ಕೆಲವರು ಮೈಸೂರಿಗೆ ವಾಪಸ್, ಇನ್ನೂ ಕೆಲವರದ್ದು ತ್ರಿಶಂಕು ಸ್ಥಿತಿ
ಮೈಸೂರು, ಫೆ.೨೪(ಜಿಎ)-ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದ್ದು, ಮೈಸೂರಿನ ಕೆಲ ವಿದ್ಯಾರ್ಥಿ ಗಳು ಸಂಕಷ್ಟಕ್ಕೀಡಾಗಿದ್ದಾರೆ.
ಹೆಚ್ಚಿನ ವಿದ್ಯಾಭ್ಯಾಸಕ್ಕೆ ಉಕ್ರೇನ್‌ಗೆ ತೆರಳಿರುವ ದೇಶದ ಸಾವಿರಾರು ವಿದ್ಯಾರ್ಥಿಗಳಲ್ಲಿ ಮೈಸೂರಿನ ಹಲವರು ಇದ್ದಾರೆ. ಕೆಲವರು ಈಗಾಗಲೇ ಮೈಸೂರಿಗೆ ಮರಳಿ ದ್ದಾರೆ. ಇನ್ನೂ ಕೆಲವರು ಅಲ್ಲಿಯೇ ಇದ್ದಾರೆ. ಇಂದು ಭಾರತಕ್ಕೆ ಮರಳಲು ವಿಮಾನ ಟಿಕೆಟ್ ಬುಕ್ ಮಾಡಿದ್ದ ರಾದರೂ ರಷ್ಯಾ ಸೇನೆ ಉಕ್ರೇನ್ ಏರ್‌ಪೋರ್ಟ್ ಮೇಲೆ ದಾಳಿ ನಡೆಸಿ ದ್ವಂಸಗೊಳಿಸಿದ್ದರಿAದ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಮೈಸೂರಿನ ಶ್ರೀರಾಂ ಪುರ ನಿವಾಸಿ ಪ್ರಿಯಾಂಕ ಗುರುಮಲ್ಲೇಶ್ ಅವರು ಉಕ್ರೇನ್‌ನಿಂದ ಮೈಸೂರಿಗೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಇವರು ೨೦೨೦ರ ಡಿಸೆಂಬರ್‌ನಿAದ ಉಕ್ರೇನ್‌ನ ಚೆರ್ನಿವಿಟ್ಸಿಯ ಬುಕೊ ವಿನಿಯನ್ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.
ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಪ್ರೀಯಾಂಕ ಗುರುಮಲ್ಲೇಶ್, ಒಂದು ವಾರದ ಹಿಂದೆ ನಮ್ಮಲ್ಲಿ ಹಲವರು ಭಾರತೀಯ ರಾಯಭಾರಿ ಸಂಸ್ಥೆಗೆ ಟ್ವಿಟ್ ಮಾಡಿ, ವಿವಿಧ ದೇಶ ಗಳು ತಮ್ಮ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ವಿಚಾರ ತಿಳಿಸಿದೆವು. ಈ ಟ್ವೀಟ್ ಗಮನಿಸಿದ ಭಾರತೀಯ ರಾಯಭಾರಿ ಸಂಸ್ಥೆ, ಯಾರು ಭಾರತಕ್ಕೆ ಮರಳಲು ಇಚ್ಛಿಸುತ್ತೀರೋ ಅವರು ಹೊರಡ ಬಹುದು ಎಂದು ಮಾಹಿತಿ ನೀಡಿದ್ದರು.
ಅದರಂತೆ ವಿಮಾನ ಟಿಕೆಟ್ ತಕ್ಷಣ ಸಿಗಲಿಲ್ಲ. ಎಲ್ಲ ಬುಕ್ಕಿಂಗ್ ಮಗಿದು ಹೋಗಿತ್ತು. ಟಿಕೆಟ್ ದರವೂ ಹೆಚ್ಚಳವಾಗಿತ್ತು. ಕೆಲ ದಿನದ ನಂತರ ನಮಗೂ ಟಿಕೆಟ್ ದೊರೆÀಯಿತು. ನಂತರ ನಾನು ಮತ್ತು ಕೆಲವರು ಉಕ್ರೇನ್‌ನ ಕೀವ್‌ನಿಂದ ಶಾರ್ಜಾಗೆ ಬಂದು ಅಲ್ಲಿಂದ ಬೆಂಗಳೂರು ಮೂಲಕ ಮೈಸೂರಿಗೆ ಮರಳಿದ್ದೇವೆ ಎಂದರು.
