ಇಂದಿನಿಂದ `ಭವನೋತ್ಸವ’ ಕಾರ್ಯಕ್ರಮ
ಮೈಸೂರು

ಇಂದಿನಿಂದ `ಭವನೋತ್ಸವ’ ಕಾರ್ಯಕ್ರಮ

February 8, 2020

ಮೈಸೂರು: ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಭಾರತೀಯ ವಿದ್ಯಾ ಭವನ, ಮೈಸೂರು ಕೇಂದ್ರದ ಕಲಾಭಾರತಿ ವಿಭಾಗದ ವತಿಯಿಂದ ಭಾರತೀಯ ವಿದ್ಯಾಭವನ ಸಂಸ್ಥಾಪಕರಾದ ಕುಲಪತಿ ಡಾ.ಕೆ.ಎಂ.ಮುನ್ಷಿ ಅವರ 132ನೇ ಜನ್ಮೋತ್ಸವದ ಅಂಗವಾಗಿ ಫೆ.8 ಮತ್ತು 9ರಂದು ಭವನೋತ್ಸವ ಕಾರ್ಯ ಕ್ರಮವನ್ನು ಬಿವಿಬಿಯ ಪ್ರೊ.ವೈ.ಟಿ.ತಾತಾಚಾರಿ ಸಭಾಂ ಗಣದಲ್ಲಿ ಏರ್ಪಡಿಸಲಾಗಿದೆ.

ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಪ್ರಭಾರ ಉಪಕುಲಪತಿ ಪ್ರೊ. ನಾಗೇಶ್ ವಿ.ಬೆಟ್ಟಕೋಟೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ ಭಾಗವಹಿಸುವರು. ಗೌರವ ಅತಿಥಿಗಳಾಗಿ ಬಿವಿಬಿ, ಮೈಸೂರು ಕೇಂದ್ರದ ಉಪಾಧ್ಯಕ್ಷ ಕೆ.ಬಿ.ಗಣಪತಿ ಉಪಸ್ಥಿತ ರಿದ್ದು, ಭಾರತೀಯ ವಿದ್ಯಾ ಭವನ ಮೈಸೂರು ಕೇಂದ್ರದ ಅಧ್ಯಕ್ಷ ಪ್ರೊ.ಎ.ವಿ. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸುವರು. ವಿದ್ಯಾಭವನ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಎಸ್.ಸಿ.ಬಾಲಸುಬ್ರಹ್ಮಣ್ಯಂ ವಿಶೇಷ ಸನ್ಮಾನಿತರಾಗಿರುವರು.

ಫೆ.9ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಚನ್ನಪ್ಪ ಭಾಗವಹಿಸುವರು. ಬಿವಿಬಿ, ಮೈಸೂರು ಖಜಾಂಚಿ ಡಾ.ಎ.ಟಿ.ಭಾಷ್ಯಂ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಎರಡೂ ದಿನಗಳೂ ವಿವಿಧ ಗಾಯನ, ಸಂಗೀತ, ನೃತ್ಯವೂ ಸೇರಿದಂತೆ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

Translate »