- ಮೂರೂ ದಿಕ್ಕಿನಿಂದ ಮುಗಿಬಿದ್ದ ರಷ್ಯಾ ಸೇನೆ
- ಉಕ್ರೇನ್‌ನಲ್ಲಿ ಕ್ಷಿಪಣ , ಟ್ಯಾಂಕರ್‌ಗಳ ಅಗ್ನಿ ನರ್ತನ: ವಿಮಾನ ನಿಲ್ದಾಣ,೧೧ ವಾಯುನೆಲೆ, ೭೪ ಸೇನಾನೆಲೆ ದ್ವಂಸ: ವಿಮಾನ ಸಂಚಾರ ಸ್ಥಗಿತ
- ರಷ್ಯಾಕ್ಕೆ ಸೆಡ್ಡು ಹೊಡೆದ ಉಕ್ರೇನ್ಉ
- ಕ್ರೇನ್‌ನಿನ೫೦ ಮಂದಿ ಬಲಿ; ರಷ್ಯಾದ ೫೦ ಯೋಧರ ಸಾವು
- ಸಮರಕ್ಕೆ ಸಜ್ಜಾಗಿ: ದೇಶದ ನಾಗರಿಕರಿಗೆ ಉಕ್ರೇನ್ ಅಧ್ಯಕ್ಷ ಕರೆ
ಮಾಸ್ಕೋ(ರಷ್ಯಾ), ಫೆ.೨೪-ನೆರೆ ರಾಷ್ಟç ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿದೆ. ಗುರುವಾರ ಬೆಳಗ್ಗೆ ೮.೩೦ರ ಸುಮಾರಿನಲ್ಲಿ ರಷ್ಯಾ ಪಡೆಗಳು ಮೂರೂ ದಿಕ್ಕುಗಳಿಂದ ಉಕ್ರೇನ್ ಮೇಲೆ ದಾಳಿ ನಡೆಸಿವೆ. ವರದಿಗಳ ಪ್ರಕಾರ ಇಂದು ಬೆಳಗ್ಗೆ ೪೦ ಉಕ್ರೇನ್ ಸೈನಿಕರು ಮತ್ತು ೧೦ ನಾಗರಿಕರು ಬಲಿಯಾಗಿ ದ್ದಾರೆ. ಮತ್ತೊಂದೆಡೆ ರಷ್ಯಾದ ೫೦ ಯೋಧರನ್ನು ಬಲಿ ಪಡೆದಿರುವ ಉಕ್ರೇನ್, ೬ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ. ಇಂದು ಬೆಳಗ್ಗೆ ರಷ್ಯಾ ಪಡೆಗಳು ಉಕ್ರೇನ್‌ನ ಬೆಲಾರಸ್, ಕ್ರಿಮಿಯಾ ಮತ್ತು ಪೂರ್ವ ಭಾಗದ ಮೂಲಕ ಉಕ್ರೇನ್ ಮೇಲೆ ಬಾಂಬ್ ದಾಳಿ ನಡೆಸಿದೆ. ಉಕ್ರೇನ್‌ನ ಕೀವ್, ಬಾರ್ಕೇವಾ, ಒಡೆಸಾ, ಮಾಮ್ ಪ್ರೀತ್, ಕ್ರಾಮ್‌ಬೊರೆಸ್ಕೆ ಸೇರಿದಂತೆ ೧೧ ನಗರಗಳನ್ನು ಗುರಿಯಾಗಿಟ್ಟುಕೊಂಡು ರಷ್ಯಾ ಪಡೆಗಳು ಕ್ಷಿಪಣ ದಾಳಿ ನಡೆಸಿವೆ. ಪ್ರಮುಖವಾಗಿ ವಾಯುನೆಲೆಗಳು ಮತ್ತು ಸೇನಾನೆಲೆಗಳನ್ನು ಗುರಿಯಾಗಿಸಿಕೊಂಡು ಮೊದಲಿಗೆ ರಷ್ಯಾ ಯುದ್ಧ ವಿಮಾನಗಳು ಕ್ಷಿಪಣ ದಾಳಿ ನಡೆಸಿದವು. ಮತ್ತೊಂದೆಡೆ ಉಕ್ರೇನ್‌ನ ಕೀವ್ ನಗರಕ್ಕೆ ರಷ್ಯಾದ ಟ್ಯಾಂಕರ್‌ಗಳು ನುಗ್ಗಿವೆ. ರಷ್ಯಾ ಪಡೆಗಳ ಜೊತೆ ಉಕ್ರೇನ್ ಪಡೆಗಳು ಪ್ರತಿದಾಳಿಗೆ ಇಳಿದಿದ್ದು, ಈ ಪ್ರದೇಶದಲ್ಲಿ ಭಾರೀ ಪ್ರಮಾಣ ದಲ್ಲಿ ಸ್ಫೋಟಕದ ಸದ್ದು ಕೇಳಿಬರುತ್ತಿದ್ದು, ನಾಗರಿಕರು ಬೆಚ್ಚಿ ಬಿದ್ದಿದ್ದಾರೆ.
