ಇಂದು ಮೈಸೂರು ವಿವಿ 100ನೇ ಘಟಿಕೋತ್ಸವ
ಮೈಸೂರು

ಇಂದು ಮೈಸೂರು ವಿವಿ 100ನೇ ಘಟಿಕೋತ್ಸವ

October 19, 2020

ಮೈಸೂರು,ಅ.18(ಆರ್‍ಕೆಬಿ)- ಮೈಸೂರು ವಿಶ್ವವಿದ್ಯಾ ನಿಲಯದ 100ನೇ ಘಟಿಕೋತ್ಸವ ಸೋಮವಾರ ಬೆಳಗ್ಗೆ 10.30ಕ್ಕೆ ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಆರಂಭ ಗೊಳ್ಳಲಿದ್ದು, ಬೆಳಗ್ಗೆ 11.20ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಿಂದಲೇ ಡಿಜಿಟಲ್ ಮಾಧ್ಯಮದ ಮೂಲಕ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ಶತಮಾನದ ಘಟಿಕೋತ್ಸವ ವಾಗಿರುವುದರಿಂದ ವಿವಿಯ ಕಾರ್ಯಸೌಧ ಕ್ರಾಫರ್ಡ್ ಭವನವನ್ನು ಬಲು ಆಕರ್ಷಕ ವಾಗಿ ಸಿದ್ಧಗೊಳಿಸಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯರು, ಸಿಂಡಿಕೇಟ್ ಮತ್ತು ಶಿಕ್ಷಣ ಮಂಡಳಿ ಸದಸ್ಯರು ಹಾಗೂ 30 ಮಂದಿ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳು ಸೇರಿದಂತೆ 100 ಜನರಿಗಷ್ಟೇ ಪ್ರವೇಶ ಮಿತಗೊಳಿಸಲಾಗಿದೆ. ಕಾರ್ಯ ಕ್ರಮವನ್ನು ವೆಬ್‍ಸೈಟ್, ಯೂಟ್ಯೂಬ್, ಫೇಸ್‍ಬುಕ್ ನಲ್ಲಿ ನೇರ ವೀಕ್ಷಣೆಗೆ ಅವಕಾಶವಿದೆ. ಅಲ್ಲದೆ ಸೆನೆಟ್ ಭವನ, ವಿಜ್ಞಾನ ಭವನ ಮತ್ತು ಮಾನಸಗಂಗೋತ್ರಿ ಕ್ಯಾಂಪಸ್‍ನ ಶತಮಾನೋತ್ಸವ ಭವನ ಸಭಾಂಗಣದಲ್ಲಿ 3 ಬೃಹತ್ ಡಿಜಿಟಲ್ ಪರದೆಗಳನ್ನು ಅಳವಡಿಸಲಾಗಿದೆ. ಕಾರ್ಯಕ್ರಮದ ನೇರ ಪ್ರಸಾರವನ್ನು ಇಲ್ಲಿಯೂ ವೀಕ್ಷಿಸ ಬಹುದಾಗಿದೆ. ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಇದೇ ಸಂದರ್ಭ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಮೈವಿವಿ ಕುಲಾ ಧಿಪತಿಗಳಾದ ರಾಜ್ಯಪಾಲ ವಜುಭಾಯ್ ರೂಡಾ ಭಾಯ್ ವಾಲಾ ಅಧ್ಯಕ್ಷತೆ ವಹಿಸುವರು. ಉಪ ಮುಖ್ಯ ಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮುಖ್ಯ ಅತಿಥಿ ಯಾಗಿ ಭಾಗವಹಿಸುವರು. ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅತಿಥಿಗಳನ್ನು ಪರಿಚಯಿಸುವರು.

ಮಧ್ಯಾಹ್ನ 3ಕ್ಕೆ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದ್ದು, ಆಂಧ್ರ ಪ್ರದೇಶದ ಅನಂತಪುರಮು ಕೇಂದ್ರ ವಿವಿ ಕುಲಪತಿ ಪೆÇ್ರ.ಎಸ್.ಎ.ಕೋರಿ ಉಪಸ್ಥಿತರಿರುವರು. ಮೈವಿವಿ ಕುಲ ಪತಿ ಪ್ರೊ.ಜಿ.ಹೇಮಂತಕುಮಾರ್ ಅಧ್ಯಕ್ಷತೆ ವಹಿಸು ವರು. ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆಯೂ ಘಟಿಕೋತ್ಸವ ಕಾರ್ಯಕ್ರಮದ ಪೂರ್ವ ಸಿದ್ಧತೆಯ ಭಾಗವಾಗಿ ಕ್ರಾಫಡ್ ಭವನದೆದುರು ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ. ಕ್ರಾಫರ್ಡ್ ಹಾಲ್ ಮತ್ತು ಹೊರಾ ವರಣದಲ್ಲಿ ಪ್ರವೇಶ ದ್ವಾರದ ಮೆಟ್ಟಿಲುಗಳನ್ನು ಹೂವಿನ ಕುಂಡಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ.

 

 

Translate »