ಸೋಮವಾರ ಮುಂಜಾನೆ ಬೆಂಗಳೂರಿಗೆ ನವೀನ್ ಪಾರ್ಥಿವ ಶರೀರ
News

ಸೋಮವಾರ ಮುಂಜಾನೆ ಬೆಂಗಳೂರಿಗೆ ನವೀನ್ ಪಾರ್ಥಿವ ಶರೀರ

March 19, 2022

ಬೆಂಗಳೂರು,ಮಾ.18-ಉಕ್ರೇನ್‍ನಲ್ಲಿ ರಷ್ಯಾ ಶೆಲ್ ದಾಳಿಗೆ ಸಾವನ್ನಪ್ಪಿದ್ದ ಹಾವೇರಿ ಮೂಲದ ನವೀನ್ ಗ್ಯಾನ ಗೌಡರ್ ಪಾರ್ಥಿವ ಶರೀರ ಸೋಮವಾರ (ಮಾ.21) ಬೆಳಗ್ಗೆ 3 ಗಂಟೆಗೆ ಬೆಂಗಳೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡುವ ವೇಳೆ ಈ ವಿಷಯ ತಿಳಿಸಿದ ಅವರು, ನವೀನ್ ಮೃತದೇಹ ಈಗಾಗಲೇ ಪತ್ತೆ ಯಾಗಿದ್ದು, ಪಾರ್ಥಿವ ಶರೀರ ತರಲು ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ಸೋಮವಾರ ಪಾರ್ಥಿವ ಶರೀರ ಬೆಂಗ ಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗುವುದು ಎಂದರು.
ನವೀನ್ ಮೃತದೇಹ ಸೋಮವಾರ ಬೆಳಗೆರೆ ಗ್ರಾಮಕ್ಕೆ ತಲುಪಲಿದೆ. ಗ್ರಾಮ ದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಟ್ಟ ನಂತರ ವೀರಶೈವ ಪದ್ಧತಿಯಂತೆ ಪೂಜೆ ನೆರವೇರಿಸ ಲಾಗುವುದು. ತಂದೆ ಆಸೆಯಂತೆ ನವೀನ್ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಲಾಗುವುದು ಎಂದು ನವೀನ್ ತಾಯಿ ಜಯಲಕ್ಷ್ಮೀ ತಿಳಿಸಿದರು.

Translate »