ಅರಮನೆ ಆವರಣದಲ್ಲಿ ಮುಂದುವರಿದ ಜಂಬೂಸವಾರಿ ತಾಲೀಮು
ಮೈಸೂರು

ಅರಮನೆ ಆವರಣದಲ್ಲಿ ಮುಂದುವರಿದ ಜಂಬೂಸವಾರಿ ತಾಲೀಮು

October 13, 2021

ಮೈಸೂರು, ಅ.12(ಎಂಟಿವೈ)- ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಆರಂಭವಾಗಿದ್ದು, ಅರಮನೆ ಆವರಣ ದಲ್ಲಿ ದಸರಾ ಗಜಪಡೆ, ಅಶ್ವಪಡೆ ಹಾಗೂ ಪೊಲೀಸ್ ತುಕಡಿಗಳಿಗೆ ಮಂಗಳವಾರ ಪೂರ್ಣ ಪ್ರಮಾಣದ ಜಂಬೂಸವಾರಿ ತಾಲೀಮು ನಡೆಸಲಾಯಿತು.

ಸೋಮವಾರದಿಂದ ಆರಂಭಿಸಲಾಗಿ ರುವ ಜಂಬೂಸವಾರಿ ತಾಲೀಮು ಎರಡನೇ ದಿನವೂ ಮುಂದುವರೆಯಿತು. ನಾಳೆ(ಅ.13)ಯೂ ತಾಲೀಮು ನಡೆಯ ಲಿದ್ದು, ಅಂತಿಮ ಸಿದ್ಧತೆ ನಡೆಸಲಾಗುತ್ತಿದೆ. ಎರಡನೇ ದಿನದ ಜಂಬೂಸವಾರಿ ತಾಲೀಮು ಯಶಸ್ವಿಯಾಗಿ ನಡೆಯಿತು. ಗಜಪಡೆ ಹಾಗೂ ಅಶ್ವಪಡೆ ಶಿಸ್ತುಬದ್ಧವಾಗಿ ಹೆಜ್ಜೆ ಹಾಕುವ ಮೂಲಕ ಭರವಸೆ ಮೂಡಿ ಸಿದವು. ಇದರೊಂದಿಗೆ ಪೊಲೀಸ್ ತುಕಡಿ ಹಾಗೂ ಪೊಲೀಸ್ ಬ್ಯಾಂಡ್ ವಾದನದ ತಂಡ ಪಾಲ್ಗೊಂಡು ಗಮನ ಸೆಳೆದವು.

