ಪ್ರಧಾನಿ ಮೋದಿ ಸ್ವಾಗತಕ್ಕೆ ಸಿಂಗಾರಗೊಳ್ಳುತ್ತಿವೆ ಮೈಸೂರಿನ ರಸ್ತೆಗಳು
ಮೈಸೂರು

ಪ್ರಧಾನಿ ಮೋದಿ ಸ್ವಾಗತಕ್ಕೆ ಸಿಂಗಾರಗೊಳ್ಳುತ್ತಿವೆ ಮೈಸೂರಿನ ರಸ್ತೆಗಳು

June 7, 2022

ಮೈಸೂರು, ಜೂ.6(ಆರ್‍ಕೆ)- ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಮೈಸೂ ರಿನ ರಸ್ತೆಗಳು ಸಿಂಗಾರಗೊಳ್ಳುತ್ತಿವೆ.

ರಸ್ತೆ, ಮಳೆ ನೀರು ಚರಂಡಿ, ಒಳ ಚರಂಡಿ, ಫುಟ್‍ಪಾತ್‍ಗಳ ಸ್ವಚ್ಛತಾ ಕಾರ್ಯವನ್ನು ಮೈಸೂರು ಮಹಾನಗರ ಪಾಲಿಕೆ ಸಮರೋಪಾದಿ ಯಲ್ಲಿ ಕೈಗೆತ್ತಿಕೊಂಡಿದೆ. ಅದರಿಂದ ಪ್ರಧಾನಿ ಗಳ ಆಗಮನದಿಂದಲಾದರೂ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ನಾಗರಿಕರಿಗೂ ಅನುಕೂಲ ವಾಗಲಿದೆ.
ಮೈಸೂರು ಅರಮನೆ ಸುತ್ತಮುತ್ತಲಿನ ಪ್ರದೇಶ, ಪ್ರಧಾನಿಗಳು ಸಂಚರಿಸುವ ಮಾರ್ಗ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಮಳೆ ನೀರು ಚರಂಡಿಗಳಲ್ಲಿ ಬೆಳೆದಿರುವ ಗಿಡ ಗಂಟೆಗಳು, ಒಳ ಚರಂಡಿಗಳಲ್ಲಿ ತುಂಬಿ ರುವ ಹೂಳು ತೆಗೆದು ಸ್ವಚ್ಛಗೊಳಿಸಲಾ ಗುತ್ತಿದೆ. ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಗಲು-ರಾತ್ರಿ ಸಮರೋಪಾ ದಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ.

ಪ್ರಧಾನ ಮಂತ್ರಿಗಳು ಸಾಗುವ ಮೈಸೂ ರಿನ ಮಂಡಕಳ್ಳಿ ವಿಮಾನ ನಿಲ್ದಾಣ, ನಂಜನಗೂಡು ರಸ್ತೆ, ಪ್ರಧಾನಿ ವಾಸ್ತವ್ಯ ಹೂಡಲಿರುವ ನಜರ್‍ಬಾದಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ರ್ಯಾಡಿಸನ್ ಬ್ಲ್ಯೂ ಪ್ಲಾಜಾ ಹೋಟೆಲ್ ಸುತ್ತ ಮುತ್ತಲ ರಸ್ತೆ ರಿಪೇರಿ, ಸ್ವಚ್ಛತಾ ಕೆಲಸ ಭರದಿಂದ ಸಾಗಿದೆ. ಜೂ. 20ರಂದು ಸಂಜೆ ವಿಶೇಷ ವಿಮಾನದಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ನರೇಂದ್ರ ಮೋದಿ ಅವರು ರಸ್ತೆಯ ಮೂಲಕ ಕಾರಿನಲ್ಲಿ ಬಂದು ರ್ಯಾಡಿಸನ್ ಬ್ಲ್ಯೂ ಪ್ಲಾಜಾ ಹೋಟೆಲ್‍ನಲ್ಲಿ ಅಂದು ರಾತ್ರಿ ವಾಸ್ತವ್ಯ ಹೂಡುವರು.