ಆನ್‌ಲೈನ್ ತರಗತಿ: ಉಕ್ರೇನ್‌ನಲ್ಲಿ ಯುದ್ಧ ನಡೆಯುವ ಯಾವ ಲಕ್ಷಣವೂ ಇರಲಿಲ್ಲ. ಹಾಗಾಗಿ ನಮಗೂ ಭಾರತಕ್ಕೂ ಮರಳುವ ಉದ್ದೇಶವಿರಲಿಲ್ಲ. ಆದರೆ ಭಾರತೀಯ ರಾಯಭಾರಿ ಸಂಸ್ಥೆಯವರೇ ನೀವು ಭಾರತಕ್ಕೆ ಮರಳಿ, ನಿವiಗೆ ಆನ್‌ಲೈನ್ ಮುಖಾಂತರ ತರಗತಿಗಳು ನಡೆಯಲಿವೆ ಎಂದು ತಿಳಿಸಿದರು. ಆನ್‌ಲೈನ್ ಮೂಲಕ ತರಗತಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮೈಸೂರಿಗೆ ವಾಪಸ್ ಬಂದೆವು. ಆದರೆ ಇಂದಿನ ಉಕ್ರೇನ್ ಪರಿಸ್ಥಿತಿ ನೋಡಿದರೆ ತೀರಾ ಭಯವಾಗುತ್ತಿದೆ ಎಂದು ತಿಳಿಸಿದರು.
೩೦ಕ್ಕೂ ಹೆಚ್ಚು ಕನ್ನಡಿಗರು: ಉಕ್ರೇನ್‌ನ ಚೆರ್ನಿ ವಿಟ್ಸಿಯ ಬುಕೊವಿನಿಯನ್ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ೩೦೦೦ಕ್ಕೂ ಹೆಚ್ಚು ಭಾರತೀಯರು, ಅದರಲ್ಲಿ ೩೦ಕ್ಕೂ ಹೆಚ್ಚು ಕನ್ನಡಿಗರು ಶಿಕ್ಷಣ ಪಡೆ ಯುತ್ತಿದ್ದಾರೆ. ಸದ್ಯ ಹಲವು ವಿದ್ಯಾರ್ಥಿಗಳು ಭಾರತಕ್ಕೆ ಹಿಂತಿರುಗಿದ್ದಾರೆ. ಇಂದು ಕೆಲ ವಿದ್ಯಾರ್ಥಿಗಳು ಬರುವ ನಿರೀಕ್ಷೆ ಇತ್ತು. ಆದರೆ ಉಕ್ರೇನ್ ವಿಮಾನ ನಿಲ್ದಾಣದ ಮೇಲೆ ರಷ್ಯಾ ದಾಳಿ ಮಾಡಿರುವು ದರಿಂದ ಅವರಿಗೆ ವಿಮಾನ ಸಿಗದೆÀ ಅಲ್ಲಿಯೇ ಉಳಿದಿದ್ದಾರೆ. ನನ್ನ ಕೆಲ ಸ್ನೇಹಿತರನ್ನು ವಾಟ್ಸ್ ಅಪ್ ಕಾಲ್ ಮುಖಾಂತರ ಸಂಪರ್ಕಿಸಿ ಅವರ ವಿವರಗಳನ್ನು ಪಡೆದುಕೊಳ್ಳುತ್ತಿದ್ದೇನೆ ಎಂದರು.
