ಪ್ರಕೃತಿ ರಕ್ಷಣೆ ಎಲ್ಲರ ಹೊಣೆ: ಶಾಸಕ ಜಿಟಿಡಿ
ಮೈಸೂರು

ಪ್ರಕೃತಿ ರಕ್ಷಣೆ ಎಲ್ಲರ ಹೊಣೆ: ಶಾಸಕ ಜಿಟಿಡಿ

June 8, 2020

ಮೈಸೂರು, ಜೂ.7(ಆರ್‍ಕೆಬಿ)- ಪ್ರಕೃತಿ ನಾಶದಿಂದ ಮನುಕುಲಕ್ಕೆ ಅಪಾಯವಿದೆ ಎಂಬುದು ಗೊತ್ತಿದ್ದರೂ ಮರ, ಗಿಡಗಳ ನಾಶಕ್ಕೆ ಮುಂದಾಗಿದ್ದೇವೆ. ಇದಕ್ಕೆ ಮುಂದೆ ನಾವು ಭಾರಿ ಬೆಲೆ ತೆರಬೇಕಾಗುತ್ತದೆ. ಆದ್ದರಿಂದ ಗಿಡ, ಮರಗಳನ್ನು ಹೆಚ್ಚು ಬೆಳೆಸಿ ಪ್ರಕೃತಿಯನ್ನು ರಕ್ಷಿಸಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಇಂದಿಲ್ಲಿ ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರಿನ ಬೋಗಾದಿಯ ಎಸ್‍ಬಿಎಂ ಬಡಾವಣೆಯಲ್ಲಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು, ಗಿಡ ಮರಗಳು ಸಂಪದ್ಭರಿತವಾಗಿ ಬೆಳೆಸಿದರೆ ಮನುಷ್ಯನ ಜೀವಿತಾವಧಿಯಲ್ಲಿ ಒಂದು ದೇವಾಲಯ ಕಟ್ಟಿದಷ್ಟು ಪುಣ್ಯ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಕೃತಿ ನಾಶವಾದರೆ ಮನುಷ್ಯ ಕುಲಕ್ಕೆ ಅಪಾಯವಿದೆ ಎಂಬುದನ್ನು ಅರಿತು, ಎಲ್ಲರೂ ಪ್ರಕೃತಿ ಉಳಿಸಲು ಮುಂದಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಸ್‍ಬಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ತಾಪಂ ಸದಸ್ಯ ಕನ್ನೇಗೌಡ, ಮುಖಂಡರಾದ ಸ್ವಾಮೀಗೌಡ, ಗ್ರಾಪಂ ಸದಸ್ಯರಾದ ಚಂದ್ರಶೇಖರ್, ಹೊನ್ನೇಗೌಡ, ಆನಂದ್, ಮುಖಂಡ ರಾದ ಮಹೇಶ್, ಕೃಷ್ಣಮೂರ್ತಿ, ಅರುಣಾ, ನಾಗರತ್ನ, ಮಹೇಶ್, ವಕೀಲ ಪುರುಷೋತ್ತಮ್, ಚಿನ್ಮಯಿ ಪ್ರಕಾಶ್ ಇತರರಿದ್ದರು.

Translate »