ಇಬ್ಬರು ಗುಣಮುಖರಾದರೆ ಮೈಸೂರು ಕೊರೊನಾ ಮುಕ್ತ
ಮೈಸೂರು

ಇಬ್ಬರು ಗುಣಮುಖರಾದರೆ ಮೈಸೂರು ಕೊರೊನಾ ಮುಕ್ತ

May 14, 2020

ಮೈಸೂರು,ಮೇ 13(ಎಂಟಿವೈ)- ರಾಜ್ಯದ ಗ್ರೀನ್ ಝೋನ್ ಜಿಲ್ಲೆಗಳಲ್ಲೂ ಕೊರೊನಾ ಸೋಂಕಿತರ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಾ ಆತಂಕ ಮೂಡಿಸುತ್ತಿದ್ದರೂ, ಮೈಸೂರಲ್ಲಿ ಕೊರೊನಾ ಕಾರ್ಮೋಡ ನೇಪಥ್ಯಕ್ಕೆ ಸರಿಯುತ್ತಿದೆ. ಇಂದು ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡು ಗಡೆ ಹೊಂದಿದ್ದು, ಮತ್ತಿಬ್ಬರು ಗುಣಮುಖ ರಾದರೆ ಮೈಸೂರು ಕೊರೊನಾ ಮುಕ್ತ ಜಿಲ್ಲೆಯಾಗಲಿದೆ. ಇನ್ನೊಂದೆಡೆ ಕಂಟೇ ನ್ಮೆಂಟ್ ಝೋನ್‍ಗಳ ಸಂಖ್ಯೆಯೂ ಕಡಿಮೆ ಯಾಗುತ್ತಿವೆ. ಆ ಬಡಾವಣೆಗಳಲ್ಲಿನ ನಿರ್ಬಂಧ ಸಡಿಲಿಕೆಯಾಗಿವೆ.

ಆ ಮೂಲಕ ರೆಡ್ ಝೋನ್‍ನಿಂದ ಆರೆಂಜ್ ಝೋನ್‍ಗೆ ಬಡ್ತಿ ಪಡೆಯಲು ಮೈಸೂರು ಜಿಲ್ಲೆಗೆ ಒಂದೇ ಮೆಟ್ಟಿಲು ಬಾಕಿ ಇದೆ. ಮೈಸೂರಲ್ಲಿ ಸತತ 13ನೇ ದಿನವೂ (ಬುಧವಾರ) ಕೊರೊನಾ ಸೋಂಕಿತರ ಹೊಸ ಪ್ರಕರಣ ಪತ್ತೆಯಾಗಿಲ್ಲ. ಸತತ 14 ದಿನಗಳವರೆಗೆ ಸೋಂಕಿನ ಹೊಸ ಪ್ರಕರಣ ಪತ್ತೆಯಾಗದಿದ್ದರೆ ರೆಡ್ ಝೋನ್ ಜಿಲ್ಲೆಯನ್ನು ಆರೆಂಜ್ ಜೋನ್‍ಗೆ ಬದಲಿಸಲಾಗುತ್ತದೆ. ಇದರಿಂದ ಲಾಕ್‍ಡೌನ್ ನಿಯಮದಲ್ಲಿ ಕೆಲವು ವಿನಾಯಿತಿ ದೊರೆಯಲಿದೆ. ಜಿಲ್ಲೆಯ ಜನತೆ ಆ ಘಳಿಗೆಗಾಗಿ ಕಾತುರದಿಂದ ಕಾಯುತ್ತಿದೆ.

3ನೇ ಅವಧಿ ಲಾಕ್‍ಡೌನ್‍ನಲ್ಲಿ ದೊರೆತ ಸಡಿಲಿಕೆಯಿಂದ ಹೊರ ರಾಜ್ಯಗಳಿಂದ ಮೈಸೂರು ಜಿಲ್ಲೆ ಪ್ರವೇಶಿಸುವವರ ಸಂಖ್ಯೆ ಹೆಚ್ಚಾಗಿದೆ. ಸೋಂಕು ಹೆಚ್ಚಿರುವ ಮಹಾ ರಾಷ್ಟ್ರ, ತಮಿಳುನಾಡಿನಿಂದ ಬಂದವರು ಕ್ವಾರಂಟೈನ್‍ನಲ್ಲಿದ್ದಾರೆ. ಬುಧವಾರ ಮಧ್ಯಾಹ್ನದವ ರೆಗೆ 521 ಮಂದಿಯನ್ನು ಫೆಸಿಲೆಟೆಡ್ ಕ್ವಾರಂಟೈನ್(ಲಾಡ್ಜ್‍ಗಳಲ್ಲಿ) ಮಾಡಲಾಗಿದೆ. ಹೊರ ರಾಜ್ಯದಿಂದ ಬಂದವರನ್ನು ಚೆಕ್‍ಪೋಸ್ಟ್‍ನಲ್ಲೇ ತಡೆಹಿಡಿದು ವೈಯಕ್ತಿಕ ವಿವರ ದಾಖಲಿಸಿಕೊಂಡು, ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಸೋಂಕಿನ ಲಕ್ಷಣ ಕಂಡು ಬಂದವರನ್ನು ತಕ್ಷಣ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಎಲ್ಲಾ ರಸ್ತೆಗಳಲ್ಲೂ ನಾಕಾಬಂದಿ ಇದ್ದು, ಹೊರ ರಾಜ್ಯದಿಂದ ಬಂದವರು ಥರ್ಮಲ್ ಸ್ಕ್ರೀನಿಂಗ್ ಹಾಗೂ ಕ್ವಾರಂಟೈನ್‍ನಿಂದ ತಪ್ಪಿಸಿಕೊಂಡು ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇದುವರೆಗೂ 5285 ಮಂದಿ ಮೇಲೆ ನಿಗಾ ಇಡಲಾಗಿತ್ತು. 4762 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. 5538 ಮಂದಿಯಿಂದ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. 5448 ಮಂದಿ ಸ್ಯಾಂಪಲ್ ನೆಗೆಟಿವ್ ಆಗಿ ಬಂದಿದೆ. 90 ಸ್ಯಾಂಪಲ್ ಪಾಸಿಟಿವ್ ಬಂದಿದೆ.

Translate »