ವಿಮಾನ ಟಿಕೆಟ್ ದರ ದುಬಾರಿ
ನಾನು ಮೈಸೂ ರಿಗೆ ಹೊರಡುವಾಗ ವಿಮಾನದ ದರ ೨೪ ಸಾವಿರ ರೂ.ಗಳಿತ್ತು. ಆದರೆ ಉಕ್ರೇನ್‌ನಲ್ಲಿ ಉಳಿದಿರುವ ಸ್ನೇಹಿತರ ಬಳಿ ಕೇಳಿದಾಗ ಸದ್ಯದ ವಿಮಾನ ಟಿಕೆಟ್ ದರ ಸರಿ ಸುಮಾರು ೮೦ ಸಾವಿರದಿಂದ ೨ ಲಕ್ಷ ರೂ. ವರೆಗೂ ತಲುಪಿದೆ. ಈ ಕಾರಣದಿಂದ ವಿದ್ಯಾರ್ಥಿಗಳು ಭಾರತಕ್ಕೆ ಮರಳಲು ಸಾಧ್ಯವಾಗು ತ್ತಿಲ್ಲ. ಭಾರತ ಸರ್ಕಾರ ಏರ್‌ಲಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.
ದೂರದ ಉಕ್ರೇನ್‌ನಲ್ಲಿ ಮಗಳು ಒಬ್ಬಳೇ ಇದ್ದಾಳೆ. ಇತ್ತ ಯುದ್ಧ ನಡೆಯುತ್ತಿದೆ ಎಂದು ವಾಹಿನಿಗಳಲ್ಲಿ ಪ್ರಸಾರವಾಗುತ್ತಿದೆ. ಅದನ್ನು ನೋಡಿ ಆತಂಕ ಹೆಚ್ಚಿತ್ತು. ಕಾಲೇಜಿನ ಸಂಬAಧಪಟ್ಟ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೆವು, ಅವರ ತಂದೆ ಅವಳಿಗೆ ಕರೆ ಮಾಡಿ ಆತ್ಮತೈರ್ಯ ತುಂಬಿದರು. ಎಂದು ಪ್ರಿಯಾಂಕ ತಾಯಿ ರೀನಾ ಕುಮಾರಿ ಮತ್ತೊಬ್ಬ ವಿದ್ಯಾರ್ಥಿನಿಯ ಪೋಷಕರ ಸ್ಥಿತಿಯನ್ನು ತಿಳಿಸಿದರು.
ಸಮರ ಶಕ್ತಿಯಲ್ಲಿ ರಷ್ಯಾ-ಉಕ್ರೇನ್ ನಡುವೆ ಅಜಗಜಾಂತರ ವ್ಯತ್ಯಾಸ
ನವದೆಹಲಿ, ಫೆ.೨೪-ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದು, ಈ ವಿದ್ಯಮಾನ ಮೂರನೇ ಮಹಾಯುದ್ಧಕ್ಕೆ ಕಾರಣವಾಗಿಬಿಡಬಹುದೇ? ಎಂದು ಅನೇಕ ಜಾಗತಿಕ ನಾಯಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈ ಎರಡೂ ದೇಶಗಳ ಸೇನಾ ಶಕ್ತಿಯನ್ನು ಹೋಲಿಸಿ ನೋಡುವುದಾದರೆ ರಷ್ಯಾ ಮತ್ತು ಉಕ್ರೇನ್ ನಡುವೆ ಅಜಗಜಾಂತರ ವ್ಯತ್ಯಾಸ ಇದೆ. ಅದಾಗ್ಯೂ ಕೂಡ ರಷ್ಯಾವನ್ನು ಒಂದು ಕೈ ನೋಡೇ ಬಿಡೋಣ ಎಂದು ಉಕ್ರೇನ್ ಪ್ರತಿದಾಳಿ ನಡೆಸುತ್ತಿದೆ. ರಷ್ಯಾದ ಎಲ್ಲಾ ಸೇನಾ ವಿಭಾಗದಲ್ಲಿ ೮.