ಹುಣಸೂರು ತಾಲೂಕು ಬಿಜೆಪಿ  ಅಧ್ಯಕ್ಷರಾಗಿ ನಾಗಣ್ಣಗೌಡ ಅಧಿಕಾರ ಸ್ವೀಕಾರ
ಮೈಸೂರು ಗ್ರಾಮಾಂತರ

ಹುಣಸೂರು ತಾಲೂಕು ಬಿಜೆಪಿ  ಅಧ್ಯಕ್ಷರಾಗಿ ನಾಗಣ್ಣಗೌಡ ಅಧಿಕಾರ ಸ್ವೀಕಾರ

March 2, 2020

ಹುಣಸೂರು, ಮಾ.1(ಹೆಚ್‍ಎಸ್‍ಎಂ)- ಹುಣಸೂರು ತಾಲೂಕು ಬಿಜೆಪಿ ನೂತನ ಅಧ್ಯಕ್ಷರಾಗಿ ನಾಗಣ್ಣಗೌಡ ಅಧಿಕಾರ ಸ್ವೀಕರಿಸಿದರು.

ಪಟ್ಟಣದ ತಾಲೂಕು ಬಿಜೆಪಿ ಕಚೇರಿ ಯಲ್ಲಿ ಭಾನುವಾರ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್‍ಸಿಂಹ ಅವರಿಂದ ಪಕ್ಷದ ಬಾವುಟವನ್ನು ಪಡೆ ಯುವ ಮೂಲಕ ನಾಗಣ್ಣಗೌಡ ಅಧಿ ಕಾರ ಸ್ವೀಕರಿಸಿದರು. ಈ ವೇಳೆ ಮಾಜಿ ಸಚಿವ ವಿಜಯ್‍ಶಂಕರ್, ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹೇಂದ್ರ, ಉಪಾ ಧ್ಯಕ್ಷ ರಮೇಶ್‍ಕುಮಾರ್, ಜಿಲ್ಲಾ ಸಂಘ ಟನಾ ಕಾರ್ಯದರ್ಶಿ ಸುರೇಶ್‍ಬಾಬು, ಜಿಪಂ ಮಾಜಿ ಸದಸ್ಯ ರಾಜಣ್ಣ ಅವರು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.

ಪಕ್ಷ ಸಂಘಟನೆಗೆ ಶ್ರಮಿಸಿ: ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ತಾಲೂಕು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾಗಣ್ಣಗೌಡ ಅವರು ಹಿಂದಿನ ಅಧ್ಯಕ್ಷರ ರೀತಿಯಲ್ಲಿಯೇ ಪಕ್ಷದ ಸಂಘಟನೆಗೆ ಶ್ರಮಿಸಬೇಕು. ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಸಾರ್ವಜನಿಕರ ಕುಂದು-ಕೊರತೆಗಳನ್ನು ಪರಿಹರಿಸ ಬೇಕು ಎಂದು ಸಲಹೆ ನೀಡಿದರು.

ಮತಾಂತರದ ಪಿಡುಗು ರಾಜ್ಯಾದ್ಯಂತ ಹರಡುತ್ತಿದೆ. ತಾಲೂಕಿನಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿವೆ. ಇದರ ಬಗ್ಗೆ ಜನರು ಜಾಗೃತರಾಗ ಬೇಕು. ಯಾವುದೇ ಗಲಾಟೆ, ಘರ್ಷಣೆ ಯಾದರೂ ಕೂಡಲೇ ಪೆÇಲೀಸ್ ಠಾಣೆಗೆ ದೂರು ನೀಡಬೇಕು ಎಂದರು.

ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹೇಂದ್ರ ಮಾತನಾಡಿ, ತಾಲೂಕಿನ ನಗರಸಭೆ ಚುನಾ ವಣೆಯಲ್ಲಿ ಪಕ್ಷ 3ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಮುಂಬರುವ ಗ್ರಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸುವಂತೆ ಪಕ್ಷವನ್ನು ತಳಮಟ್ಟದಿಂದ ಸದೃಢವಾಗಿ ಕಟ್ಟಬೇಕು ಎಂದು ನೂತನ ತಾಲೂಕು ಅಧ್ಯಕ್ಷರಿಗೆ ಸಲಹೆ ನೀಡಿದರು.

ತಾಲೂಕಿನ ನೂತನ ಅಧ್ಯಕ್ಷರಾಗಿ ಅಧಿ ಕಾರ ಸ್ವೀಕರಿಸಿದ ನಾಗಣ್ಣಗೌಡ ಮಾತನಾಡಿ, ಪಕ್ಷದ ಧುರೀಣರನ್ನು ಸ್ಮರಿಸಿ, ಪಕ್ಷದ ಸಿದ್ಧಾಂತಕ್ಕೆ ಬದ್ಧನಾಗಿ ತಾಲೂಕಿನಲ್ಲಿ ಪಕ್ಷವನ್ನು ಸದೃಢ ಗೊಳಿಸಲು ಶ್ರಮಿಸುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ತಮ್ಮ ರಾಜಕೀಯ ಗುರು ಗಳಾದ ಮಾಜಿ ಶಾಸಕ ಪಾಪಣ್ಣ ಅವರನ್ನು ಸ್ಮರಿಸಿದರು. ನಂತರ ಸಂಸದ ಪ್ರತಾಪ್‍ಸಿಂಹ ಸೇರಿದಂತೆ ಜಿಲ್ಲೆ ಹಾಗೂ ತಾಲೂಕಿನ ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿ ಹಣಗೋಡು ಮಂಜು ನಾಥ್, ಜಿಪಂ ಮಾಜಿ ಸದಸ್ಯರಾದ ಕುನ್ನೇಗೌಡ, ಪರಮೇಶ್, ಮಾಜಿ ನಗರಾ ಧ್ಯಕ್ಷ ರಾಜೇಂದ್ರ, ವೀರೇಶ್‍ರಾವ್, ಸತ್ಯಪ್ಪ, ಮಹಿಳಾ ಘಟಕದ ಅಧ್ಯಕ್ಷೆ ವೆಂಕಟಮ್ಮ ಉಪಸ್ಥಿತರಿದ್ದರು. ಮುಖಂಡ ರವಿ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಅರಗು ಮಂಜುನಾಥ್ ಸ್ವಾಗತಿಸಿದರು.

Translate »