ವಾಸುದೇವ ಮಹಾರಾಜ ಸದ್ಭಾವನಾ ಪ್ರಶಸ್ತಿ ಪ್ರದಾನ
ಮೈಸೂರು

ವಾಸುದೇವ ಮಹಾರಾಜ ಸದ್ಭಾವನಾ ಪ್ರಶಸ್ತಿ ಪ್ರದಾನ

August 11, 2020

ಮೈಸೂರು, ಆ. 10-ವಾಸುದೇವ ಮಹಾರಾಜರ ಆರಾಧನಾ ಮಹೋ ತ್ಸವದ ಅಂಗವಾಗಿ ಮೈಸೂರಿನ ಬ್ರಹ್ಮೀ ಭೂತ ವಾಸುದೇವ ಮಹಾರಾಜ್ ಫೌಂಡೇ ಷನ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಡಾ.ಭವಾನಿ ಶಂಕರ್ (ಶಿಕ್ಷಣ ಮತ್ತು ಸಮಾಜ ಸೇವೆ), ಡಾ. ಟಿ.ಎನ್.ಶಶಿಕುಮಾರ್ (ಯೋಗ) ಮತ್ತು ಎನ್.ಶ್ರೀಧರ ದೀಕ್ಷಿತ್ (ಸಮಾಜ ಸೇವೆ) ಅವರಿಗೆ ವಾಸುದೇವ್ ಮಹಾರಾಜ್ ಸದ್ಭಾ ವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ಸಮಾಜ ಸೇವಕ ಡಾ. ಕೆ.ರಘುರಾಂ ವಾಜಪೇಯಿ, ಸಂಸಾರಿ ಯಾಗಿಯೂ ವಿರಕ್ತಭಾವದಿಂದ ಆಧ್ಯಾ ತ್ಮಿಕ ಜೀವನ ನಡೆಸಬಹುದು ಎಂಬುದಕ್ಕೆ ವಾಸುದೇವ ಮಹಾರಾಜರ ಜೀವನ ಸಾಕ್ಷಿಯಾಗಿದೆ. ಅವರು ಭಾರತೀಯ ಪರಂಪರೆಯಲ್ಲಿ ಆಧ್ಯಾತ್ಮಿಕತೆಗೆ ಉನ್ನತ ಸ್ಥಾನವಿದ್ದು, ಇಂತಹ ಆಧ್ಯಾತ್ಮಿಕ ಸಾಧಕ ರಿಗೆ ತಮ್ಮದೇ ಆದ ಮಾರ್ಗದಲ್ಲಿ ಸಾಗಿ ಋಷಿ, ಸದೃಶ ಜೀವನ ನಡೆಸಿದವರು ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಬ್ಯಾಂಕ್ ಉದ್ಯೋಗಿಯಾಗಿದ್ದರೂ ಯಾವುದೇ ಹಣದ ಆಮಿಷಕ್ಕೆ ಬಲಿಯಾಗದೆ, ಐಷಾ ರಾಮಿ ಜೀವನ ಸಾಗಿಸದೆ ಸರಳತೆಯಿಂದ ಆಧ್ಯಾತ್ಮಿಕ ಜೀವನ ನಡೆಸಿದ ವಾಸುದೇವ ಮಹಾರಾಜರದು ಮಾದರಿ ವ್ಯಕ್ತಿತ್ವ ಎಂದು ಹೇಳಿದರು. ಸಮಾರಂಭದಲ್ಲಿ ಉದ್ಯಮಿ ಎಂ.ಎನ್.ದೊರೆಸ್ವಾಮಿ, ಸಂಸ್ಥೆಯ ಸಂಚಾಲಕ ಎನ್.ಅನಂತ, ಗದಾಧರ್, ಹರ್ಷವರ್ಧನ ಉಪಸ್ಥಿತರಿದ್ದರು.

Translate »