೫೦ ಲಕ್ಷ ಸಕ್ರಿಯ ಸೇನಾ ಸಿಬ್ಬಂದಿ ಇದ್ದರೆ, ಉಕ್ರೇನ್ ಕೇವಲ ೨.೫೦ ಲಕ್ಷ ಸಕ್ರಿಯ ಸೇನಾ ಸಿಬ್ಬಂದಿ ಹೊಂದಿದೆ. ರಷ್ಯಾದಲ್ಲಿ ೧೨,೫೦೦ ಸೇನಾ ಟ್ಯಾಂಕರ್‌ಗಳು ಇದ್ದರೆ, ಉಕ್ರೇನ್ ಕೇವಲ ೨,೬೦೦ ಸೇನಾ ಟ್ಯಾಂಕ್‌ಗಳನ್ನು ಹೊಂದಿದೆ. ೩೦ ಸಾವಿರಕ್ಕೂ ಅಧಿಕ ಸಶಸ್ತç ವಾಹನ ಗಳನ್ನು ರಷ್ಯಾ ಹೊಂದಿದ್ದರೆ, ಉಕ್ರೇನ್ ೧೨,೦೦೦ ಸಶಸ್ತç ವಾಹನಗಳನ್ನು ಮಾತ್ರ ಹೊಂದಿದೆ. ರಷ್ಯಾ ಬಳಿ ೧೪ ಸಾವಿರಕ್ಕೂ ಅಧಿಕ ಫಿರಂಗಿಗಳಿದ್ದರೆ, ಉಕ್ರೇನ್ ಬಳಿ ಕೇವಲ ೩ ಸಾವಿರ ಫಿರಂಗಿಗಳಿವೆ. ೬೦೦ಕ್ಕೂ ಅಧಿಕ ಬೃಹತ್ ನೌಕಾ ವಾಹನಗಳನ್ನು ರಷ್ಯಾ ಹೊಂದಿದೆ. ಕೇವಲ ೩೦ ಬೃಹತ್ ನೌಕಾ ವಾಹನಗಳನ್ನು ಉಕ್ರೇನ್ ಹೊಂದಿದೆ. ೭೦ ಬೃಹತ್ ಜಲಾಂತರ್ಗಾಮಿಗಳು ರಷ್ಯಾ ಬಳಿ ಇವೆ. ಆದರೆ, ಉಕ್ರೇನ್ ಬಳಿ ರಷ್ಯಾ ಹೊಂದಿರುವAತಹ ಶಕ್ತಿಶಾಲಿ ಜಲಾಂತರ್ಗಾಮಿ ಒಂದೂ ಇಲ್ಲ. ಇನ್ನು ೪,೧೦೦ ಯುದ್ಧ ವಿಮಾನಗಳು ರಷ್ಯಾ ಬಳಿ ಇವೆ. ಇದರಲ್ಲಿ ೭೨೨ ಫೈಟರ್ ಜೆಟ್ ಗಳಾಗಿವೆ. ಆದರೆ, ೩೧೮ ಯುದ್ಧ ವಿಮಾನಗಳಲ್ಲಿ ೬೯ ಪೈಟರ್ ಜೆಟ್‌ಗಳನ್ನು ಮಾತ್ರ ಉಕ್ರೇನ್ ಹೊಂದಿದೆ. ಇನ್ನೊಂದು ವಿಶೇಷವೆಂದರೆ ರಷ್ಯಾ ವಾರ್ಷಿಕವಾಗಿ ೬೭.೭ ಬಿಲಿಯನ್ ಯುಎಸ್ ಡಾಲರ್ ರಕ್ಷಣಾ ವಲಯಕ್ಕೆ ಖರ್ಚು ಮಾಡಿದರೆ ಉಕ್ರೇನ್ ಕೇವಲ ೫.೯ ಬಿಲಿಯನ್ ಯುಎಸ್ ಡಾಲರ್ ಖರ್ಚು ಮಾಡುತ್ತದೆ.
