ಕೆಪಿಟಿಸಿಎಲ್ ಅಧಿಕಾರಿ ಮೇಲೆ ಹಲ್ಲೆ
ಮಂಡ್ಯ

ಕೆಪಿಟಿಸಿಎಲ್ ಅಧಿಕಾರಿ ಮೇಲೆ ಹಲ್ಲೆ

March 6, 2020

ಮದ್ದೂರು, ಮಾ.5- ಜಮೀನಿನಲ್ಲಿ ಹೈ ಟೆನ್ಷನ್ ವೈರ್ ಅಳವಡಿಸಲು ತೆಂಗಿನಮರಗಳನ್ನು ಕಡಿದ ಕೆಪಿಟಿಸಿಎಲ್ ಅಧಿಕಾರಿಗೆ ಹಲ್ಲೆ ಮಾಡಿರುವ ಘಟನೆ ಬುಧವಾರ ಸಂಜೆ ನಡೆದಿದೆ. ತಾಲೂಕಿನ ಗೊರವನಹಳ್ಳಿ ಗ್ರಾಮದ ಚೇತನ್ ಮತ್ತು ಅನಿಲ್ ಎಂಬುವರು, ಕೆಪಿಟಿಸಿಎಲ್ ಎಇ ಆನಂದ್‍ಗೆ ಕಬ್ಬಿನ ಜಲ್ಲೆಯಿಂದ ಹಲ್ಲೆ ಮಾಡಿದ್ದಾರೆ.

ವಿವರ: ಗೊರವನಹಳ್ಳಿ ಗ್ರಾಮದಲ್ಲಿ ಹೈ ಟೆನ್ಷ್‍ನ ವೈರ್ ಅಳವಡಿಸಲು ತೆಂಗಿನಮರಗಳನ್ನು ಕಡಿಯುವ ಸಂಬಂಧ ರೈತ ಬೋರೇಗೌಡನಿಗೆ ಕೆಪಿಟಿಸಿಎಲ್ ವತಿಯಿಂದ ಮರಕ್ಕೆ ಪರಿಹಾರ ನೀಡಿದ್ದರು. ಈ ಮಧ್ಯೆ ಜಮೀನಿನಲ್ಲಿ ಸ್ವಾಧೀನವಿರುವ ರೈತ ಬೋರೇಗೌಡ ಪರಿಹಾರ ನನಗೆ ಬರಬೇಕು ಎಂದು ಒತ್ತಾಯಿಸಿ ಕೆಪಿಟಿಸಿಎಲ್‍ಗೆ ತಕರಾರು ಅರ್ಜಿ ಹಾಕಿದ್ದರು. ಇಷ್ಟಾದರು ಅಧಿಕಾರಿಗಳು ಆರ್‍ಟಿಸಿ ಇರುವ ಬೋರೇಗೌಡ ನಿಗೆ ಪರಿಹಾರ ಮಂಜೂರು ಮಾಡಿ ಜಮೀನಿನಲ್ಲಿ 7 ತೆಂಗಿನ ಮರವನ್ನು ತೆರವು ಮಾಡಿದರು. ಇದರಿಂದ ಸ್ವಾಧೀನದಲ್ಲಿ ರೈತ ಬೋರೇಗೌಡನ ಸಂಬಂಧಿಗಳಾದ ಚೇತನ್ ಮತ್ತು ಅನಿಲ್ ಎಂಬುವರು ಆಕ್ರೋಶಗೊಂಡು ಅಧಿಕಾರಿ ಆನಂದ್ ಅವರಿಗೆ ಕಬ್ಬಿನ ಜಲ್ಲೆಯಿಂದ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಅಧಿಕಾರಿ ಆನಂದ್ ಹಾಗೂ ಸ್ವಾಧೀನದಲ್ಲಿರುವ ರೈತ ಬೋರೇಗೌಡ ಎಂಬುವರು ಇಬ್ಬರು ಪ್ರತ್ಯೇಕವಾಗಿ ದೂರು ನೀಡಿದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »