ನವದೆಹಲಿ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿನಿಂದ ರೇಡಿಯೋಡಯೋಗ್ನೋಸಿಸ್‍ನಲ್ಲಿ ಎಂಡಿ ಪದವಿ ಪಡೆದ ಮೈಸೂರು ಯುವತಿ
ಮೈಸೂರು

ನವದೆಹಲಿ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿನಿಂದ ರೇಡಿಯೋಡಯೋಗ್ನೋಸಿಸ್‍ನಲ್ಲಿ ಎಂಡಿ ಪದವಿ ಪಡೆದ ಮೈಸೂರು ಯುವತಿ

August 26, 2020

ಮೈಸೂರು, ಆ. 25- ಮೈಸೂರಿನ ಡಾ. ಚೋವಂಡ ಸ್ನೇಹಾ ಹರೀಶ್ ಅವರು ನವದೆಹಲಿಯ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜ್‍ನಿಂದ ರೇಡಿಯೋಡಯೋಗ್ನೋಸಿಸ್‍ನಲ್ಲಿ ಎಂಡಿ ಪದವಿ ಪಡೆದಿದ್ದಾರೆ.

ಮೈಸೂರು ಗೋಕುಲಂನ ನಿರ್ಮಲಾ ಕಾನ್ವೆಂಟ್‍ನಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದ ಸ್ನೇಹಾ, 2008ರಲ್ಲಿ ಶೇ.95.68 ಅಂಕಗಳೊಂದಿಗೆ ಎಸ್‍ಎಸ್ ಎಲ್‍ಸಿ ತೇರ್ಗಡೆಯಾಗಿದ್ದರು. ನಂತರ ಬೆಂಗಳೂರಿನ ಜೆಸಿ ರಸ್ತೆಯ ಶ್ರೀ ಭಗ ವಾನ್ ಮಹಾವೀರ್ ಜೈನ್ ಕಾಲೇಜಿ ನಲ್ಲಿ ದ್ವಿತೀಯ ಪಿಯುಸಿಯನ್ನು ಶೇ. 94.83 ಅಂಕಗಳೊಂದಿಗೆ 2010ರಲ್ಲಿ ತೇರ್ಗಡೆಯಾಗಿದ್ದರು.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆ-ಸೆಟ್)ಯಲ್ಲಿ ಮೆಡಿಸಿನ್ ವಿಭಾಗ ದಲ್ಲಿ 524ನೇ ರ್ಯಾಂಕ್ ಗಳಿಸುವುದರೊಂ ದಿಗೆ 2010ರಲ್ಲಿ ಮಂಡ್ಯ ಮೆಡಿಕಲ್ ಕಾಲೇಜ್ ಸೇರ್ಪಡೆಯಾಗಿದ್ದರು. 2014 ರಲ್ಲಿ ಎಂಬಿಬಿಎಸ್ 4ನೇ ವರ್ಷ ಪೂರೈ ಸಿದ ಸ್ನೇಹಾ, 2016ರಲ್ಲಿ ಅದೇ ಸಂಸ್ಥೆ ಯಲ್ಲಿ ಇಂಟರ್ನ್‍ಶಿಪ್ ಕೂಡ ಪೂರೈಸಿದ್ದರು.

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಗಳ ಸಂಸ್ಥೆ (ಏಮ್ಸ್) ಪ್ರವೇಶ ಪರೀಕ್ಷೆ ಯಲ್ಲಿ 113ನೇ ರ್ಯಾಂಕ್ ಗಳಿಸಿ, ಪೆಥಾಲಜಿ ವಿಭಾಗದ ಸ್ನಾತಕೋತ್ತರ ಪದವಿ ಸೇರ್ಪಡೆ ಯಾದರು. ಕೊನೆಗೆ ಏಮ್ಸ್‍ನಲ್ಲಿ ಅಧ್ಯ ಯನವನ್ನು ಮೊಟಕುಗೊಳಿಸಿದ ಸ್ನೇಹಾ, ನೀಟ್-ಪಿಜಿ ಪ್ರವೇಶ ಪರೀಕ್ಷೆಯಲ್ಲಿ 12ನೇ ರ್ಯಾಂಕ್ ಗಳಿಸುವುದರೊಂದಿಗೆ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜ್‍ನಲ್ಲಿ ರೇಡಿಯೋಡಯೋಗ್ನೋಸಿಸ್ ವಿಭಾಗಕ್ಕೆ ಸೇರ್ಪಡೆಗೊಂಡರು ಹಾಗೂ ಜುಲೈ 2020 ರಲ್ಲಿ ಕೋರ್ಸ್ ಪೂರ್ಣಗೊಳಿಸಿದರು.

ಇವರು ಮೂಲತಃ ಕೊಡಗಿನ ವಿರಾಜ ಪೇಟೆಯ ಮಗ್ಗುಲ ಗ್ರಾಮದವರಾದ ಚೋವಂಡ ಹರೀಶ್ ಮತ್ತು ದಿವಂಗತ ಲೀಲಾ ಹರೀಶ್ (ಅಜ್ಜಮಾಡ) ದಂಪತಿ ಪುತ್ರಿ. ಇವರ ಕುಟುಂಬ ಈಗ ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ನೆಲೆಸಿದೆ.

Translate »