ಮೈಸೂರು ವಿವಿಯಲ್ಲಿ ನ್ಯಾಕ್  ತಂಡದ ಮೌಲ್ಯಮಾಪನ ಆರಂಭ
ಮೈಸೂರು

ಮೈಸೂರು ವಿವಿಯಲ್ಲಿ ನ್ಯಾಕ್ ತಂಡದ ಮೌಲ್ಯಮಾಪನ ಆರಂಭ

September 17, 2021

ಮೈಸೂರು,ಸೆ.16(ಆರ್‍ಕೆ)-ನ್ಯಾಷನಲ್ ಅಕ್ರೆಡೇಷನ್ ಅಂಡ್ ಅಸೆಸ್‍ಮೆಂಟ್ ಕಮಿಟಿ (ಓಂಂಅ) ತಂಡದ ಅಧಿಕಾರಿಗಳು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳ ಕುರಿತಂತೆ ಅಸೆಸ್‍ಮೆಂಟ್ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.
ಬುಧವಾರ ಮೈಸೂರಿಗೆ ಆಗಮಿಸಿರುವ 7 ಮಂದಿಯ ತಂಡ, ಬುಧವಾರ ಕ್ರಾಫರ್ಡ್ ಹಾಲ್‍ನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹಮ್ಮಿಕೊಂಡಿ ರುವ ಪದವಿ, ಸ್ನಾತಕೋ ತ್ತರ ಪದವಿ ಪ್ರವೇಶ ಪ್ರಕ್ರಿಯೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಒದಗಿಸಿ ರುವ ಸೌಲಭ್ಯಗಳು, ಲ್ಯಾಬೊರೇಟರಿ, ಗ್ರಂಥಾ ಲಯ, ಡಿಜಿಟಲ್ ಲೈಬ್ರರಿ ಪ್ರಕ್ರಿಯೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಎಲ್ಲಾ ವಿಭಾಗದ ಮುಖ್ಯಸ್ಥರು ಸಿದ್ಧಪಡಿಸಿರುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಪ್ರಸ್ತುತ ಪಡಿಸಿದರಲ್ಲದೆ, ಶಿಕ್ಷಣದ ಗುಣಮಟ್ಟ, ಕಳೆದ 5 ವರ್ಷಗಳ ಫಲಿತಾಂಶದ ಅಂಕಿ-ಅಂಶಗಳು, ಮುಂದೆ ಕೈಗೊಂಡಿರುವ ಯೋಜನೆಗಳ ಬಗ್ಗೆ ತಂಡದ ಸದಸ್ಯರಿಗೆ ವಿವರಿಸಿದರು.

ವಿಶ್ವವಿದ್ಯಾನಿಲಯದಲ್ಲಿರುವ ವಿಭಾಗಗಳು, ಸ್ಥಾಪಿಸಿರುವ ಅಧ್ಯಯನ ಪೀಠಗಳು, ಪರೀಕ್ಷಾ ಕ್ರಮ, ಮೌಲ್ಯಮಾಪನ ಪ್ರಕ್ರಿಯೆ, ಆನ್‍ಲೈನ್ ಪ್ರವೇಶಾತಿ, ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಮಾಡಿರುವ ಸಿದ್ಧತೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒದಗಿಸಿರುವ ಸೌಲಭ್ಯಗಳ ಕುರಿತಂತೆ ಕುಲಪತಿ ಪ್ರೊ. ಜಿ.ಹೇಮಂತಕುಮಾರ್ ವಿವರಿಸಿದರು.

ನಾಳೆ(ಸೆ.17) ಮಾನಸಗಂಗೋತ್ರಿ ಆವರಣದಲ್ಲಿರುವ ಅಧ್ಯಯನ ಕೇಂದ್ರಗಳಿಗೆ ಭೇಟಿ ನೀಡಲಿರುವ ನ್ಯಾಕ್ ಅಧಿಕಾರಿಗಳು, ಕೆಲ ವಿದ್ಯಾರ್ಥಿಗಳಿಂದಲೂ ಫೀಡ್ ಬ್ಯಾಕ್ ಪಡೆದು ಸಂಜೆ ಹಿಂತಿರುಗುವರು. 5 ವರ್ಷಕ್ಕೊಮ್ಮೆ ನಡೆಯುವ ಮೌಲ್ಯಮಾಪನದಲ್ಲಿ ಪಡೆದ ಅಂಕಗಳಿಗನುಸಾರ ವಿಶ್ವವಿದ್ಯಾ ನಿಲಯದ ರ್ಯಾಂಕಿಂಗ್ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಸಮಿತಿ ಸದಸ್ಯರಿಗೆ ಮೈಸೂರು ವಿಶ್ವವಿದ್ಯಾನಿಲಯವು ಅಗತ್ಯ ಎಲ್ಲಾ ದಾಖಲಾತಿ, ಸಿ.ಡಿ. ರೂಪದ ವರದಿಗಳನ್ನು ನೀಡಿದ್ದು, ಖುದ್ದು ಪರಿಶೀಲಿಸಿ ಸಂಗ್ರಹಿಸಿರುವ ಮಾಹಿತಿ ಆಧಾರದ ಮೇಲೆ ಮೌಲ್ಯ ಮಾಪನ ರ್ಯಾಂಕಿಂಗ್ ಅಂಕ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

Translate »