87 ವರ್ಷ ಆಗಿದೆ ಅಷ್ಟೇ ಉತ್ಸಾಹ ಕಡಿಮೆಯಾಗಿಲ್ಲ: ಮಾಜಿ ಪ್ರಧಾನಿ ಎಚ್‍ಡಿಡಿ
ಹಾಸನ

87 ವರ್ಷ ಆಗಿದೆ ಅಷ್ಟೇ ಉತ್ಸಾಹ ಕಡಿಮೆಯಾಗಿಲ್ಲ: ಮಾಜಿ ಪ್ರಧಾನಿ ಎಚ್‍ಡಿಡಿ

March 2, 2020

ಹಾಸನ, ಮಾ.1- ಯಾರೋ ಒಬ್ಬರು ಹೋಗ್ತಾರೆ, ಬರ್ತಾರೆ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರ ರೊಂದಿಗೆ ಮಾಜಿ ಸಚಿವ ಜಿ.ಟಿ.ದೇವೇ ಗೌಡ ಬಿಜೆಪಿಗೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಿ.ಟಿ.ದೇವೇ ಗೌಡರು ಬಿಜೆಪಿಗೆ ಹೋಗಿದ್ರೂ, ಆಮೇಲೆ ನಮ್ಮಲ್ಲೇ ಮಂತ್ರಿ ಕೂಡ ಆಗಿದ್ರು, ಈಗ ಮತ್ತೆ ಹೋಗಬಹುದು ಎಂದರು.

ನಮ್ಮ ಪಕ್ಷವನ್ನು ಪುನಶ್ಚೇತನಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಯವರು ಟೀಕಿಸಿದ್ದಾರೆ. ಮಗ, ಮೊಮ್ಮಗ ಇಬ್ಬರು ಸೇರಿಕೊಂಡು ಪಕ್ಷ ಕಟ್ಟಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಕುಮಾರಸ್ವಾಮಿ ಪ್ರಶಾಂತ್ ಕಿಶೋರ್ ಜೊತೆ ಮಾತನಾಡಿದ್ದಾರೆ. ಅದಕ್ಕೂ ಹೆಚ್ಚಾಗಿ ರಾಜ್ಯಾದ್ಯಂತ ನಾನೇ ಸಂಚರಿಸಿ ಪಕ್ಷ ಕಟ್ಟುತ್ತೇನೆ ಎಂದು ತಿಳಿಸಿದರು.

ನನಗೆ 87 ವರ್ಷ ವಯಸ್ಸಾಗಿರ ಬಹುದು. ಆದರೆ, ನನ್ನಲ್ಲಿ ಉತ್ಸಾಹ ಕಡಿಮೆಯಾಗಿಲ್ಲ. ಯಾರೇ ಅಪಹಾಸ್ಯ ಮಾಡಿದ್ರೂ ನಾನು ತಲೆಕೆಡಿಸಿಕೊಳ್ಳಲ್ಲ. ಜನಗಳ ಮುಂದೆ ಹೋಗಿ ಅವರ ಕೆಲಸ ಮಾಡಿ ಹೋರಾಡುವುದನ್ನು ಮೈಗೂಡಿಸಿ ಕೊಂಡಿದ್ದೇನೆ ಎಂದು ವಿರೋಧಿ ಗಳ ಟೀಕೆಗೆ ಉತ್ತರ ನೀಡಿದರು.

1989ರಲ್ಲಿ ನಾನೊಬ್ಬನೇ ಇದ್ದೆ. ನನ್ನ ಜೊತೆ ಅಂದು ಬಿ.ಎಲ್.ಶಂಕರ್, ವೈ. ಎಸ್.ವಿ.ದತ್ತ, ವಿ.ಎಸ್.ಉಗ್ರಪ್ಪ ಇದ್ದರು. ಇಂದು ಪಕ್ಷದಲ್ಲಿ ಮುಖಂಡರಿದ್ದಾರೆ, ಬಂಡೆಪ್ಪ ಕಾಶೆಂಪೂರ, ಬಸವರಾಜ್ ಹೊರಟ್ಟಿಯಂತಹ ನಾಯಕರಿದ್ದಾರೆ. ಹಾಸನ ಜಿಲ್ಲೆಯಲ್ಲೂ ರಾಮಸ್ವಾಮಿ, ಕುಮಾರಸ್ವಾಮಿಯಂತಹ ಲೀಡರ್ಸ್ ಇದ್ದಾರೆ. ಇವರೆಲ್ಲರ ಸಹಕಾರದಿಂದ ಪಕ್ಷವನ್ನು ಪುನಶ್ಚೇತನಗೊಳಿಸುತ್ತೇನೆ ಎಂದರು.

ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯಲಿ: ಇನ್ನು, ಎತ್ತಿನಹೊಳೆ ವಿಷಯದ ಬಗ್ಗೆ ಮಾತ ನಾಡಿದ ಅವರು, ನೀರಾವರಿ ವಿಷಯದಲ್ಲಿ ಹೆಚ್ಚು ಮಾತ ನಾಡಲ್ಲ, ಎತ್ತಿನಹೊಳೆ ಯೋಜನೆಯಲ್ಲಿ ಯಾರು ಏನು ಮಾಡುತ್ತಾರೆ ಗಮನಿಸುತ್ತೇನೆ. ಯೋಜನೆಯಿಂದ ಯಾವ ಭಾಗಕ್ಕೂ ಅನುಕೂಲವಾಗಬಾರದು. ಎತ್ತಿನಹೊಳೆಯ ಯೋಜನೆ ಉದ್ದೇಶ ಕೋಲಾರಕ್ಕೆ ಕುಡಿ ಯುವ ನೀರು ನೀಡಬೇಕು ಎಂಬುದಾಗಿದೆ, ಮೊದಲು ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿ ಎಂದು ಹೇಳಿದರು.

ನನ್ನ ಹುಟ್ಟುಗುಣ ಹೋರಾಟ: ಎತ್ತಿನಹೊಳೆ ಯೋಜನೆಯನ್ನು ಬೇರೆಡೆ ತಿರುಗಿಸುವುದು ಸಮಂಜಸವಲ್ಲ. ನಾನು ಈ ವಿಷಯದಲ್ಲಿ ಸುಮ್ಮನೆ ಕೂರುವುದಿಲ್ಲ. ನನ್ನ ಹುಟ್ಟುಗುಣ ಹೋರಾಟ ಅದರಂತೆಯೇ ನಾನು ಹೋರಾ ಡುತ್ತೇನೆ ಎಂದು ಯೋಜನೆಯ ರೂಪುರೇಷೆ ಬದಲಿಸಿದ್ದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು

Translate »