ್ಸ್’, ಐಶ್ವರ್ಯ ಪೆಟ್ರೋಲ್ ಬಂಕ್ ವೃತ್ತಕ್ಕೆ ‘ಕಿಯಾ’, ಕ್ಯಾನ್ಸರ್ ಆಸ್ಪತ್ರೆ ವೃತ್ತಕ್ಕೆ ‘ಇನ್‍ಫೋಸಿಸ್’, ಮಾತೃಮಂಡಳಿ ವೃತ್ತಕ್ಕೆ ‘ಲಾಯಲ್ ವಲ್ರ್ಡ್’, ರಾಯಲ್ ಇನ್ ವೃತ್ತಕ್ಕೆ ‘ಪೆಪ್ ಚಾಲ್ರ್ಸ್’, ರಾಮಕೃಷ್ಣ ಪರಮಹಂಸ ವೃತ್ತ(ಆಂದೋಲನ ವೃತ್ತ)ಕ್ಕೆ ‘ಅಮ್ಮ ಡೆವಲಪರ್ಸ್’, ಮುರುಗನ್ ಮೆಡಿಕಲ್ ವೃತ್ತಕ್ಕೆ ‘ಮುರುಗನ್ ಮೆಡಿಕಲ್ಸ್’, ಬೇಕ್ ಪಾಯಿಂಟ್ ವೃತ್ತಕ್ಕೆ ‘ಎ.ಎನ್.ರಾಯಲ್’ ಹಾಗೂ ಅಪೋಲೋ ಆಸ್ಪತ್ರೆ ವೃತ್ತದ ದೀಪಾಲಂಕಾರವನ್ನು ‘ಅಪೋಲೋ ಆಸ್ಪತ್ರೆ’ ವಹಿಸಿಕೊಂಡಿದೆ.

Translate »