ಮರುದಿನ ಜೂ.21ರಂದು ಮುಂಜಾನೆ ಅರಮನೆ ಆವರಣದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗವಹಿಸುವ ಪ್ರಧಾನಿಗಳು, ನಂತರ ಮಾನಸ ಗಂಗೋತ್ರಿ ಆವರಣದಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣಸಂಸ್ಥೆ (ಂIISಊ) ಗೂ ಭೇಟಿ ನೀಡುವ ಸಾಧ್ಯತೆ (ಈ ಕಾರ್ಯಕ್ರಮ ಅಧಿಕೃತವಾಗಿ ನಿಗದಿ ಯಾಗಿಲ್ಲ) ಇರುವುದರಿಂದ ಎಂಜಿ ರಸ್ತೆ, ಬೋಗಾದಿ ರಸ್ತೆಗಳಲ್ಲೂ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಅತೀ ಗಣ್ಯರು ಸಾಗುವ ರಸ್ತೆಗಳಿಗೆ ಡಾಂಬರೀಕರಣ, ಫುಟ್‍ಪಾತ್ ಒತ್ತುವರಿ ತೆರವು ಮೀಡಿಯನ್ ಸ್ವಚ್ಛತೆ, ಕರ್ಟ್ ಸ್ಟೋನ್‍ಗಳಿಗೆ ಬಣ್ಣ ಬಳಿಯುವುದು, ಬೀದಿದೀಪ ಅಳವಡಿಕೆಯಂತಹ ಕಾಮ ಗಾರಿಗಳು ತೀವ್ರ ಗತಿಯಿಂದ ಸಾಗಿದೆ. ಪಾಲಿಕೆ ಪೌರ ಕಾರ್ಮಿಕರ ಜೊತೆಗೆ ಬೇರೆಡೆ ಯಿಂದಲೂ ಕೆಲಸಗಾರರನ್ನು ಕರೆತಂದು ಮಳೆ ನೀರು ಮತ್ತು ಒಳಚರಂಡಿ ಸ್ವಚ್ಛತಾ ಕೆಲಸವನ್ನು ಹಗಲು-ರಾತ್ರಿಯೆನ್ನದೇ ಮಾಡಿಸುತ್ತಿರುವ ಪಾಲಿಕೆ ಅಧಿಕಾರಿಗಳು, ಫುಟ್‍ಪಾತ್ ಮೇಲಿನ ಪೆಟ್ಟಿಗೆ ಅಂಗಡಿ, ಜಾಹೀರಾತು ಫಲಕಗಳನ್ನು ತೆರವು ಗೊಳಿಸಿ ಸ್ವಚ್ಛಮಾಡಿಸುತ್ತಿದ್ದಾರೆ.

ಸ್ವಚ್ಛತೆ, ರಸ್ತೆ ಕಾಮಗಾರಿ ಹಾಗೂ ಇನ್ನಿತರೆ ಸಿದ್ಧತಾ ಕಾರ್ಯಗಳ ಪರಿಶೀಲನೆಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೂ. 8ರಂದು ಮೈಸೂರಿಗೆ ಭೇಟಿ ನೀಡುತ್ತಿ ರುವುದರಿಂದ ಅಷ್ಟರಲ್ಲಿ ಬಹುತೇಕ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಲು ಪ್ರಯತ್ನಿಸಲಾ ಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿಗಳು ಆಗಮಿಸುತ್ತಿರುವುದರಿಂದ ರಸ್ತೆ ಅಭಿವೃದ್ಧಿ, ಸ್ವಚ್ಛತೆ, ಫುಟ್‍ಪಾತ್ ಒತ್ತುವರಿ ತೆರವು, ರಸ್ತೆ ವಿಭಜಕಗಳಿಗೆ ಬಣ್ಣ ಬಳಿಯುವುದು, ಸರ್ಕಲ್‍ಗಳ ಸೌಂದರ್ಯೀಕರಣ ಮುಂತಾದ ಕಾಮ ಗಾರಿ ಕೈಗೊಳ್ಳಲು ಪಾಲಿಕೆಯಿಂದ 15 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತುರ್ತು ಕಾಮಗಾರಿ ಯಾಗಿರುವುದರಿಂದ ಈಗಾಗಲೇ ಕೆಲಸ ಆರಂಭಿಸಲಾಗಿದೆ ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದರು.

ಅದೇ ರೀತಿ ಮೈಸೂರಿನ ರಿಂಗ್ ರಸ್ತೆ ಮೀಡಿಯನ್, ಸರ್ವಿಸ್ ರಸ್ತೆ ಬದಿ ಸ್ವಚ್ಛತಾ ಕಾರ್ಯ ಆರಂಭಿಸಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಸುರಿದಿದ್ದ ಘನ ತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯವನ್ನು ತೆರವುಗೊಳಿ ಸಲಾಗಿದೆಯಲ್ಲದೇ, ಅಕ್ಕಪಕ್ಕದಲ್ಲಿ ತಲೆ ಎತ್ತಿದ್ದ ಪೆಟ್ಟಿಗೆ ಅಂಗಡಿ ಹಾಗೂ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲಾಗಿದೆ ಎಂದು ಸಂಸದರು ತಿಳಿಸಿದರು.

ಒಟ್ಟಾರೆ ಪ್ರಧಾನ ಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಮೈಸೂರಿನ ಹೃದಯ ಭಾಗ, ಮುಖ್ಯ ರಸ್ತೆ, ಜಂಕ್ಷನ್ ಸೇರಿದಂತೆ ಬಹುತೇಕ ರಸ್ತೆಗಳ ರಿಪೇರಿ, ಡಾಂಬರೀ ಕರಣ, ಫುಟ್ ಪಾತ್ ಮೇಲಿನ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲಾಗುತ್ತಿದೆ.

Translate »