ಯುದ್ಧ ನಡೆಯುತ್ತಿರುವುದರಿಂದ ಉಕ್ರೇನ್ ನಾಗರಿಕರು ಅತ್ಯಾವಶ್ಯಕ ವಸ್ತು ಗಳ ಸಂಗ್ರಹದಲ್ಲಿ ತೊಡಗಿಕೊಂಡಿದ್ದಾರೆ. ಹಣ ಡ್ರಾ ಮಾಡಲು ಎಟಿಎಂಗಳಿಗೆ ಜನರು ಮುಗಿ ಬಿದ್ದಿದ್ದಾರೆ. ಅಂಗಡಿಗಳಲ್ಲಿ ದಿನಸಿ ಮತ್ತಿತರ ದಿನನಿತ್ಯ ಪದಾರ್ಥ ಗಳನ್ನು ಪಡೆಯಲು ಜನರು ಹಾತೊರೆ ಯುತ್ತಿದ್ದು, ಹಲವು ಅಂಗಡಿಗಳಲ್ಲಿ ಆಹಾರ ಪದಾರ್ಥಗಳ ಸಂಗ್ರಹ ಖಾಲಿ ಯಾಗಿದೆ. ಯುದ್ಧ ಮುಂದುವರೆದರೆ ಆಹಾರಕ್ಕಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಭೀತಿಗೆ ಉಕ್ರೇನ್ ನಾಗರಿಕರು ಒಳಗಾಗಿದ್ದಾರೆ.
ಕೀವ್‌ನ ವಾಯುನೆಲೆ ಬಳಿಯೇ ರಷ್ಯಾ ಪಡೆಗಳು ಕ್ಷಿಪಣ ದಾಳಿ ನಡೆಸಿದ ಪರಿಣಾಮ ವಾಗಿ ಉಕ್ರೇನ್‌ನ ವಾಯುನೆಲೆಗಳನ್ನು ಮುಚ್ಚಲಾಗಿದೆ. ವಿಶೇಷ ವಿಮಾನ ಹಾರಾಟ ಕೂಡ ರದ್ದುಪಡಿಸಲಾಗಿದೆ. ಈ ಮಧ್ಯೆ ೧೪ ಯೋಧರಿದ್ದ ರಷ್ಯಾ ಯುದ್ಧ ವಿಮಾನ ವನ್ನು ಕೀವ್‌ನಿಂದ ದಕ್ಷಿಣಕ್ಕೆ ಹೊಡೆ ದುರುಳಿಸಲಾಗಿದೆ ಎಂದು ಉಕ್ರೇನ್ ಇಂದು ಸಂಜೆ ತಿಳಿಸಿದೆ. ಉಕ್ರೇನ್ ಮೇಲೆ ರಷ್ಯಾ ಸೇನಾಪಡೆ ಕಾರ್ಯಾಚರಣೆಗಿಳಿ ಯುತ್ತಿದ್ದಂತೆಯೇ ದೇಶವನ್ನುದ್ದೇಶಿಸಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟೀನ್ ಉಕ್ರೇನ್ ಮೇಲಿನ ಯುದ್ಧವನ್ನು ಅಧಿಕೃತವಾಗಿ ಘೋಷಿಸಿದರು. `ನಮ್ಮ ದೇಶ ಮತ್ತು ನಮ್ಮ ಜನರಿಗೆ ಬೆದರಿಕೆ ಉಂಟು ಮಾಡಲು ಪ್ರಯತ್ನಿಸಿದರೆ ಮತ್ತು ನಮ್ಮ ವಿಷಯದಲ್ಲಿ ಬೇರೆ ಯಾರಾದರೂ ಮಧ್ಯ ಪ್ರವೇಶಿಸಲು ಮುಂದಾದರೆ ತಕ್ಷಣವೇ ರಷ್ಯಾ ಪ್ರತಿಕ್ರಿಯೆ ನೀಡಲಿದೆ. ಹಿಂದೆAದೂ ಅನುಭವಿಸದಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಎಂದು ಅವರು ಘೋಷಿಸಿದರು. ಮತ್ತೊಂದೆಡೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ರಷ್ಯಾಗೆ ಸೆಡ್ಡು ಹೊಡೆದಿದ್ದು, ನಮ್ಮ ದೇಶ ರಷ್ಯಾಗೆ ತಲೆ ಬಾಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ೨ನೇ ವಿಶ್ವ ಯುದ್ಧ ಸಂದರ್ಭದಲ್ಲಿ ನಾಜಿ ಜರ್ಮನಿ ಮಾದರಿಯಲ್ಲಿ ರಷ್ಯಾ ನಮ್ಮ ಮೇಲೆ ದಾಳಿ ನಡೆಸಿದೆ. ರಷ್ಯಾ ದುಷ್ಟ ಮಾರ್ಗವನ್ನು ಅನುಸರಿಸಿದೆ. ಆದರೆ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ. ಮಾಸ್ಕೋ ಯಾವ ಕ್ರಮ ಕೈಗೊಂಡರೂ ಉಕ್ರೇನ್ ತನ್ನ ಸ್ವಾತಂತ್ರö್ಯ ವನ್ನು ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮತ್ತೊಂದೆಡೆ ತನ್ನ ನಾಗರಿ ಕರನ್ನು ರಷ್ಯಾ ವಿರುದ್ಧ ಯುದ್ಧಕ್ಕೆ ಸಜ್ಜಾಗುವಂತೆ ಉಕ್ರೇನ್ ಅಧ್ಯಕ್ಷರು ಕರೆ ನೀಡಿದ್ದಾರೆ. ನಮ್ಮ ನಗರಗಳ ರಸ್ತೆಗಳಲ್ಲಿ ಉಕ್ರೇನ್ ಪರ ನಿಲ್ಲಲು ನಾಗರಿಕರೆಲ್ಲಾ ಸಿದ್ಧರಾಗಿರಿ ಎಂದಿರುವ ಅವರು, ದೇಶವನ್ನು ರಕ್ಷಿಸಲು ಬಯಸುವ ಎಲ್ಲರಿಗೂ ಶಸ್ತಾçಸ್ತçಗಳನ್ನು ನೀಡುತ್ತೇವೆ. ಕೈಯ್ಯಲ್ಲಿ ಶಸ್ತಾçಸ್ತç ಹಿಡಿದು ರಷ್ಯಾ ವಿರುದ್ಧ ಹೋರಾಡಿ ದೇಶವನ್ನು ರಕ್ಷಿಸಲು ಸಿದ್ಧರಾಗುವ ನಾಗರಿಕರ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕುತ್ತೇವೆ ಎಂದು ಅವರು ಹೇಳಿದ್ದಾರೆ.