ಸಾರ್ವತ್ರಿಕ ರಜೆ ಹೊರತುಪಡಿಸಿ ಉಳಿದೆಲ್ಲಾ ದಿನ ಅರಮನೆಗೆ ಪ್ರವೇಶ
ಮೈಸೂರು

ಸಾರ್ವತ್ರಿಕ ರಜೆ ಹೊರತುಪಡಿಸಿ ಉಳಿದೆಲ್ಲಾ ದಿನ ಅರಮನೆಗೆ ಪ್ರವೇಶ

August 11, 2020

ಮೈಸೂರು,ಆ.10-ಮೈಸೂರು ಅರಮನೆ ಮಂಡಳಿ ವತಿಯಿಂದ ಆ.8ರಿಂದ ಪ್ರತಿ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳನ್ನು ಒಳಗೊಂಡಂತೆ ಎಲ್ಲಾ ದಿನಗಳಂದು ಪ್ರವಾಸಿ ಗರಿಗೆ ಅರಮನೆ ತೆರೆಯಲಾಗುತ್ತಿದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕರು ತಿಳಿಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಪ್ರವಾಸಿಗರಿಗೆ ಅರಮನೆ ಮುಕ್ತವಾಗಿದ್ದು, ಅರಮನೆಯ ಆವರಣದಲ್ಲಿ ಸಂಜೆ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿರುತ್ತದೆ ಹಾಗೂ ಪ್ರತಿ ಭಾನುವಾರದಂದು ವಿದ್ಯುತ್ ದೀಪಾಲಂಕಾರ ವ್ಯವಸ್ಥೆಯನ್ನು ಸಹ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.

Translate »