ವಾಪಸ್ಸಾಗಲು ಇಚ್ಛಿಸುವವರಿಗೆ ಸಹಾಯ ಹಸ್ತ
ಮೈಸೂರು, ಫೆ.೨೪- ಮೈಸೂರಿನ ಹಲವು ಮಂದಿ ಉಕ್ರೇನ್‌ನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿ ಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಉಕ್ರೇನ್‌ನಲ್ಲಿ ಮೈಸೂರಿನವರು ಎಷ್ಟು ಮಂದಿ ಇದ್ದಾರೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಅಲ್ಲಿಂದ ವಾಪಸ್ಸಾಗಲು ಇಚ್ಛಿಸುವವರ ಬಗ್ಗೆ ಮಾಹಿತಿ ನೀಡಿದರೆ ಮುಂದಿನ ಕ್ರಮ ವಹಿಸಲಾಗುವುದು. ಸದ್ಯ ಉಕ್ರೇನ್‌ನಿಂದ ನಿರ್ಗ ಮಿಸಲು ಇಚ್ಛಿಸಿರುವ ಓರ್ವ ವಿದ್ಯಾರ್ಥಿನಿ ಹೆಸರನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಪ್ರತಿಕ್ರಿಯಿಸಿ, ಜಿಲ್ಲೆಯ ಗ್ರಾಮಾಂತರ ಪ್ರದೇಶ ದವರು ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯ ವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರ ಸಂಪರ್ಕ ಸಾಧ್ಯವಾಗಲಿಲ್ಲ. ಉಕ್ರೇನ್‌ನ ಖಾರ್ಕಿವ್ ರಾಷ್ಟಿçÃಯ ವೈದ್ಯಕೀಯ ವಿಶ್ವ ವಿದ್ಯಾಲಯದಲ್ಲಿ ಮೈಸೂರಿನ ೧೧ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಅಭ್ಯಾಸ ಮಾಡು ತ್ತಿದ್ದಾರೆ. ಈ ಪೈಕಿ ನಾಲ್ವರು ವಿದ್ಯಾರ್ಥಿನಿ ಯರಿದ್ದಾರೆ ಎಂದು ತಿಳಿದುಬಂದಿದೆ.
ವೀಡಿಯೋ ಕಾಲ್ ಮೂಲಕ ಉಕ್ರೇನ್ ಪ್ರಸಕ್ತ ಸ್ಥಿತಿ ವಿವರಿಸಿದ ಕೆ.ಆರ್.ನಗರದ ಚಂದನ್ ಪ್ರಕಾಶ್ ಶೆಟ್ಟಿ
ಇಂದು ಮೈಸೂರಿಗೆ ಬರಬೇಕಾಗಿದ್ದ ಮೈಸೂರು ತಾಲೂಕು ಕೆ.ಆರ್.ನಗರದ ನಿವಾಸಿ ಚಂದನ್ ಪ್ರಕಾಶ್ ಶೆಟ್ಟಿ ಅವರು ಪ್ರಸ್ತುತ ಉಕ್ರೇನ್‌ನ ಸ್ಥಿತಿಯನ್ನು ವಿಡಿಯೋ ಕಾಲ್ ಮುಖಾಂತರ ‘ಮೈಸೂರು ಮಿತ್ರ’ನಿಗೆ ವಿವರಿಸಿದರು. ಉಕ್ರೇನ್‌ನ ಚೆರ್ನಿವಿಟ್ಸಿಯ ಬುಕೊವಿ ನಿಯನ್ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಮಾಡುತ್ತಿ ರುವ ಚಂದನ್‌ಪ್ರಕಾಶ್ ಶೆಟ್ಟಿ , ಭಾರತೀಯ ರಾಯಭಾರಿ ಸಂಸ್ಥೆಯ ಮಾಹಿತಿ ಮೇರೆಗೆ ಇಂದು ಭಾರತಕ್ಕೆ ಮರಳಲು ಎಲ್ಲಾ ರೀತಿ ಸಿದ್ಧತೆ ಮಾಡಿಕೊಂಡಿದ್ದೇ. ಆದರೆ ರಷ್ಯಾ ಉಕ್ರೇನ್ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದೆ. ಇದರಿಂದ ಎಲ್ಲಾ ವಿಮಾನ ಸಂಚಾರಗಳು ರದ್ದಾಗಿದೆ. ಎಲ್ಲವೂ ಸರಿ ಇದ್ದಿದ್ದರೆ ಇಂದು ನಾನು ಮೈಸೂರು ತಲುಪುತ್ತಿದ್ದೆ ಎಂದರು.
