ಮೈಸೂರು,ಜ.20-ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ರಿಗೆ ಪದೋನ್ನತಿ ಹೊಂದಿದ ದಿನಾಂಕದಿಂದಲೇ ಆರ್ಥಿಕ ಸೌಲಭ್ಯ ವಿಸ್ತರಿಸುವ ಪ್ರಸ್ತಾವನೆಗೆ ವಿವಿಯ ಸಿಂಡಿಕೇಟ್ ಅನುಮೋದನೆ ನೀಡಿದೆ. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪದೋನ್ನತಿ ಹೊಂದಿದ ಅಧ್ಯಾಪಕರಿಗೆ ಅವರವರ ಅರ್ಹತಾ ದಿನಾಂಕದಿಂದಲೇ ಆರ್ಥಿಕ ಸೌಲಭ್ಯ ನೀಡಬೇಕೆಂದು ನಿರ್ಧರಿಸಲಾಗಿದೆ. ಯುಜಿಸಿ ನಿಯಮಾವಳಿ ಪ್ರಕಾರ ಯಾವುದೇ ಸಹಾಯಕ ಪ್ರಾಧ್ಯಾಪಕರಿಗೆ ಎಜಿಪಿ 7-8 ಸಾವಿರ, ಸಹಪ್ರಾಧ್ಯಾಪಕರಿಗೆ 9 ಸಾವಿರ, ಪ್ರಾಧ್ಯಾ ಪಕರಿಗೆ 10 ಸಾವಿರ ರೂ.ಗಳನ್ನು ಪದೋನ್ನತಿ ಹೊಂದಿದ ದಿನ ದಿಂದಲೇ ಈ ಆರ್ಥಿಕ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಈ ಕುರಿತು ಸಿಂಡಿಕೇಟ್ ಸದಸ್ಯೆ ಡಾ.ಚೈತ್ರ ನಾರಾಯಣ್ ಅವರು ಕಳೆದ ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿ, ಯುಜಿಸಿ ನಿಯ ಮಾವಳಿಗಳ ಪ್ರಕಾರ ಅಧ್ಯಾಪಕರ ಹಕ್ಕನ್ನು ರಕ್ಷಿಸಬೇಕು ಎಂದು ಮನವಿ ಮಾಡಿದ್ದರು. ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿರುವ ವಿವಿ ಕುಲಪತಿಗಳು ಪದೋನ್ನತಿ ಹೊಂದಿದ ದಿನಾಂಕದಿಂದಲೇ ಅಧ್ಯಾಪ ಕರಿಗೆ ಆರ್ಥಿಕ ಸೌಲಭ್ಯ ವಿಸ್ತರಿಸಲು ಅನುಮೋದನೆ ನೀಡಿದ್ದು, ಸಿಂಡಿಕೇಟ್‍ನ ಎಲ್ಲಾ ಸದಸ್ಯರು ಒಮ್ಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆ ಮೈವಿವಿ ಅಧ್ಯಾಪಕರುಗಳ ಸಂಘದ ಅಧ್ಯಕ್ಷ ಪ್ರೊ.ಜಿ. ವೆಂಕಟೇಶ್‍ಕುಮಾರ್ ಅವರು ಸಿಂಡಿಕೇಟ್ ಸದಸ್ಯೆ ಡಾ.ಚೈತ್ರಾ ನಾರಾಯಣ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಮೈಸೂರು