ಪಾಲಿಕೆ ಸದಸ್ಯೆ ನಮ್ರತಾ ರಮೇಶ್ ಹುಟ್ಟುಹಬ್ಬ ವಿಶಿಷ್ಟ ರೀತಿ ಆಚರಣೆ
ಮೈಸೂರು

ಪಾಲಿಕೆ ಸದಸ್ಯೆ ನಮ್ರತಾ ರಮೇಶ್ ಹುಟ್ಟುಹಬ್ಬ ವಿಶಿಷ್ಟ ರೀತಿ ಆಚರಣೆ

August 14, 2020

ಮೈಸೂರು, ಆ.13(ಆರ್‍ಕೆಬಿ)- ಮೈಸೂರು ಮಹಾನಗರ ಪಾಲಿಕೆಯ 22ನೇ ವಾರ್ಡ್ (ಪಡುವಾರಹಳ್ಳಿ) ಸದಸ್ಯೆ ನಮ್ರತಾ ರಮೇಶ್ 44ನೇ ಹುಟ್ಟುಹಬ್ಬವನ್ನು ಗುರುವಾರ ವಿಶಿಷ್ಟ ರೀತಿ ಆಚರಿಸಿಕೊಂಡರು. ನೂರಾರು ಬಡವರು ಹಾಗೂ ಪೌರ ಕಾರ್ಮಿಕ ಕುಟುಂಬಗಳಿಗೆ ಆಹಾರದ ಕಿಟ್, ಹಣ್ಣು ಹಂಪಲುಗಳನ್ನು ವಿತರಿಸಿದರು.

ಪಡುವಾರಹಳ್ಳಿ ನಾರಾಯಣಸ್ವಾಮಿ ಬ್ಲಾಕ್ ಬಳಿ ಉದ್ಯಾನವನದ ಹತ್ತಿರದ ತಮ್ಮ ಮನೆಯ ಮುಂದೆ ಗುರುವಾರ ಅಕ್ಕಿ, ಬೇಳೆ ಕಾಳುಗಳು, ಅಡುಗೆ ಎಣ್ಣೆ, ಸಕ್ಕರೆ, ಟೀ ಪುಡಿ, ಸೋಪು ಮತ್ತಿತರೆ 12ಕ್ಕೂ ಹೆಚ್ಚು ಪದಾರ್ಥಗಳಿರುವ ದಿನಸಿ ಕಿಟ್‍ಗಳನ್ನು 600ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ವಿತರಿಸಿದರು. ಪ್ರತಿಯೊಬ್ಬರಿಗೂ ಮಾಸ್ಕ್ ಹಾಕಿಸಿ, ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಸ್ಯಾನಿಟೈಸರ್ ಬಳಸುವಂತೆ ಮಾಡಿ ಬಳಿಕ ಕಿಟ್ ವಿತರಿಸಿದರು. 3 ದಿನಗಳ ಮೊದಲೇ ತೀರಾ ಬಡವರನ್ನು ಗುರುತಿಸಿ ಟೋಕನ್ ನೀಡಲಾಗಿತ್ತು. ಮತ್ತೊಂದು ಕಾರ್ಯ ಕ್ರಮದಲ್ಲಿ 50 ಪೌರ ಕಾರ್ಮಿಕರಿಗೆ ಸನ್ಮಾ ನಿಸಿ, ಹಣ್ಣು-ಹಂಪಲು, ಒಣದ್ರಾಕ್ಷಿ, ಖರ್ಜೂರ, ಗೋಡಂಬಿ, ಬಾದಾಮಿ ಇರುವ ಕಿಟ್ ವಿತರಿಸಿದರು. ಜತೆಗೆ ಬೆಳ್ಳಿಯ ಪುಟ್ಟ ಗಣೇಶನ ವಿಗ್ರಹ ನೀಡಿದರು. ಪೌರ ಕಾರ್ಮಿ ಕರು ಗೌರಿ-ಗಣೇಶ ಹಬ್ಬವನ್ನು ಸಂಭ್ರಮ ದಿಂದ ಆಚರಿಸಲಿ ಎಂಬುದು ನಮ್ಮ ಉದ್ದೇಶ ಎಂದು ನಮ್ರತಾ ತಿಳಿಸಿದರು.

ಅಭಿಮಾನಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ತಂದಿದ್ದ ಕೇಕ್‍ಗಳನ್ನು ನಮ್ರತಾ ಕತ್ತರಿಸಿ, ಎಲ್ಲರಿಗೂ ವಿತರಿಸಿ ದರು. ಈ ಸಂದರ್ಭದಲ್ಲಿ ನಮ್ರತಾ ಅವರ ಪತಿ ರಮೇಶ್, ಮಕ್ಕಳಾದ ಅಕ್ಷತಾ, ಹರ್ಷಿತಾ, ಅರ್ಪಿತಾ, ಪೂಜಾ, ದಶಮಿ, ಸಹೋದರ ಉಮೇಶ್, 19ನೇ ವಾರ್ಡ್ ನಗರ ಪಾಲಿಕೆ ಸದಸ್ಯೆ ಭಾಗ್ಯಮ್ಮ, ವಾರ್ಡ್ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯಮ್ಮ, ಮುಖಂಡರಾದ ಪಡು ವಾರಹಳ್ಳಿ ರಾಮಕೃಷ್ಣ, ಯೋಗೇಶ್, ಚಿಕ್ಕವೆಂಕಟ, ಮಂಜು, ಭೀಮ, ರಾಘು, ಕಾಂತ, ಕರಿಯಪ್ಪಗೌಡ, ಬಣ್ಣ ರವಿ, ಬೆಟ್ಟೇಗೌಡ, ನಳಿನಾ ಮಂಜು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Translate »