ಜೆಎಸ್‍ಎಸ್ ಆಯುರ್ವೇದ ಆಸ್ಪತ್ರೆಯಿಂದ ರೋಗ ನಿರೋಧಕ ಶಕ್ತಿ ವರ್ಧಕ ಇಮ್ಯೂನ್ ಬೂಸ್ಟರ್ ಕಿಟ್ ಬಿಡುಗಡೆ
ಮೈಸೂರು

ಜೆಎಸ್‍ಎಸ್ ಆಯುರ್ವೇದ ಆಸ್ಪತ್ರೆಯಿಂದ ರೋಗ ನಿರೋಧಕ ಶಕ್ತಿ ವರ್ಧಕ ಇಮ್ಯೂನ್ ಬೂಸ್ಟರ್ ಕಿಟ್ ಬಿಡುಗಡೆ

August 11, 2020

ಮೈಸೂರು, ಆ.10(ಆರ್‍ಕೆಬಿ)- ಕೊರೊನಾ ಸೋಂಕಿನ ಹಾವಳಿಯ ನಡುವೆ ಜೆಎಸ್‍ಎಸ್ ಆಯುರ್ವೇದ ಆಸ್ಪತ್ರೆಯು ರೋಗ ನಿರೋಧಕ ಶಕ್ತಿ ವೃದ್ಧಿಗೆ ಪಾರಂಪರಿಕ ಪದ್ಧತಿ ಅನುಸರಣೆಗೆ ಮುಂದಾ ಗಿದೆ. ಕೊರೊನಾ ಸೋಂಕು ಬಾಧಿಸ ದಂತೆ ಜನರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಜೆಎಸ್‍ಎಸ್ ಆಯು ರ್ವೇದ ಆಸ್ಪತ್ರೆಯು ಚ್ಯವನಪ್ರಾಶ, ಹರಿ ದ್ರಾರಸ, ಕಷಾಯ ಚೂರ್ಣ, ರಕ್ಷೋಘ್ನ ಧೂಪ, ಅಣುತೈಲ ನಶ್ಯಗಳನ್ನು ಒಳಗೊಂಡ ಇಮ್ಯೂನ್ ಬೂಸ್ಟರ್ ಕಿಟ್ ಹೊರತಂದಿದೆ.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸೋಮವಾರ ಮೈಸೂ ರಿನ ಚಾಮುಂಡಿಬೆಟ್ಟದ ಪಾದದ ಸುತ್ತೂರು ಶಾಖಾ ಮಠದಲ್ಲಿ ಈ ಕಿಟ್ ಅನ್ನು ಬಿಡು ಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಗಿಡಮೂಲಿಕೆ, ಸಸ್ಯಗಳಿಂದ ತಯಾ ರಾಗುವ ಆಯುರ್ವೇದ ಔಷಧಿಗಳ ಬಳಕೆ ಪ್ರಾಚೀನ ಕಾಲದಿಂದಲೂ ಇದೆ. ಯಾವುದೇ ಅಡ್ಡಪರಿಣಾಮಗಳಿಲ್ಲದ ಆಯುರ್ವೇದ ಔಷಧಿಯಿಂದ ರೋಗದಿಂದ ಮುಕ್ತ ರಾಗಿರಲು ಸಾಧ್ಯವಿದೆ ಎಂದರು.

ಚ್ಯವನಪ್ರಾಶ ರೋಗನಿರೋಧಕ ಶಕ್ತಿ ಹೆಚ್ಚಿಸುವ ರಸಾಯನ, ನೆಗಡಿ, ಕೆಮ್ಮು, ಜ್ವರ ಹಾಗೂ ಹಲವು ಸೋಂಕುಗಳಿಂದ ರಕ್ಷಣೆ ನೀಡುವ ಗುಣಗಳುಳ್ಳ ಆಯುರ್ವೇದ ಔಷಧಿ. ಹರಿದ್ರಾರಸವು ಅರಿಶಿನದ ಉತ್ತಮ ಔಷಧಿ ದ್ರವ್ಯವಾಗಿದ್ದು, ಅಲರ್ಜಿ ಹಾಗೂ ಸೋಂಕು ತಡೆಯುವ, ನೋವುÅ ನಿವಾರಕವಾಗಿದೆ. ಕಷಾಯ ಚೂರ್ಣವು ತುಳಸಿ, ಶುಂಠಿ, ಚಕ್ಕೆ, ಮೆಣಸು, ಅಶ್ವಗಂಧ, ಅಮೃತಬಳ್ಳಿ, ವಾಯು ವಿಡಂಗ, ಜೇಷ್ಠ ಮಧು, ಹಿಪ್ಪಲಿ ದ್ರವ್ಯಗಳಿದ್ದು, ಸೋಂಕು ತಡೆಗಟ್ಟಲು ಸಹಾಯ ಮಾಡುವುದರ ಜೊತೆಗೆ ಆರೋಗ್ಯ ವನ್ನೂ ವೃದ್ಧಿಸುತ್ತದೆ. ರಕ್ಷೋಘ್ನಧೂಪವು ಬೇವಿನ ಎಲೆ, ಅಳಲೆಕಾಯಿ, ಬಿಳಿ ಸಾಸಿವೆ, ಬಾರ್ಲಿ, ಸಾಂಬ್ರಾಣಿ ದ್ರವ್ಯಗಳಿದ್ದು, ಈ ಧೂಪ ಹಾಕುವುದರಿಂದ ಮನೆ, ಕಚೇರಿಗಳಲ್ಲಿ ರೋಗಾಣುಗಳು ನಾಶವಾಗಿ ಪರಿಸರ ಶುದ್ಧಿ ಯಾಗುತ್ತದೆ. ಅಣುತೈಲ ನಶ್ಯವು ಮೂಗಿನ ಹೊಳ್ಳೆಗಳನ್ನು ಸ್ವಚ್ಛಗೊಳಿಸಿ, ಶ್ವಾಸಕೋಶ ದೊಳಗೆ ಸೂಕ್ಷ್ಮಾಣುಗಳು ನುಸುಳುವುದನ್ನು ತಡೆಗಟ್ಟುತ್ತದೆ ಎಂದರು. ಈ ಸಂದರ್ಭ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸಿ.ಜಿ. ಬೆಟಸೂರ್‍ಮಠ, ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಜೆಎಸ್‍ಎಸ್ ಆಯುರ್ವೇದ ಕಾಲೇ ಜಿನ ಪ್ರಾಂಶುಪಾಲ ಸರ್ವೇಶ್ವರ್ ಇತರರಿದ್ದರು.

Translate »