ಕುಡುಕನೊಬ್ಬನ ಜೀವನದಲ್ಲಿ ಸುಂದರ ಯುವತಿಯ ಪ್ರವೇಶದಿಂದ ಆತನ ಜೀವನ ಹೇಗೆ ಬದಲಾಗುತ್ತದೆ. ಇದರ ಜೊತೆಗೆ ತಂದೆ-ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಚಿತ್ರ ನಾನೊಂಥರಾ. ಈಗಾಗಲೇ ತನ್ನ ಚಿತ್ರೀಕರಣ ಹಾಗೂ ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ರಮೇಶ್ ಕಗ್ಗಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ತಾರಖ್ ಶೇಖರಪ್ಪ ನಾಯಕನಾಗಿದ್ದು, ರಕ್ಷಕ ಚಿತ್ರದ ನಾಯಕಿ ಪಾತ್ರ ಮಾಡಿದ್ದಾರೆ. ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ನಡೆಸುತ್ತಿರುವ ಡಾ.ಜಾಕ್ಲಿನ್ ಫ್ರಾನ್ಸಿಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇವರ ಪುತ್ರ ಜೈಸನ್ ಕೂಡ ಚಿತ್ರದಲ್ಲಿ ನಾಯಕನ ಸಹೋದರನಾಗಿ ಕಾಣಿಸಿಕೊಂಡಿದ್ದಾರೆ.
ಈ ಸಂದಭರ್Àದಲ್ಲಿ ಮಾತನಾಡಿದ ನಿರ್ಮಾಪಕಿ ಡಾ.ಜಾಕ್ಲಿನ್ ಫ್ರಾನ್ಸಿಸ್ ಒಮ್ಮೆ ಡಾ.ತಾರಳ್ ಅವರು ಬಂದು ಈ ಕಥೆಯನ್ನು ಹೇಳಿದರು. ನಾನು ಕೂಡ ಚಿಕ್ಕವಳಿದ್ದಾಗ ಒಂದು ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದೆ. ಹಾಗಾಗಿ ಸಿನಿಮಾ ಮಾಡಬೇಕೆಂಬ ಆಸೆ ಹುಟ್ಟಿಕೊಂಡಿತು. ನನ್ನ ಮಗ ಕೂಡ ಚಿತ್ರರಂಗದ ಕಡೆಗೆ ಆಸಕ್ತಿ ಹೊಂದಿದ್ದ. ಆತನನ್ನು ಚಿತ್ರರಂಗಕ್ಕೆ ಪರಿಚಯಿಸಬೇಕು ಎಂಬ ಕಾರಣವೂ ಈ ಸಿನಿಮಾ ತಯಾರಾಗಲು ಕಾರಣವಾಯಿತು ಎಂದು ಹೇಳಿದರು.
ನಾಯಕ ತಾರಖ್ ವಿ.ಶೇಖರಪ್ಪ ಮಾತನಾಡಿ, ಅಸಿಂಕೋಜಿಲ್ಲ, ಖಾಕಿ ನಂತರ ಇದು ನನ್ನ 3ನೆ ಚಿತ್ರ. ನಿರ್ಮಾಪಕರು ಚಿತ್ರರಂಗಕ್ಕೆ ಸಂಬಂಧಿಸಿ ದವÀರಲ್ಲ. ಆದರೂ ನಾನು ಹೇಳಿದ ಒಂದೇ ಮಾತಿಗೆ ಸಿನಿಮಾ ಮಾಡಲು ಒಪ್ಪಿದರು. ಚಿತ್ರದ ಟೈಟಲ್ ಥರವೇ ನನ್ನ ಪಾತ್ರ ಇರುತ್ತದೆ. ಆತ ಒಳ್ಳೆಯವನೋ, ಕೆಟ್ಟವನೋ ಎನ್ನುವುದೇ ಈ ಚಿತ್ರದ ಕಥೆ. ಇಡೀ ಸಿನಿಮಾ ತಂದೆ-ಮಗನ ಬಾಂಧವ್ಯದ ಹಾಗೂ ಸ್ನೇಹ ಸಂಬಂಧದ ಮೇಲೆ ನಡೆಯುತ್ತದೆ ಎಂದು ಹೇಳಿದರು. ಸುನಿಲ್ ಸಾಮ್ಯುಯಲ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.