ರಾಜ್ಯ ಚುನಾವಣಾ ಆಯುಕ್ತರ ಮೈಸೂರು ಪ್ರವಾಸ
ಮೈಸೂರು

ರಾಜ್ಯ ಚುನಾವಣಾ ಆಯುಕ್ತರ ಮೈಸೂರು ಪ್ರವಾಸ

December 6, 2018

ಮೈಸೂರು: 27ನೇ ರಾಷ್ಟ್ರೀಯ ಸಮ್ಮೇಳನಕ್ಕೆಂದು ಸೋಮ ವಾರ ಸಂಜೆ ಮೈಸೂರಿಗೆ ಆಗಮಿಸಿದ್ದ ದೇಶದ 19 ರಾಜ್ಯಗಳ ಚುನಾವಣಾ ಆಯು ಕ್ತರು, 3ನೇ ದಿನವಾದ ಇಂದು ಕುಟುಂಬ ಸಮೇತ ಮೈಸೂರು ಸುತ್ತಮುತ್ತಲ ಪ್ರವಾಸಿ ತಾಣಗಳನ್ನು ವೀಕ್ಷಿಸಿದರು.

ರಾಜ್ಯ ಚುನಾವಣಾ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಹಾಗೂ ರಾಜ್ಯ ಚುನಾ ವಣಾ ಆಯೋಗದ ಕಾರ್ಯದರ್ಶಿ ಡಿ. ಭಾರತಿ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಮೈಸೂರು ಅರಮನೆಗೆ ತೆರಳಿದ ಆಯು ಕ್ತರು ಹಾಗೂ ಅವರ ಕುಟುಂಬ ಸದಸ್ಯ ರನ್ನು ಅರಮನೆ ಮಂಡಳಿ ಉಪನಿರ್ದೇ ಶಕ ವಿ.ಎಸ್.ಸುಬ್ರಹ್ಮಣ್ಯ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಅಂಬಾವಿಲಾಸ ಅರಮನೆ ವೀಕ್ಷಿಸಿದ ಅವರಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಯಲ್ಲಿರುವ ಅರಮನೆ ಇತಿಹಾಸ ಕುರಿತ ಮಾಹಿತಿ ಪುಸ್ತಕವನ್ನು ಚುನಾವಣಾ ಆಯುಕ್ತರಿಗೆ ನೀಡಲಾಯಿತು. ಬೆಳಿಗ್ಗೆ 10.30ರಿಂದ 11.45 ಗಂಟೆವರೆಗೆ ಅರಮನೆ ಯಲ್ಲಿ ಕಾಲ ಕಳೆದ ಅವರಿಗೆ ಸುಬ್ರಹ್ಮಣ್ಯ ಅವರು ಮಾಹಿತಿ ನೀಡಿ, ಬೀಳ್ಕೊಟ್ಟರು.

ಮಧ್ಯಾಹ್ನ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ನಂತರ ಸಂಜೆ ಕೆಆರ್‍ಎಸ್‍ಗೆ ಭೇಟಿ ನೀಡಿ ರಾತ್ರಿ ಮೈಸೂರಿನ ಲಲಿತ ಮಹಲ್ ಪ್ಯಾಲೆಸ್ ಹೋಟೆಲಿನಲ್ಲಿ ವಾಸ್ತವ್ಯ ಹೂಡಿರುವ ರಾಜ್ಯ ಚುನಾವಣಾ ಆಯು ಕ್ತರು ಗುರುವಾರ ಬೆಳಿಗ್ಗೆ ತಂತಮ್ಮ ಸ್ಥಳ ಗಳಿಗೆ ಹಿಂದಿರುಗುವರು ಎಂದು ಭಾರತಿ ತಿಳಿಸಿದ್ದಾರೆ. ಮಂಗಳವಾರ ಸಂಜೆ 5.30 ಗಂಟೆವರೆಗೂ ಚುನಾವಣಾ ಸವಾಲುಗಳು, ತೊಡಕುಗಳ ನಿವಾರಣೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಚುನಾವಣಾ ಆಯುಕ್ತರು, ಕೈಗೊಂಡ ನಿರ್ಣಯಗಳ ಬಗ್ಗೆ ತಮಗೆ ಮಾಹಿತಿ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.

Translate »