ಮೈಸೂರು,ಆ.25(ಆರ್‍ಕೆಬಿ)-`ಸಿರಿ ಧಾನ್ಯ ಹಕ್ಕು-ಮಹಿಳೆಯರ ಹಕ್ಕು’ ಎಂದು ಹೆಚ್.ಡಿ.ಕೋಟೆಯ `ಭಾರತೀಯ ಸಿರಿಧಾನ್ಯ ಸೋದರಿಯರ ಬಳಗ’ದವರು ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಹಕ್ಕೊತ್ತಾಯ ಮಂಡಿಸಿದರು.
ಸೀರನಹುಂಡಿ ದೇವಮ್ಮ, ದೇವಿರಮ್ಮ, ಜಯಮ್ಮ, ಸಣ್ಣರಾಮಮ್ಮ, ಪೀಪಲ್ ಟ್ರೀ ಕೃಷಿ ಸಂಶೋಧಕ ಎಲ್.ಸಿ.ಚೆನ್ನರಾಜು ಮಾತನಾಡಿ, ಕುಟುಂಬಕ್ಕೆ ಆಧಾರವಾದ ಆಹಾರ, ಆರೋಗ್ಯ, ಪೌಷ್ಟಿಕತೆ ಮತ್ತು ಮೇವಿನ ಭದ್ರತೆಯನ್ನು ಸಿರಿಧಾನ್ಯಗಳು ಒದಗಿಸುವುದರಿಂದ ಸಿರಿಧಾನ್ಯಕ್ಕೂ ಮಹಿಳೆಯ ಕಾಳಜಿಗೂ ನಂಟಿದೆ ಎಂದು ಬಳಗ ಪ್ರತಿ ಪಾದಿಸುತ್ತದೆ. ಅಪೌಷ್ಟಿಕ ದೇಶಗಳ ಪಟ್ಟಿ ಯಲ್ಲಿ 180ನೇ ಸ್ಥಾನದಲ್ಲಿರುವ ಭಾರತ ಪೌಷ್ಟಿಕತೆಯ ಆಗರವಾದ ಮತ್ತು ಎಲ್ಲರಿಗೂ ದಕ್ಕುವ ಸಿರಿಧಾನ್ಯಗಳನ್ನು ಉತ್ತೇಜಿಸಬೇಕು. ‘ಕಿಸಾನ್ ಸಮ್ಮಾನ್’ ಯೋಜನೆ ವ್ಯಾಪ್ತಿಗೆ ಸಿರಿಧಾನ್ಯಗಳನ್ನೂ ತರಬೇಕು. ಸಿರಿಧಾನ್ಯ ರೈತರಿಗೆ ಕನಿಷ್ಠ ರೂ. 10 ಸಾವಿರ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿ ದರು. ಜನವರಿಯಲ್ಲಿ ತೆಲಂಗಾಣದ ಸಂಗಾ ರೆಡ್ಡಿ ಜಿಲ್ಲೆಯ ಜಹಿರಾಬಾದ್ ಮಂಡಲ್‍ನ ಪಾಸ್ತಾಪುರದಲ್ಲಿ ನಡೆದ ಭಾರತೀಯ ಸಿರಿಧಾನ್ಯ ಸೋದರಿಯರ ಬಳಗದ ಸಮ್ಮೇ ಳನದಲ್ಲಿ ಹಲವು ಬೇಡಿಕೆಗಳ ಮನವಿಪತ್ರ ವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರವಾನಿಸಿ, ಸಿರಿ ಧಾನ್ಯಗಳಿಗೆ ಮತ್ತು ಸಂಬಂ ಧಿತ ವಿಷಯಗಳಿಗೆ ಮಹತ್ವ ನೀಡುವಂತೆ ಒತ್ತಾಯಿಸಲಾಗಿದೆ.
ಸಿರಿಧಾನ್ಯ ಬೇಸಾಯದಲ್ಲಿ ಮಹಿಳೆಯರು ಮುಖ್ಯ ಪಾತ್ರಧಾರಿಗಳಾಗಿ ಕುಟುಂಬದ ಆರೋಗ್ಯ, ಪೌಷ್ಟಿಕ ಆಹಾರ ಭದ್ರತೆ ಕಾಪಾಡುತ್ತಿದ್ದಾರೆ. ಇದಕ್ಕೆ ಬೆಂಬಲವಾಗಿ ರಾಜ್ಯ ಸರ್ಕಾರವು ರಾಗಿ, ಜೋಳ, ಸಜ್ಜೆಗೆ ನಿಗದಿ ಮಾಡಿದ ಬೆಂಬಲ ಬೆಲೆಯನ್ನು ನವಣೆ, ಸಾಮೆ, ಹಾರಕ, ಬರಗು, ಊದಲು, ಕೊರಲೆ ಸಿರಿಧಾನ್ಯಗಳಿಗೂ ನೀಡಬೇಕು ಎಂದು ಒತ್ತಾಯಿಸಿದರು.