ಮೈಸೂರು: ಮೈಸೂ ರಿನ ಕಲಾಮಂದಿರದಲ್ಲಿ ನಡೆದ 70ನೇ ಎನ್‍ಸಿಸಿ ದಿನಾಚರಣೆಯ ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದ ಕ್ಯಾಂಪ್‍ಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆಗೈಯ್ದ ವಿವಿಧ ವಿಭಾಗಗಳ ಎನ್‍ಸಿಸಿ ಕೆಡೆಟ್ ಹಾಗೂ ಎನ್‍ಸಿಸಿ ಅಧಿಕಾರಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರತಿ ವರ್ಷ ನವೆಂಬರ್ ತಿಂಗಳ ಕೊನೆಯ ಭಾನುವಾರದಂದು ಎನ್‍ಸಿಸಿ ದಿನವನ್ನಾಗಿ ಆಚರಿಸುವ ಸಂಪ್ರದಾಯವಿದ್ದು, 70ನೇ ವರ್ಷದ ಎನ್‍ಸಿಸಿ ದಿನಾಚರಣೆಯನ್ನು ದೇಶ ದೆಲ್ಲೆಡೆ ಆಚರಿಸಲಾಗಿದೆ. ವಿವಿಧ ಕಾರಣ ಗಳಿಂದ ನಾಲ್ಕು ತಂಡವಾಗಿ ಮೈಸೂರಿನ ಕಲಾಮಂದಿರದಲ್ಲಿ ಆಚರಿಸಿದ ಎನ್‍ಸಿಸಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಎನ್‍ಸಿಸಿ ಭೂದಳ, ಎನ್‍ಸಿಸಿ ನೌಕಾದಳ, ಎನ್‍ಸಿಸಿ ವಾಯುದಳದ ಹಲವಾರು ಕೆಡೆಟ್‍ಗಳು ಪಾಲ್ಗೊಂಡು ಎನ್‍ಸಿಸಿ ಮೇಲಿಟ್ಟಿರುವ ಅಭಿಮಾನವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮೈಸೂರು ವಿಶ್ವ ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅವರು
ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎನ್‍ಸಿಸಿಯ ಮಹತ್ವ ಹೆಚ್ಚಾಗುತ್ತಿದೆ. ಹಲ ವಾರು ದೇಶಗಳಲ್ಲಿ ಎನ್‍ಸಿಸಿಯಂತಹ ಶಿಕ್ಷಣ ಕಡ್ಡಾಯಗೊಳಿಸಲಾಗಿದ್ದು, ವಾರಕ್ಕೆ 2 ಗಂಟೆ ಗಳ ಕಾಲ ಇಂತಹ ತರಬೇತಿ ನೀಡಲಾಗು ತ್ತದೆ. ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಶಿಕ್ಷಣ ಪದ್ಧತಿ ಇರುವುದನ್ನು ಮನಗಾಣ ಬಹುದು. ಅಲ್ಲದೆ ಸೇನಾ ನೇಮಕಾತಿಯ ಲ್ಲಿಯೂ ತರಬೇತಿ ಪಡೆದವರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯ ಹಾಗೂ ವಿವಿಯ ಅಧೀನದಲ್ಲಿರುವ ಕಾಲೇಜು ಗಳಿಂದ 1.20 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಆದರೆ ಎನ್‍ಸಿಸಿಗೆ 10 ಸಾವಿರ ವಿದ್ಯಾರ್ಥಿ ಗಳು ಮಾತ್ರ ಸೇರಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಎನ್‍ಸಿಸಿ ಶಿಕ್ಷಣ ಪಡೆ ಯುವುದಕ್ಕೆ ಆಸಕ್ತಿ ಇಲ್ಲದಂತೆ ಕಾಣುತ್ತಿದೆ. ಮುಂದಿನ ನಾಲ್ಕು ವರ್ಷದ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿ ಯಲ್ಲಿ 15 ರಿಂದ 20 ಸಾವಿರಕ್ಕೆ ಎನ್‍ಸಿಸಿ ವಿದ್ಯಾರ್ಥಿಗಳ ಹೆಚ್ಚಳ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಮೈಸೂರು ವಿವಿ ಸಹಕಾರ ನೀಡಲಿದೆ. ಎನ್‍ಸಿಸಿ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದಕ್ಕೆ ವಿವಿ ಬದ್ಧವಾಗಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಮುಖ್ಯವಾಗಿದೆ. ಎನ್‍ಸಿಸಿ ಶಿಸ್ತನ್ನು ಕಲಿಸುತ್ತದೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಓರಿಯಂಟೇಷನ್ ಕಾರ್ಯಕ್ರಮವನ್ನು ಅಧ್ಯಾಪಕರಿಗಾಗಿ ಆಯೋಜಿಸುವ ಮೂಲಕ ಗುಣಮಟ್ಟದ ಬೋಧನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದೇ ವೇಳೆ ಆರ್‍ಡಿ ಪರೇಡ್‍ಗೆ ಹೋಗಿದ್ದ ಎನ್‍ಸಿಸಿ ಕೆಡಟ್‍ಗಳು, ನವಸೇನಿಕ, ವಾಯು ಸೇನಿಕ್, ತಲಸೇನಿಕ್ ರಾಷ್ಟ್ರೀಯ ಕ್ಯಾಂಪ್ ನಲ್ಲಿ ಪಾಲ್ಗೊಂಡಿದ್ದ ಮೂರು ವಿಭಾಗದ ಎನ್‍ಸಿಸಿ ಕೆಡೆಟ್‍ಗಳಿಗೆ ಪುರಸ್ಕಾರ ನೀಡ ಲಾಯಿತು. ಅಲ್ಲದೆ, ಎನ್‍ಸಿಸಿ ವಿದ್ಯಾರ್ಥಿ ಗಳನ್ನು ತರಬೇತಿಗೊಳಿಸಿದ ಅಧಿಕಾರಿಗಳು, ವಿವಿಧ ಬೆಟಾಲಿಯನ್ ಸಿಬ್ಬಂದಿಗಳಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಇದೇ ವೇಳೆ ಕೆಡೆಟ್‍ಗಳು ನೃತ್ಯ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯ ಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎನ್‍ಸಿಸಿ ಗ್ರೂಪ್ ಕಮಾಂಡರ್ ಎಂ.ಕೆ. ಬೆಳ್ಳಿಯಪ್ಪ, ವಿಶ್ರಾಂತ ಎನ್‍ಸಿಸಿ ಅಧಿಕಾರಿ ಕೆ.ಎ.ಕಾರಿಯಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.