ಮೈಸೂರು, ಮೇ 13- ಕಳೆದ 14 ದಿನಗಳಿಂದ ಯಾವುದೇ ಕೊರೊನಾ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಕಾಳಿದಾಸ ರಸ್ತೆ ಸೇರಿ ದಂತೆ ಪ್ರಮುಖ ಎಲ್ಲಾ ವಾಣಿಜ್ಯ ಮಾರ್ಗಗಳಲ್ಲೂ ಎಲ್ಲಾ ರೀತಿಯ ವ್ಯಾಪಾರ ವಹಿ ವಾಟಿಗೆ ಅನುಮತಿ ನೀಡಿ ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಬುಧವಾರ ಆದೇಶ ಹೊರಡಿಸಿದ್ದಾರೆ.
ಇದರಿಂದಾಗಿ ಗುರುವಾರದಿಂದ ಮೈಸೂರು ನಗರದಲ್ಲಿ ವ್ಯಾಪಾರ ವಹಿವಾಟು ಕಳೆಕಟ್ಟಲಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಮೇ 3ರಂದು ಮೈಸೂರು ನಗರದ ಪ್ರಮುಖ 91 ವಾಣಿಜ್ಯ ರಸ್ತೆಗಳಲ್ಲಿ ಅತ್ಯಾವಶ್ಯಕ ದಿನಬಳಕೆ ವಸ್ತುಗಳ ಮಾರಾಟಕ್ಕೆ ಮಾತ್ರ ಅವ ಕಾಶ ಕಲ್ಪಿಸಿ, ಅತ್ಯಾವಶ್ಯಕವಲ್ಲದ ಇನ್ನಿತರೆ ವಸ್ತು ಗಳನ್ನು ಮಾರಾಟ ಮಾಡುವ ಅಂಗಡಿ ಮಳಿಗೆ ಗಳು ತೆರೆಯುವುದನ್ನು ನಿರ್ಬಂಧಿಸಲಾಗಿತ್ತು. ಇದ ರಿಂದಾಗಿ ಇಡೀ ಮೈಸೂರು ನಗರದಲ್ಲಿ ವಾಣಿಜ್ಯ ವ್ಯವಹಾರಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು.
ನಂತರ ದಿನೇ ದಿನೆ ಕೊರೊನಾ ಸಕ್ರಿಯ ಸೋಂಕಿ ತರ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಅದೇ ವೇಳೆ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. ಪ್ರಸ್ತುತ ಕೇವಲ 2 ಸಕ್ರಿಯ ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಮೈಸೂರು ನಗರವನ್ನು ಆರೆಂಜ್ ಝೋನ್ ಎಂದು ಸರ್ಕಾರ ಘೋಷಿಸುವುದೊಂದೇ ಬಾಕಿ ಇದೆ. ಈ ಹಂತದಲ್ಲಿ ಪಾಲಿಕೆ ಆಯುಕ್ತರು ತಾವು ಮೇ 3 ರಂದು ನಿರ್ಬಂಧ ವಿಧಿಸಿದ್ದ ಎಲ್ಲಾ 91 ವಾಣಿಜ್ಯ ರಸ್ತೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7ರವರೆಗೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. ಅದೇ ವೇಳೆ ಈ ಹಿಂದಿನಂತೆಯೇ ಸಲೂನ್‍ಗಳು, ಬ್ಯೂಟಿಪಾರ್ಲರ್, ಸ್ಪಾ, ಸಿನಿಮಾ ಮಂದಿರಗಳು, ಧಾರ್ಮಿಕ ಸ್ಥಳಗಳು, ಬಸ್, ಆಟೋ ಮತ್ತು ಟ್ಯಾಕ್ಸಿ ಸಂಚಾರ ಮೇಲೆ ನಿರ್ಬಂಧ ಮುಂದುವರೆದಿದೆ.
ಈ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು
100 ಅಡಿ ರಸ್ತೆ, ತ್ಯಾಗರಾಜ ರಸ್ತೆ, ಚಾಮುಂಡಿಪುರಂ ರಸ್ತೆ, ಮಾನಂದವಾಡಿ ರಸ್ತೆ (ನಂಜುಮಳಿಗೆ ಮಾರ್ಕೆಟ್), ರಾಮಾನುಜ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ನ್ಯೂ ಕಾಂತರಾಜ ಅರಸ್ ರಸ್ತೆ, ರಮ ವಿಲಾಸ ರಸ್ತೆ, ಜಯನಗರ 2ನೇ ಮೇನ್ ರಸ್ತೆ, 2ನೇ ಕ್ರಾಸ್ ವಿದ್ಯಾ ರಣ್ಯಪುರಂ, 16ನೇ ಕ್ರಾಸ್, ಅಕ್ಕಮಹಾದೇವಿ ರಸ್ತೆ, ಅಂಬೇಡ್ಕರ್ ರಸ್ತೆ, ಕಾಂತರಾಜ ಅರಸ್ ರಸ್ತೆ, ಸಾಹುಕಾರ್ ಚನ್ನಯ್ಯ ರಸ್ತೆ, ಜೆ.ಸಿ.ರಸ್ತೆ, ನೃಪತುಂಗ ರಸ್ತೆ, ಉದಯರವಿ ರಸ್ತೆ, ಶ್ರೀರಾಂಪುರ ಮುಖ್ಯರಸ್ತೆ, ದಕ್ಷಿಣೇ ಶ್ವರ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಶಿವರಾಂಪೇಟೆ ರಸ್ತೆ, ಸಯ್ಯಾಜಿ ರಾವ್ ರಸ್ತೆ, ಧನ್ವಂತರಿ ರಸ್ತೆ, ಓಲ್ಡ್ ಬ್ಯಾಂಕ್ ರಸ್ತೆ, ಮಕ್ಕಾಜಿಚೌಕ, ವಾಣಿಜ್ಯ ರಸ್ತೆ ಹೆಸರು, ಹೆಚ್.ಆರ್ ಸ್ಟ್ರೀಟ್, ದಿವಾನ್ಸ್ ರಸ್ತೆ, ಬೆಂಕಿ ನವಾಬ್ ರಸ್ತೆ, ಅಶೋಕ ರಸ್ತೆ, ಬಿ.ಎನ್. ರಸ್ತೆ, ಕೆ.ಟಿ ಸ್ಟ್ರೀಟ್, ಹಷರ್À ರಸ್ತೆ, ರವೇ ಬೀದಿ, ಸಿ.ಜಿ. ರಸ್ತೆ, ಗಾಂಧೀ ವೃತ್ತ, ಚರ್ಚ್ ವೃತ್ತ, ಬಿ.ಎನ್.ರಸ್ತೆ, ವಿನಯ ಮಾರ್ಗ, ನಜರ್‍ಬಾದ್ ಮುಖ್ಯ ರಸ್ತೆ, ಝೂ ರಸ್ತೆ, ಡಾ. ರಾಜ್‍ಕುಮಾರ ರಸ್ತೆ, ಶಿವಾಜಿ ರಸ್ತೆ, ನಗುವಿನಳ್ಳಿ ಮುಖ್ಯ ರಸ್ತೆ, ಕೆಸರೆ, ರಾಜೇಂದ್ರನಗರ ಮುಖ್ಯ ರಸ್ತೆ, ಹನು ಮಂತನಗರ ಮುಖ್ಯ ರಸ್ತೆ, ಬನ್ನಿಮಂಟಪ ಸಿ ಲೇಔಟ್, ನೆಲ್ಸನ್ ಮಂಡೇಲಾ ರಸ್ತೆ, ಸಿ.