ಭಾನುವಾರ ರಾತ್ರಿ ಭಾರೀ ಗಾಳಿ ಮಳೆಗೆ ಮೈಸೂರಿನ  ಹಲವೆಡೆ ಧರೆಗುರುಳಿದ ಮರಗಳು; ಕಾರಿಗೆ ಹಾನಿ
ಮೈಸೂರು

ಭಾನುವಾರ ರಾತ್ರಿ ಭಾರೀ ಗಾಳಿ ಮಳೆಗೆ ಮೈಸೂರಿನ ಹಲವೆಡೆ ಧರೆಗುರುಳಿದ ಮರಗಳು; ಕಾರಿಗೆ ಹಾನಿ

June 7, 2022

ಮೈಸೂರು, ಜೂ.6(ಆರ್‍ಕೆಬಿ)- ಭಾನುವಾರ ರಾತ್ರಿ ಭಾರೀ ಗಾಳಿ ಸಹಿತ ಬಿದ್ದ ಮಳೆಗೆ ಮೈಸೂರಿನ ಹಲವೆಡೆ ಮರಗಳು ಧರೆಗುರುಳಿವೆ. ಹಲವೆಡೆ ರಂಬೆ ಕೊಂಬೆಗಳು ಕಡಿದು ಬಿದ್ದಿವೆ. ಮರ ಬಿದ್ದ ಪರಿಣಾಮ ಕೆಲವು ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ.

ಮೈಸೂರಿನ ಗೋಕುಲಂ ಟ್ಯಾಂಕ್ ಬಳಿ ದೊಡ್ಡಮರವೊಂದು ಬಿದ್ದು, ಕಾರು ಜಖಂಗೊಂಡಿದೆ. ಕೆಲವೆಡೆ ಮರದ ಕೊಂಬೆಗಳು ರಸ್ತೆಗಳ ಮೇಲೆ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ನಂತರ ನಗರಪಾಲಿಕೆಯ ಅಭಯ ತಂಡಗಳು ಮರಗಳನ್ನು ತೆರವುಗೊಳಿಸಿವೆ.

ವಿದ್ಯಾರಣ್ಯಪುರಂ ಬಳಿ ಮರವೊಂದು ಬುಡಸಹಿತ ಧರೆಗುರುಳಿದೆ. ಅಲ್ಲಲ್ಲಿ ಸಣ್ಣಪುಟ್ಟ ರಂಬೆ ಕೊಂಬೆಗಳು ಕಡಿದು ಬಿದ್ದಿವೆ ನಂತರ ಅಭಯ ಒಂದನೇ ತಂಡದ ಶ್ರೇಯಸ್ ಮತ್ತು ಸಿಬ್ಬಂದಿ ತೆರವುಗೊಳಿ ಸಿದರು. ರಾಜೀವ್‍ನಗರ, ಎನ್.ಆರ್.ಪೊಲೀಸ್ ಸ್ಟೇಷನ್, ಮೃಗಾಲ ಯದ ಬಳಿ ಒಂದೊಂದು ಚಿಕ್ಕಪುಟ್ಟ ರಂಬೆ-ಕೊಂಬೆಗಳು ಗಾಳಿಯ ಹೊಡೆತಕ್ಕೆ ಸಿಲುಕಿ ಕಡಿದು ಬಿದ್ದಿವೆ. ನಂತರ ಮೈಸೂರು ಮಹಾನಗರ ಪಾಲಿಕೆಯ ಅಭಯ ಮೂರನೇ ತಂಡದ ಮೊಹಮ್ಮದ್ ರಿಯಾಜ್ ಮತ್ತು ಸಿಬ್ಬಂದಿ ತೆರವುಗೊಳಿಸಿದರು. ಗುಡುಗು-ಮಿಂಚಿನ ಅಬ್ಬರದ ನಡುವೆ ಭಾರೀ ಗಾಳಿ ಮಳೆಗೆ ಮೈಸೂರು ನಗರದ ಹಲವು ರಸ್ತೆಗಳು ಜಲಾವೃತಗೊಂಡಿದ್ದವು. ಒಳಚರಂಡಿಗಳು, ಮ್ಯಾನ್‍ಹೋಲ್‍ಗಳು ಉಕ್ಕಿ ಹರಿದವು. ಹೀಗಾಗಿ ರಸ್ತೆ ತುಂಬ ಒಂದು ಅಡಿಗೂ ಹೆಚ್ಚಿನ ನೀರು ಹರಿಯಿತು. ತಗ್ಗು ಪ್ರದೇಶದ ಕೆಲವು ಮನೆಗಳಿಗೂ ನೀರು ನುಗ್ಗಿ ರುವುದಾಗಿ ಹಲವರು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »