ಮೈಸೂರು, ಅ.27(ಆರ್‍ಕೆಬಿ)- ಖ್ಯಾತ ವ್ಯಂಗ್ಯಚಿತ್ರಕಾರರಾಗಿದ್ದ ದಿ.ಆರ್.ಕೆ.ಲಕ್ಷ್ಮಣ್ ಅವರ ಜನ್ಮಶತಮಾನೋತ್ಸವ ಆಚರಣೆ ಅಂಗವಾಗಿ ಬೆಂಗಳೂ ರಿನ ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘದ ಆಶ್ರಯದಲ್ಲಿ ಮೈಸೂ ರಿನ ವ್ಯಂಗ್ಯಚಿತ್ರಕಾರ ಎಂ.ವಿ.ನಾಗೇಂದ್ರ ಬಾಬು ಅ.31ರಂದು ವ್ಯಂಗ್ಯಚಿತ್ರ, ಭಾವಚಿತ್ರ, ಲೇಖನ ಪ್ರದರ್ಶನ ಹಮ್ಮಿಕೊಂಡಿದ್ದಾರೆ.
ಲಕ್ಷ್ಮಣ್ ಅವರೊಂದಿಗಿನ ಒಡನಾಟ ಕುರಿತ ಫೋಟೋ, ಲೇಖನಗಳ ಪ್ರದರ್ಶನವನ್ನು ಮೈಸೂರಿನ ರಾಮಾನುಜ ರಸ್ತೆ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದ್ದು, ಬೆಳಗ್ಗೆ 10.30ಕ್ಕೆ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಉದ್ಘಾಟಿಸುವರು. ಕರ್ನಾಟಕ ಚಿತ್ರಕಲಾ ಪರಿಷತ್ ಸಹ ಪ್ರಾಧ್ಯಾಪಕ ಬಾಬು ಜತ್ಕರ್, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಕಲಾಪೋಷಕ ಎಂ.ಎನ್.ದೊರೆಸ್ವಾಮಿ, ಶಿಲ್ಪ ಕಲಾವಿದ ಎಲ್.ಶಿವಲಿಂಗಪ್ಪ ಅತಿಥಿಯಾಗಿ ರುವರು ಎಂದು ವ್ಯಂಗ್ಯಚಿತ್ರಕಾರ ಎಂ.ವಿ.ನಾಗೇಂದ್ರ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.