ಮಂಡ್ಯ ಗಂಗಾಧರೇಶ್ವರಸ್ವಾಮಿ ದೇಗುಲದಲ್ಲಿ ನವರಾತ್ರಿ ಪೂಜೆ
ಮಂಡ್ಯ

ಮಂಡ್ಯ ಗಂಗಾಧರೇಶ್ವರಸ್ವಾಮಿ ದೇಗುಲದಲ್ಲಿ ನವರಾತ್ರಿ ಪೂಜೆ

October 27, 2020

ಮಂಡ್ಯ, ಅ.26- ಶ್ರೀ ಆದಿಚುಂ ಚನಗಿರಿ ಶಾಖಾ ಮಠದ ಸಹಯೋಗ ದಲ್ಲಿ ಮಂಡ್ಯ ನಗರದ ಶಂಕರಪುರದ ಶ್ರೀ ಗಂಗಾಧರೇ ಶ್ವರಸ್ವಾಮಿ ದೇವಾಲಯ ದಲ್ಲಿ ನವರಾತ್ರಿ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಪ್ರತಿ ವರ್ಷವು ಸಹ ಸಂಪ್ರದಾಯದಂತೆ ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕೊರೊನಾ ಹಿನ್ನಲೆಯಲ್ಲಿ ಈ ಬಾರಿ ಅತ್ಯಂತ ಸರಳವಾಗಿ, ಸಾಂಪ್ರದಾಯಕವಾಗಿ ನವರಾತ್ರಿ ಉತ್ಸವವನ್ನು ನಡೆಸಲಾಗುತ್ತಿದೆ. ನವರಾತ್ರಿಯ 9 ದಿನಗಳ ಉತ್ಸವದ ಬಳಿಕ ಸೋಮವಾರ ವಿಜಯ ದಶಮಿ ಅಂಗವಾಗಿ ದೇವಿಯನ್ನು ಬನ್ನಿ ಮರದ ಬಳಿಗೆ ಕೊಂಡೊಯ್ದು, ವಿಧಿ ವಿಧಾನ ಗಳಂತೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು ಎಂದು ತಿಳಿಸಿದರು.

ವಿಜಯದಶಮಿಯು ಅತ್ಯಂತ ಪವಿತ್ರವಾದ ದಿನವಾಗಿದೆ. ಪಾಂಡವರು 14 ವರ್ಷ ವನವಾಸ ಮುಗಿಸಿದ ದಿನವೂ ಕೂಡ ಹೌದು. ಮತ್ತೊಂದು ಪುರಾಣದಲ್ಲಿ ಶ್ರೀರಾಮನು ರಾವಣನನ್ನು ಸಂಹರಿಸಿ, ಸೀತಾಮಾತೆ ಯನ್ನು ಭಾರತಕ್ಕೆ ಮರಳಿ ಕರೆತಂದ ದಿನ ಎಂದೂ ಹೇಳಲಾಗುತ್ತದೆ. ಅಲ್ಲದೆ, ಶ್ರೀ ಚಾಮುಂಡೇಶ್ವರಿ ದೇವಿ ಮಹಿಷಾಸುರ ನನ್ನು ಸಂಹರಿಸಿದ ವಿಜಯದ ಅಂಗ ವಾಗಿಯೂ ವಿಜಯದಶಮಿಯನ್ನು ಆಚರಿಸಲಾಗುತ್ತಿದೆ ಎಂದು ವಿವರಿಸಿದರು.

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿಗೆ ಜನರೆಲ್ಲರೂ ತತ್ತರಿಸಿ ಹೋಗಿ ಸಾಕಷ್ಟು ಸಾವು-ನೋವುಗಳು ಸಂಭ ವಿಸಿವೆÉ. ಇದನ್ನು ಹೋಗಲಾಡಿಸಬೇಕು ಎಂದು ವಿಜಯದಶಮಿ ಅಂಗವಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ವಿಶ್ವವನ್ನು ಕಾಡುತ್ತಿ ರುವ ಮಹಾಮಾರಿ ಕೊರೊನಾ ಕಡಿಮೆ ಯಾಗಿ ಎಲ್ಲರಿಗೂ ಆರೋಗ್ಯವನ್ನು ಕರುಣಿಸಲಿ, ಆದಷ್ಟು ಬೇಗ ಕೊರೊನಾ ತೊಲಗಲಿ ಎಂಬ ಉದ್ದೇಶದಿಂದ ಪೂಜಾಕೈಂಕರ್ಯ ಗಳನ್ನು ಕೈಗೊಂಡು ಪ್ರಾರ್ಥಿಸಲಾಯಿತು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಖಾ ಮಠದ ಆಡಳಿತಾಧಿಕಾರಿ ಕಾಂತ ರಾಜು, ಪ್ರಧಾನ ಅರ್ಚಕರುಗಳಾದ ಮಂಜು ನಾಥ್, ಪ್ರಭು ಹಾಗೂ ಭಕ್ತರು ಭಾಗವಹಿಸಿದ್ದರು.

Translate »