ಪ್ರತಿ ಅರ್ಧ ತಾಸಿಗೆ ಕರೆ : ಉಕ್ರೇನ್‌ನಲ್ಲಿ ಯುದ್ಧ ಎಂದ ತಕ್ಷಣ ಮನೆಯಿಂದ ತಂದೆ-ತಾಯಿ ಪ್ರತಿ ಅರ್ಧ ತಾಸಿಗೊಮ್ಮೆ ಕರೆ ಮಾಡಿ ‘ಸದ್ಯ ಏನಾಗುತ್ತಿದೆ. ನೀನು ಎಚ್ಚರದಿಂದ ಇರು ಹಾಗೂ ಮೊದಲು ನಿನಗೆ ಊಟಕ್ಕೆ ಏನು ಬೇಕು, ನೀರನ್ನು ಸಂಗ್ರಹಿಸು’ ಎಂದು ತಿಳಿಸುತ್ತಿದ್ದಾರೆ. ಅದರಂತೆ ಊಟಕ್ಕೆ ಬೇಕಾದ ಕೆಲ ಪದಾರ್ಥಗಳನ್ನು ಖರೀದಿ ಮಾಡಿಕೊಂಡಿದ್ದೇನೆ. ತಂದೆ ನಿರಂತರವಾಗಿ ಭಾರತೀಯ ರಾಯಭಾರಿ ಸಂಸ್ಥೆಯ ಸಂಪರ್ಕದಲ್ಲಿದ್ದಾರೆ ಎಂದರುಉಕ್ರೇನ್ ಪರಿಸ್ಥಿತಿ : ಯಾರು ಮನೆಯಿಂದ ಹೊರಗಡೆ ಬರುತ್ತಿಲ್ಲ. ರಷ್ಯಾ ದಾಳಿ ನಡೆಸಿ ಉಕ್ರೇನ್‌ನ ಕೆಲ ಭಾಗಗಳನ್ನು ತನ್ನ ಹಿಡಿತಕ್ಕೆ ಪಡೆದುಕೊಂಡಿದೆ. ಕಾಲೇಜಿನ ಹಾಸ್ಟೆಲ್‌ಗಳಲ್ಲಿ ಇರುವವರು ಅಲ್ಲಿಯೇ ವಾಸವಾಗಿದ್ದಾರೆ. ಭಾರತ ಸರ್ಕಾರ ನಮ್ಮನ್ನೂ ಇಲ್ಲಿಂದ ಕರೆದುಕೊಂಡು ಹೋಗಲು ಎಲ್ಲ ರೀತಿ ಸಿದ್ಧತೆಗಳನ್ನು ಮಾಡಿ ಕೊಂಡಿದೆ. ಅದರಂತೆ ನಮಗೂ ನೀವು ಅಗತ್ಯ ವಿರುವ ಎಲ್ಲಾ ದಾಖಲೆಗಳು ಹಾಗೂ ನಿಮ್ಮ ವಸ್ತು ಗಳನ್ನು ಪ್ಯಾಕ್ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ ಎಂದು ಅವರ ಸದ್ಯದ ಪರಿಸ್ಥಿತಿ ಬಗ್ಗೆ ವಿವರಿಸಿದರು.ಮೈಸೂರಿನ ಕುವೆಂಪುನಗರ ಶಿವಕುಮಾರ್ ಮತ್ತು ಗೀತ ದಂಪತಿ ಪುತ್ರಿ ಐಸಿರಿ ಉಕ್ರೇನ್‌ನ ತಾರ ಶಿವಶಂಕು ವಿಶ್ವವಿದ್ಯಾನಿಲ ಯದಲ್ಲಿ ನಾಲ್ಕನೇ ವರ್ಷದ ಮೆಡಿಕಲ್ ವಿದ್ಯಾರ್ಥಿಯಾ ಗಿದ್ದಾರೆ. ಅವರಿಗೆ ಇಂದು ಭಾರತಕ್ಕೆ ವಾಪಾಸ್ಸಾಗ ಬೇಕಿತ್ತು. ಇಂದು ವಿಮಾನ ಹತ್ತಿದ್ದರೇ ಮೈಸೂರು ತಲು ಪುತ್ತಿದ್ದಳು. ಆದರೆ ಅಲ್ಲಿನ ಏರ್‌ಪೊರ್ಟ್ ಮೇಲೆ ದಾಳಿಯಾಗಿ ಎಲ್ಲ ವಿಮಾನಗಳು ರದ್ದಾದ ಹಿನ್ನೆಲೆ ಅಲ್ಲಿಯೇ ಉಳಿಯುವ ಸ್ಥಿತಿ ಉಂಟಾಗಿದೆ ಎಂದು ತಾಯಿ ಗೀತ ತಿಳಿಸಿದರು.
