ಏ.1 ರಿಂದ ಆನ್‌ಲೈನ್ ಉದ್ದಿಮೆ ರಹದಾರಿ ನೀಡಲು ಪಾಲಿಕೆ ಸಿದ್ಧತೆ
ಮೈಸೂರು

ಏ.1 ರಿಂದ ಆನ್‌ಲೈನ್ ಉದ್ದಿಮೆ ರಹದಾರಿ ನೀಡಲು ಪಾಲಿಕೆ ಸಿದ್ಧತೆ

February 26, 2022

ಮೈಸೂರು, ಫೆ. ೨೫ (ಆರ್‌ಕೆ)- ಇನ್ನು ಮುಂದೆ ಉದ್ದಿಮೆ ರಹದಾರಿ (ಟ್ರೇಡ್ ಲೈಸೆನ್ಸ್)ಪಡೆಯುವುದು ಹಾಗೂ ಅದರ ನವೀಕರಣ ಪ್ರಕ್ರಿಯೆ ಸರಳವಾಗಿರಲಿದೆ.
ಪಾಲಿಕೆ ವಲಯ ಕಚೇರಿಗಳಿಗೆ ಅಲೆದು, ಕಾಲಹರಣ ತಪ್ಪಲಿದೆ. ತಂತ್ರಜ್ಞಾನ ಬಳಸಿಕೊಂಡು ಆನ್‌ಲೈನ್‌ನಲ್ಲಿ ಕುಳಿತಲ್ಲೇ ಟ್ರೇಡ್ ಲೈಸೆನ್ಸ್ ಪಡೆಯುವ ಪದ್ಧತಿ ಜಾರಿಗೆ ತರಲು ಮೈಸೂರು ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ.

ಮೈಸೂರು ನಗರದಲ್ಲಿ ಸ್ವಚ್ಛತೆ, ರಸ್ತೆ, ಒಳಚರಂಡಿ, ಬೀದಿ ದೀಪ, ಶೌಚಾಲಯ, ಆರೋಗ್ಯ, ಕುಡಿಯುವ ನೀರು ಪೂರೈಕೆ ಯಂತಹ ಮೂಲ ಸೌಕರ್ಯ ಒದಗಿಸಿ, ನಿರ್ವಹಣೆ ಮಾಡಲು ಅಗತ್ಯವಿರುವ ಆರ್ಥಿಕ ಸಂಪನ್ಮೂಲದ ಪ್ರಮುಖ ಅಂಗವಾಗಿ ರುವ ಟ್ರೇಡ್ ಲೈಸೆನ್ಸ್ ಶುಲ್ಕ ಸಂಗ್ರಹ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮೈಸೂರು ಮಹಾನಗರಪಾಲಿಕೆ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಸುಲಭ ಹಾಗೂ ಸರಳ ವಾಗಿ ಶೀಘ್ರಗತಿಯಲ್ಲಿ ಟ್ರೇಡ್ ಲೈಸೆನ್ಸ್ ಕಲ್ಪಿಸುವ ಉದ್ದಿಮೆದಾರರ ಸ್ನೇಹಿ ಕಾರ್ಯ ವಿಧಾನ ಅಳವಡಿಸಿಕೊಳ್ಳಲು ಮುಂದಾಗಿದೆ.

ಏಪ್ರಿಲ್ ೧ರಿಂದ ಆನ್‌ಲೈನ್‌ನಲ್ಲೇ ಉದ್ದಿಮೆ ರಹದಾರಿ ನೀಡುವ ನೂತನ ಯೋಜನೆ ಜಾರಿಗೊಳಿಸಲು ಪಾಲಿಕೆ ಆಯುಕ್ತ ಲಕ್ಷಿö್ಮÃ ಕಾಂತರೆಡ್ಡಿ ಅವರು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಎಲ್ಲಾ ೯ ವಲಯ ಕಚೇರಿ ಗಳಲ್ಲೂ ಸಿದ್ಧತಾ ಕಾರ್ಯ ಆರಂಭವಾಗಿದ್ದು, ತಮ್ಮ ವ್ಯಾಪ್ತಿಯಲ್ಲಿರುವ ಅಂಗಡಿ-ಮುAಗಟ್ಟು, ವಾಣ ಜ್ಯ ಚಟುವಟಿಕೆಗಳ ಮಾಹಿತಿ ಸಂಗ್ರಹಿಸಿ ಆನ್‌ಲೈನ್ ಪೋರ್ಟಲ್ ನಲ್ಲಿ ಜೋಡಿಸುವ ಪ್ರಕ್ರಿಯೆಯಲ್ಲಿ ವಲಯ ಆಯುಕ್ತರು ನಿರತರಾಗಿದ್ದಾರೆ.