ವಿ ರಸ್ತೆ, 2ನೇ ಈದ್ಗಾ, ಪುಲಕೇಶಿ ರಸ್ತೆ 2ನೇ ಈದ್ಗಾ, ಸೇಂಟ್ ಮೇರಿಸ್ ರಸ್ತೆ, ಶಾಲಿಮಾರ್ ರಸ್ತೆ, 2ನೇ ಈದ್ಗಾ, ಹುಡ್ಕೋ ಮುಖ್ಯ ರಸ್ತೆ, ಬನ್ನಿಮಂಟಪ, ಜೋಡಿ ತೆಂಗಿನಮರ ರಸ್ತೆ, ಹೈದರಾಲಿ ರಸ್ತೆ, ಗಾಂಧಿನಗರ, ಬಜಾರ್ ರಸ್ತೆ, ಎನ್.ಆರ್. ಮೊಹಲ್ಲಾ, ಬೆಂಗಳೂರು-ಮೈಸೂರು ರಸ್ತೆ, ಆಶೋಕ ರಸ್ತೆ, ಮೀನಾ ಬಜಾರ್, ಸಾಡೇ ರಸ್ತೆ, ಬಿ.ಎನ್.ರಸ್ತೆ, ಕೆ.ಟಿ. ಸ್ಟ್ರೀಟ್, ಅಕ್ಬರ್ ರಸ್ತೆ, ಎಸ್.ಆರ್.ರಸ್ತೆ, ಪುಲಕೇಶಿ ರಸ್ತೆ, ಕಬೀರ್ ರಸ್ತೆ, ಎಂ.ಹೆಚ್. ರಸ್ತೆ, ಕಾಳಿದಾಸ ರಸ್ತೆ ವಿ.ವಿ.ಮೊಹಲ್ಲಾ, ಟೆಂಪಲ್ ರೋಡ್, 1ನೇ ಮುಖ್ಯ ರಸ್ತೆ, ವಿ.ವಿ. ಮೊಹಲ್ಲಾ, ಹೆಬ್ಬಾಳ್ ಮುಖ್ಯರಸ್ತೆ, ಎಸ್.ಬಿ. ಮುಖ್ಯ ರಸ್ತೆ ಸೂರ್ಯ ಬೇಕರಿ ಕಡೆಗೆ, ರಿಂಗ್‍ರಸ್ತೆಯ ಸರ್ವೀಸ್ ರಸ್ತೆ ಲೋಕನಾಯಕನಗರ ಮತ್ತು ಭೈರವೇಶ್ವರ ನಗರ ಕಡೆಗೆ, ಬಿ.ಎಂ.ಶ್ರೀ.ನಗರ ಮುಖ್ಯರಸೆ, ಕಾಳಿದಾಸ ರಸ್ತೆ, 6ನೇ ಮುಖ್ಯ ರಸ್ತೆ, ವಿನಾಯಕನಗರ, ಗೋಕುಲಂ ಮುಖ್ಯ ರಸ್ತೆ, ಕಾಂಟೂರ್ ರಸ್ತೆ, ತ್ರಿನೇತ್ರ ವೃತ್ತದಿಂದ ಡಾಲ್ಫಿನ್ ಬೇಕರಿ ಜಂಕ್ಷನ್ ವಿಜಯನಗರ 2ನೇ ಹಂತ, ಡಾಲ್ಫಿನ್ ಬೇಕರಿ ವೃತ್ತದಿಂದ ಸೂರ್ಯಬೇಕರಿ ವೃತ್ತದವ ರೆಗೆ, ರೈಲ್ವೆ ಬಡಾವಣೆ ವಿಜಯನಗರ 2ನೇ ಹಂತ, ಎಸ್‍ಬಿಐ ಬ್ಯಾಂಕ್ ಜಂಕ್ಷನ್‍ನಿಂದ ಅಭಿಷೇಕ್ ವೃತ್ತದವರೆಗೆ, ಹುಣಸೂರು ಮುಖ್ಯ ರಸ್ತೆ, ಹಿನಕಲ್, ಹೂಟಗಳ್ಳಿ.