ಮಗಳು ಸುರಕ್ಷಿತವಾಗಿದ್ದು, ವಿಡಿಯೋ ಕಾಲ್ ಮುಖಾಂತರ ನಿರಂತರ ಸಂಪರ್ಕದಲ್ಲಿದ್ದಾಳೆ ನೀವು ಗಾಬರಿಯಾಗ ಬೇಡಿ ಎಂದು ನಮಗೆ ಧೈರ್ಯ ಹೇಳಿದ್ದಾಳೆ ಎಂದ ಅವರು ಉಕ್ರೇನ್ ನಲ್ಲಿರುವ ಭಾರತದ ರಾಯಬಾರಿ ಸಂಸ್ಥೆ ನಿರಂತರ ವಾಗಿ ಪ್ರತಿ ಕ್ಷಣದ ಮಾಹಿತಿಯನ್ನು ನಮಗೆ ತಲುಪಿಸುತ್ತಿದೆ. ಅವರು ಎಲ್ಲಾ ರೀತಿಯÀ ಸಹಕಾರ ನೀಡುತ್ತಿದ್ದಾರೆ. ಯಾವುದೇ ತೊಂದರೆಯಾಗದAತೆ ವಿದ್ಯಾರ್ಥಿಗಳನ್ನು ಭಾರತಕ್ಕೆ ಕಳಿಸುತ್ತೇವೆ ಎಂಬ ಅಭಯ ನೀಡಿದ್ದಾರೆ ಎಂದರು.
ಉಕ್ರೇನ್‌ನಲ್ಲಿರುವ ಕರ್ನಾಟಕ ವಿದ್ಯಾರ್ಥಿಗಳ ರಕ್ಷಣೆಗೆ ನೋಡೆಲ್ ಅಧಿಕಾರಿ ನೇಮಕ: ಸಹಾಯವಾಣ ಆರಂಭ
ಬೆAಗ ಳೂರು, ಫೆ.೨೪- ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆ ಯಲ್ಲಿ ಉಕ್ರೇನ್‌ನಲ್ಲಿರುವ ಕರ್ನಾಟಕ ಮೂಲದ ವಿದ್ಯಾರ್ಥಿಗಳ ರಕ್ಷಣೆಗಾಗಿ ಕರ್ನಾಟಕ ಸರ್ಕಾರವು ಅಗತ್ಯ ಕ್ರಮ ತೆಗೆದು ಕೊಂಡಿದೆ. ಈ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅಧಿಸೂಚನೆ ಹೊರಡಿಸಿದ್ದಾರೆ.
ಉಕ್ರೇನ್‌ನಲ್ಲಿ ಪ್ರಸ್ತುತ ಮಿಲಿಟರಿ ಕಾನೂನು ಜಾರಿ ಮಾಡ ಲಾಗಿದೆ. ಮುಂದೇನಾಗಲಿದೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಗೊತ್ತಿಲ್ಲ. ಉಕ್ರೇನ್‌ನ ವಾಯುಮಾರ್ಗವನ್ನು ಮುಚ್ಚಲಾಗಿದೆ. ವಿಶೇಷ ವಿಮಾನಗಳನ್ನು ರದ್ದುಪಡಿಸಲಾಗಿದೆ. ಹೀಗಾಗಿ ಭಾರತದ ಜನರು ಮತ್ತು ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಸಮಸ್ಯೆ ಯಾಗಿದೆ. ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿರುವ ಎಲ್ಲ ಭಾರತೀಯರನ್ನು ರಕ್ಷಿಸಲು ಯತ್ನಿಸುತ್ತಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಕರ್ನಾಟಕದ ಸಾಕಷ್ಟು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿ ದ್ದಾರೆ. ಇವರ ರಕ್ಷಣೆಗಾಗಿ ಮುಖ್ಯಮಂತ್ರಿ ಕಚೇರಿ ಮತ್ತು ಮುಖ್ಯ ಕಾರ್ಯದರ್ಶಿ ಸತತ ಪ್ರಯತ್ನ ನಡೆಸುತ್ತಿದ್ದಾರೆ. ವಿದೇಶಾಂಗ ವ್ಯವಹಾರಗಳ ಇಲಾಖೆ ಹಾಗೂ ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಮುಖ್ಯಮಂತ್ರಿ ಕಚೇರಿ ಸತತ ಸಂಪರ್ಕದಲ್ಲಿದೆ. ಅಲ್ಲಿನ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ನೆರವು ಒದಗಿಸಲು ವಿದೇಶಾಂಗ ವ್ಯವಹಾರಗಳ ಇಲಾಖೆ ಶ್ರಮಿಸುತ್ತಿದೆ. ಇದಕ್ಕಾಗಿ ಭಾರತ ಸರ್ಕಾ ರವು ೨೪ಘಿ೭ ಕಾರ್ಯನಿರ್ವಹಿಸುವ ಸಹಾಯವಾಣ ಗಳನ್ನು ಆರಂಭಿಸಿದೆ ಎಂದು ಹೇಳಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಕನ್ನಡಿಗರನ್ನು ಕರೆತರಲು ಕರ್ನಾಟಕ ಸರ್ಕಾರವು ಐಎಫ್‌ಎಸ್ ಅಧಿಕಾರಿ, ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯದರ್ಶಿ ಡಾ.ಮನೋಜ್ ರಾಜನ್ ಅವರನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಿದೆ. ಮುಂದಿನ ದಿನಗಳಲ್ಲಿ ಇವರು ವಿದೇಶಾಂಗ ವ್ಯವಹಾರಗಳ ಇಲಾಖೆಯೊಂದಿಗೆ ಸಹ ಯೋಗ ದಿಂದ ಕೆಲಸ ಮಾಡಿ, ಉಕ್ರೇನ್‌ನಲ್ಲಿರುವ ಕನ್ನಡಿಗರನ್ನು ವಾಪಸ್ ಕರ್ನಾಟಕಕ್ಕೆ ಕರೆತರಲು ಯತ್ನಿಸಲಿದ್ದಾರೆ ಎಂದು ಅಧಿಸೂಚನೆ ಯಲ್ಲಿ ತಿಳಿಸಲಾಗಿದೆ. ಅಗತ್ಯ ಇರುವವರು ಯಾವುದೇ ದಿನ, ಯಾವುದೇ ಸಮಯದಲ್ಲಿ ೨೪ಘಿ೭ ಸಹಾಯವಾಣ ಯನ್ನು ಸಂಪರ್ಕಿಸಬಹುದು. ದೂ.ಸಂಖ್ಯೆ: 080 1070, 080 2234 0676. ಇಮೇಲ್: [email protected], revenued mkar @gmail.com ಸಂಪರ್ಕಿಸಬಹುದು. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಇಲಾಖೆಯೂ ನಿಯಂತ್ರಣ ಕೇಂದ್ರ ಸ್ಥಾಪಿಸಿದ್ದು, +91 11 2301 2113, +91 11 2301 4104, +91 11 2301 7905. ಟೋಲ್ ಫ್ರೀ ಸಂಖ್ಯೆ 1800 11 8797 (ದೆಹಲಿ). ಇಮೇಲ್:[email protected]