ಪ್ರಸ್ತುತ ಚಾಲ್ತಿಯಲ್ಲಿರುವ ಉದ್ದಿಮೆ ರಹದಾರಿ ನವೀಕರಿಸಿಕೊಳ್ಳದಿರುವ ಉದ್ದಿಮೆಗಳು, ಟ್ರೇಡ್ ಲೈಸೆನ್ಸ್ ಅನ್ನೇ ಪಡೆಯದೇ ನಡೆಸುತ್ತಿರುವ ಉದ್ದಿಮೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅಪ್ ಲೋಡ್ ಮಾಡುವ ಕಾರ್ಯ ಭರದಿಂದ ಸಾಗಿದ್ದು, ಆ ಕೆಲಸಕ್ಕೆ ಆಯುಕ್ತರು ಎಲ್ಲಾ ವಲಯ ಕಚೇರಿಗಳಿಗೂ ಹೆಚ್ಚುವರಿ ಸಿಬ್ಬಂದಿಗಳನ್ನು ಒದಗಿಸಿದ್ದಾರೆ ಎಂದು ಶಾರದಾದೇವಿ ನಗರ ದಲ್ಲಿರುವ ಪಾಲಿಕೆ ವಲಯ ಕಚೇರಿ-೩ರ ವಲಯ ಆಯುಕ್ತ ಸತ್ಯಮೂರ್ತಿ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಉದ್ದಿಮೆದಾರರು ತಾವಿರುವಲ್ಲಿಂದಲೇ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿ ನಿಗದಿತ ಶುಲ್ಕವನ್ನೂ ಆನ್‌ಲೈನ್‌ನಲ್ಲೇ ಪಾವತಿಸಿದರೆ ಸಾಕು, ಟ್ರೇಡ್ ಲೈಸೆನ್ಸ್ ಜನರೇಟ್ ಆಗುತ್ತದೆ. ಅದನ್ನು ಡೌನ್ ಲೋಡ್ ಮಾಡಿಕೊಂಡು ತಮ್ಮ ಉದ್ದಿಮೆ ಸ್ಥಳದಲ್ಲಿ ಪ್ರದರ್ಶಿಸಬಹುದಾಗಿದ್ದು, ಇದರಿಂದ ಉದ್ದಿಮೆದಾರರು ಪಾಲಿಕೆ ಕಚೇರಿಗೆ ಬಂದು ಅರ್ಜಿ ಪಡೆದು ಭರ್ತಿ ಮಾಡಿ ಹಣ ಪಾವತಿಸಿ ಲೈಸೆನ್ಸ್ಗಾಗಿ ಕಾಯುವ ಪ್ರಮೇಯವೇ ಇರುವುದಿಲ್ಲ. ಸಮಯದ ಉಳಿತಾಯದ ಜೊತೆಗೆ ತೊಂದರೆಯೂ ತಪ್ಪುತ್ತದೆ ಎಂದು ಅವರು ತಿಳಿಸಿದರು.
ಈ ವ್ಯವಸ್ಥೆಯಿಂದ ಹೆಚ್ಚು ಮಂದಿ ಟ್ರೇಡ್ ಲೈಸೆನ್ಸ್ ಪಡೆದು ಅಧಿಕೃತವಾಗಿ ವ್ಯಾಪಾರ ಮಾಡುತ್ತಾರೆ. ಇದರಿಂದ ಪಾಲಿಕೆಗೆ ಅಧಿಕ ಆದಾಯ ಬರುತ್ತದೆ. ಸಾರ್ವಜನಿಕರಿಗೂ ಉಪಯೋಗವಾಗಲಿದೆ ಎಂದ ಸತ್ಯಮೂರ್ತಿ, ಮಾ. ೧೫ರಿಂದ ಆನ್ ಲೈನ್ ಟ್ರೇಡ್ ಲೈಸೆನ್ಸ್ ನೀಡುವುದನ್ನು ಟ್ರಯಲ್ ರನ್ ನಡೆಸಲಾಗುವುದು. ಪ್ರಾಯೋ ಗಿಕವಾಗಿ ಈ ಪದ್ಧತಿಯಲ್ಲಿ ಲೋಪದೋಷಗಳು ಕಂಡುಬAದಲ್ಲಿ ಸರಿಪಡಿಸಿಕೊಂಡು ಏ.೧ರಿಂದ ಸಂಪೂರ್ಣವಾಗಿ ಜಾರಿಗೆ ತರಬೇಕೆಂಬುದು ಆಯುಕ್ತರ ಉದ್ದೇಶವಾಗಿದೆ ಎಂದರು.

 

Translate »