ರಾಷ್ಟ್ರೀಯ ಕಾಲೇಜು ಉತ್ಸವ ‘ಮಹಮ್-2020′ ಚಾಲನೆ
ಮೈಸೂರು

ರಾಷ್ಟ್ರೀಯ ಕಾಲೇಜು ಉತ್ಸವ ‘ಮಹಮ್-2020′ ಚಾಲನೆ

February 8, 2020

ಮೈಸೂರು: ಮೈಸೂರಿನ ಪ್ರತಿಷ್ಠಿತ ಎಸ್‍ಬಿಆರ್‍ಆರ್ ಮಹಾಜನ ಕಾಲೇಜಿನ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಕಾಲೇಜು ಉತ್ಸವ ‘ಮಹಮ್-2020′ ಉದ್ಘಾಟನೆಯನ್ನು ಮೈಸೂರಿನ ವಾಗ್ಮಿ ಪ್ರೊ. ಎಂ.ಕೃಷ್ಣೇಗೌಡ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಮಹಾಜನ ವಿದ್ಯಾಸಂಸ್ಥೆ ಇಡೀ ಮೈಸೂರಿನಲ್ಲೇ ತುಂಬಾ ಹಳೆಯದಾದ ಪ್ರತಿಷ್ಠಿತ ಸಂಸ್ಥೆ. ಈ ಸಮಾರಂಭಕ್ಕೆ ಆಗಮಿಸಿರುವುದು ನನಗೆ ಹೆಮ್ಮೆಯಾಗುತ್ತದೆ. ಪ್ರಪಂಚದಲ್ಲಿ ಮನುಷ್ಯನ ಸೃಷ್ಠಿ ವಿಕಾಸ ಮತ್ತು ಉಗಮ ಒಂದು ಅದ್ಭುತ. ಪ್ರಕೃತಿ ಯಿಂದ ಮನುಷ್ಯ ಬಹಳಷ್ಟು ಪಾಠ ಗಳನ್ನು ಕಲಿಯುತ್ತಾನೆ. ಮನುಷ್ಯ ನಿಗೆ ಮಾತು ಬಹಳ ದೊಡ್ಡ ವಿಸ್ಮಯ. ಮಾತಿನಿಂದ ಅವನ ಸಂಸ್ಕøತಿ ತಿಳಿಯುತ್ತದೆ. ಅವನು ತನ್ನ ಕಂಠವನ್ನು ಹೇಗೆ ಬಳಸು ತ್ತಾನೆ ಎಂಬುದು ಮುಖ್ಯವಾಗುತ್ತದೆ, ನಮ್ಮ ಮಾತು ಇನ್ನೊಬ್ಬರಿಗೆ ಆಸಕ್ತಿ ಮತ್ತು ಇಷ್ಟವಾಗಬೇಕು. ಹೇಗೆ, ಎಲ್ಲಿ, ಯಾವ ರೀತಿ ನಾವು ಮಾತನಾಡಬೇಕು ಎಂಬುದನ್ನು ಮೊದಲು ಕಲಿಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಭಾಷಣದಲ್ಲಿ ಮಹಾಜನ ವಿದ್ಯಾಸಂಸ್ಥೆಯ ಟಿ. ಮುರಳೀಧರ್ ಭಾಗವತ್ ಮಾತನಾಡುತ್ತಾ, ಇಂದಿನ ಜಾಗತಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ಆತ್ಮಸ್ಥೈರ್ಯ ಮುಖ್ಯ. ಕೀಳರಿಮೆಯನ್ನು ಬಿಟ್ಟು, ಸೇವಾ ಮನೋಭಾವದಿಂದ ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.

ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಟಿ.ವಿಜಯಲಕ್ಷ್ಮೀ ಮುರಳೀಧರ್ ಮಾತನಾಡಿದರು. ವೇದಿಕೆಯಲ್ಲಿ ಮಹಾಜನ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಪಿ. ಸರೋಜಮ್ಮ, ಪೂಜಾ ಭಾಗವತ್ ಸ್ಮಾರಕ ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಸಿ.ಕೆ.ರೇಣುಕಾರ್ಯ, ಕಾಲೇಜಿನ ಮುಖ್ಯಕಾರ್ಯ ನಿರ್ವಹಣಾ ಅಧಿಕಾರಿ ಡಾ. ಎಸ್.ಆರ್.ರಮೇಶ್, ಕಾಲೇಜಿನ ಪ್ರಾಚಾರ್ಯ ಡಾ.ಎಸ್. ವೆಂಕಟರಾಮು, ಉಪ ಪ್ರಾಂಶುಪಾಲರಾದ ಬಿ.ಎಸ್.ಜಯಕುಮಾರಿ, ಮಹಮ್-2020 ಸಂಯೋಜನಾಧಿ ಕಾರಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಆರ್. ತಿಮ್ಮೇಗೌಡ, ಮಹಮ್-2020ನ ವಿದ್ಯಾರ್ಥಿ ಸಂಯೋಜಕರಾದ ರವಿಶಂಕರ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಭಾರತಿ ಹಾಗೂ ಬಿಂಬ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ.ಎಸ್. ವೆಂಕಟರಾಮು ಸ್ವಾಗತಿಸಿದರೆ, ಡಾ.ಎಚ್.ಆರ್.ತಿಮ್ಮೇಗೌಡ ವಂದಿಸಿದರು. ರವಿಶಂಕರ್ ಮಹಮ್-2020 ಕಾರ್ಯಕ್ರಮ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ದೇಶದ ಹಾಗೂ ರಾಜ್ಯದ ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ವೃಂದದವರು, ಇತರೆ ಗಣ್ಯರು ಪಾಲ್ಗೊಂಡಿದ್ದರು.

Translate »