ಎಂಬತ್ತರ ದಶಕದಲ್ಲಿ ರೈತರ ಮೇಲೆ ಹೇರಿದ್ದ ಕರದ ವಿರುದ್ಧ ನಡೆದ ಹೋರಾಟದ ಕಥೆ `ನರಗುಂದ ಬಂಡಾಯ’ ಈಗ ಸಿನಿಮಾ ರೂಪ ಪಡೆದು ಬೆಳ್ಳಿತೆರೆಯ ಮೇಲೆ ಬರುತ್ತಿದೆ. ಈಗಾಗಲೇ ನಾಟಕವಾಗಿ ಮೂಡಿಬಂದಿದ್ದ ಈ ಕಥೆ ಸಾವಿರಾರು ಪ್ರದರ್ಶನ ಕಂಡಿದೆ.
ನಾಗೇಂದ್ರ ಮಾಗಡಿ ನಿರ್ದೇಶನದ ಈ ಚಿತ್ರ ಮಾ.12ಕ್ಕೆ ರಿಲೀಸ್ ಆಗುತ್ತಿದೆ. ನರಗುಂದ ಬಂಡಾಯದಲ್ಲಿ ಹುತಾತ್ಮರಾದ ಚಿಕ್ಕನರಗುಂದದ ಈರಪ್ಪ ಕಡ್ಲಿಕೊಪ್ಪ ಮತ್ತು ನವಲಗುಂದದ ರೈತ ಬಸಪ್ಪ ಲಕ್ಕುಂಡಿ ಅವರ ಪಾತ್ರಗಳು ಈ ಚಿತ್ರದಲ್ಲಿ ಪ್ರಮುಖವಾಗಿ ಮೂಡಿಬರಲಿದ್ದು, ಇದರ ಜೊತೆ ಆ ಘಟನೆಗೆ ಕಾರಣವಾದ ಅಂಶಗಳು ಮತ್ತು ಸರ್ಕಾರದ ಪಾತ್ರ ಕೂಡ ಮೂಡಿಬರಲಿದೆ.
ಈರಪ್ಪನ ಪಾತ್ರವನ್ನು ಪುಟ್ಟಗೌರಿ ಮದುವೆ ಖ್ಯಾತಿಯ ರಕ್ಷ್ ನಿರ್ವಹಿಸಿದ್ದು, ಅವರ ಜೋಡಿಯಾಗಿ ಶುಭಾ ಪೂಂಜ ಬಣ್ಣ ಹಚ್ಚಿದ್ದಾರೆ. 1980ರ ಜುಲೈ 21ರಂದು ನರಗುಂದ ಮತ್ತು ನವಲಗುಂದದಲ್ಲಿ ಮಲಪ್ರಭಾ ನದಿಯ ಬೆಟರಮೆಂಟ್ ಲೆವಿಯ ಹೆಚ್ಚಳ ವಿರೋಧಿಸಿ ರೈತರು ಹೋರಾಟ ನಡೆಸಿದ್ದರು. ನೀರಾವರಿ ಕರವನ್ನು ಒತ್ತಾಯದಿಂದ ವಸೂಲಿ ಮಾಡಲಾ ಗುತ್ತಿತ್ತು. ಇದನ್ನು ವಿರೋಧಿಸಿ ಈ ಚಳವಳಿ ಪ್ರಾರಂಭ ವಾಯಿತು. ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಪೆÇಲೀಸರು ಗೋಲಿಬಾರ್ ಮಾಡಿದರು.
ಇದೇ ಕಥೆಯನ್ನು ನಾಗೇಂದ್ರ ಮಾಗಡಿ ಅವರು ನರಗುಂದ ಬಂಡಾಯ ಚಿತ್ರದಲ್ಲಿ ತಂದಿದ್ದಾರೆ. ಈ ಚಿತ್ರದ ಹಾಡುಗಳನ್ನು ನಟ ಶಿವರಾಜ್‍ಕುಮಾರ್ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತ ಮಹಾದಾಯಿ ಕುರಿತು ಸಿನಿಮಾ ಮಾಡಿರುವುದು ತುಂಬಾ ಖುಷಿ ಕೊಟ್ಟಿದೆ. ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಮನಸ್ಸಿಗೆ ಹತ್ತಿರವಾಗಿದೆ. ಟ್ರೇಲರ್ ನೋಡಿದಾಗ ಸಿನಿಮಾ ಕೂಡ ಚೆನ್ನಾಗಿ ಬಂದಿರುತ್ತದೆ ಅನಿಸುತ್ತದೆ ಎಂದರು. ನಿರ್ಮಾಪಕ ಸಿz್ದÉೀಶ್ ಮಾತನಾಡಿ, ನಾನು ಮೂಲತಃ ರಂಗಭೂಮಿ ಕಲಾವಿದ. ಈ ಚಿತ್ರದ ಕಥೆಯನ್ನು ನಾನೇ ಬರೆದಿz್ದÉೀನೆ. ಇದಕ್ಕೆ ನಿರ್ದೇಶಕ ನಾಗೇಂದ್ರ ಮಾಗಡಿ ಹಾಗೂ ಶೇಖರ್ ಸಾಥ್ ನೀಡಿದರು. ಈ ಸಿನಿಮಾ ಮೂಲಕ ಗೆದ್ದೆ ಗೆಲ್ಲುತ್ತೇವೆ ಎಂಬ ನಂಬಿಕೆ ಇದೆ ಎಂದು ಹೇಳಿದರು.