ಜಂಬೂಸವಾರಿ ದಿನದಂದು ಆನೆಗಳು ಸಾಗುವ ಮಾರ್ಗದಂತೆ ಕುಮ್ಕಿ ಆನೆಗಳಾದ ಕಾವೇರಿ ಹಾಗೂ ಚೈತ್ರಾ ಆನೆಗಳೊಂದಿಗೆ ಅಂಬಾರಿ ಆನೆ ಅಭಿಮನ್ಯುವನ್ನು ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದಿಂದ ಅಂಬಾರಿ ಕಟ್ಟುವ ಸ್ಥಳಕ್ಕೆ ಕರೆತರಲಾಯಿತು. ಬಳಿಕ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆ ಯರ್ ನಿವಾಸದ ಬಳಿ ಕೆಲ ಸಮಯ ನಿಲ್ಲಿಸಿ, ಜಂಬೂಸವಾರಿಯಲ್ಲಿ ಪಾಲ್ಗೊ ಳ್ಳುವ ಅಶ್ವಪಡೆಯ 30 ಕುದುರೆ, ಎರಡು ಪೊಲೀಸ್ ತುಕಡಿಗಳೊಂದಿಗೆ ತಾಲೀಮು ನಡೆಸಲಾಯಿತು. ಸಿಎಆರ್ ಡಿಸಿಪಿ ಶಿವರಾಜ್, ಡಿಸಿಎಫ್ ಡಾ.ವಿ.ಕರಿಕಾಳನ್ ನೇತೃತ್ವದಲ್ಲಿ ನಡೆದ ತಾಲೀಮಿನಲ್ಲಿ ಪೊಲೀಸ್ ಬ್ಯಾಂಡ್ ವಾದನದ ತಂಡ `ಸಾರೆ ಜಹಾಂಸೆ ಅಚ್ಛಾ’ ಗೀತೆ ಸೇರಿದಂತೆ ಇನ್ನಿತರ ಗೀತೆ ಗಳನ್ನು ನುಡಿಸಿತು. ಇದಕ್ಕೆ ಪೊಲೀಸ್ ತುಕಡಿ ಯಲ್ಲಿನ ಪೇದೆಗಳು ಪಥಸಂಚಲನದಲ್ಲಿ ಶಿಸ್ತಿನಿಂದ ಹೆಜ್ಜೆ ಹಾಕಿ ಗಮನ ಸೆಳೆದರು. ಅ.15ರಂದು ನಡೆಯುವ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗುವಂತೆ ಮೊದಲು ಸಾಲಾನೆಯಾಗಿ ಅಶ್ವತ್ಥಾಮ ಹಾಗೂ ಲಕ್ಷ್ಮೀ ಹೆಜ್ಜೆ ಹಾಕಿದವು. ನಂತರ ಮೆರವಣಿಗೆ ಯಲ್ಲಿ ಕುದುರೆ, ಪೊಲೀಸ್ ತುಕಡಿ ಸಾಗಿ ದವು. ಅಂತಿಮವಾಗಿ ಅಂಬಾರಿ ಆನೆ ಕುಮ್ಕಿ ಆನೆಯೊಂದಿಗೆ ಹೆಜ್ಜೆ ಹಾಕಿತು. ಈ ಬಾರಿ 6 ಸ್ತಬ್ಧಚಿತ್ರ, 6-8 ಕಲಾ ತಂಡಗಳು ಪಾಲ್ಗೊಳ್ಳಲಿವೆ. ಅವುಗಳನ್ನು ಆನೆ, ಕುದುರೆ ಗಳ ನಡುವೆ ಮಧ್ಯೆ ಮಧ್ಯೆ ತೆರಳಲು ವ್ಯವಸ್ಥೆ ಮಾಡಲಾಗುತ್ತಿದೆ. ಇಂದು ನಡೆದ ತಾಲೀಮಿ ನಲ್ಲಿ ಕುಮ್ಕಿ ಆನೆಗಳೊಂದಿಗೆ ಆಗಮಿಸಿದ ಅಂಬಾರಿ ಆನೆ ಅಭಿಮನ್ಯುನನ್ನು ಪುಷ್ಪಾ ರ್ಚನೆ ಮಾಡುವ ಸ್ಥಳಕ್ಕೆ ಕರೆತರಲಾ ಯಿತು. ಈ ವೇಳೆ ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರಗೀತೆಯನ್ನು ನುಡಿಸಿತು. ಈ ವೇಳೆ ಪಿರಂಗಿ ದಳದ ಸಿಬ್ಬಂದಿ 14 ಬಾರಿ ಕುಶಾಲತೋಪು ಸಿಡಿಸಿದರು. ಈ ಸಂದರ್ಭ ದಲ್ಲಿ ಮೂರು ಆನೆಗಳು ಸೊಂಡಿಲೆತ್ತಿ ಸೆಲ್ಯೂಟ್ ಹೊಡೆದವು. ಈ ಸಂದÀರ್ಭದಲ್ಲಿ ವೇದಿಕೆಯ ಮೇಲಿದ್ದ ಸಿಎಆರ್ ಡಿಸಿಪಿ ಶಿವರಾಜ್, ಡಿಸಿಎಫ್ ಡಾ.ವಿ.ಕರಿಕಾಳನ್, ಗುಪ್ತದಳದ ಡಿವೈಎಸ್ಪಿ ರಘು, ಡಿವೈಎಸ್ಪಿ ಗುರುಪ್ರಸಾದ್, ಸಿಎಆರ್ ಎಸಿಪಿ ವೀರಣ್ಣ, ಅರಮನೆ ಭದ್ರತಾ ವಿಭಾಗದ ಎಸಿಪಿ ಚಂದ್ರಶೇಖರ್ ಅಂಬಾರಿ ಮೇಲೆ ಪುಷ್ಪಾರ್ಚನೆ ಮಾಡಿದರು. ಪುಷ್ಪಾ ರ್ಚನೆ ಹಾಗೂ ರಾಷ್ಟ್ರಗೀತೆ ನುಡಿಸುವ ವೇಳೆ ಅಂಬಾರಿ ಆನೆ ಅಭಿಮನ್ಯು ಹಾಗೂ ಕುಮ್ಕಿ ಆನೆಗಳಾದ ಕಾವೇರಿ ಹಾಗೂ ಚೈತ್ರಾ ಆನೆಗಳು ರಾಜಗಾಂಭೀರ್ಯದಿಂದ ಸೊಂಡಿಲೆತ್ತಿ ನಿಲ್ಲುವ ಮೂಲಕ ಗಮನ ಸೆಳೆದವು. ಪುಷ್ಪಾರ್ಚನೆ ಬಳಿಕ ಜಂಬೂ ಸವಾರಿ ಮಾರ್ಗದಲ್ಲಿ ಆನೆ, ಕುದುರೆ, ಪೊಲೀಸ್ ಬ್ಯಾಂಡ್ ವಾದನದ ತಂಡ ಹಾಗೂ ಪಥ ಸಂಚಲನದಲ್ಲಿ ತೊಡಗಿದ್ದ ಪೊಲೀಸ್ ತುಕಡಿಯೊಂದಿಗೆ ಅರಮನೆ ಆವರಣದಲ್ಲಿನ ಭುವನೇಶ್ವರಿ ದೇವಾಲಯದವರೆಗೂ ಸಾಗಿದವು.

Translate »