ಮೈಸೂರು: ರಾಜ್ಯದ ಪರಿವಾರ ಮತ್ತು ತಳವಾರ ಸಮುದಾಯ ಗಳನ್ನು ಪರಿಶಿಷ್ಟ ಪಂಗಡ (ಎಸ್‍ಟಿ) ಪಟ್ಟಿಗೆ ಸೇರ್ಪಡೆ ಮಾಡುವ ಸಂಬಂಧ ಮುಂಬರುವ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಅಂಗೀಕಾರ ಪಡೆಯಲು ಮುಂದಾಗಬೇಕೆಂದು ಸಂಸದ ಪ್ರತಾಪ್ ಸಿಂಹ ಅವರಿಗೆ ನಾಯಕ ಸಮುದಾಯದ ಮುಖಂಡರು ಶನಿವಾರ ಮನವಿ ಸಲ್ಲಿಸಿದರು.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸಂಸದರನ್ನು ಭೇಟಿಯಾದ ಮುಖಂ ಡರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಂತಿಮ ಅಧಿವೇಶನ ಇದಾಗಿದ್ದು, ಈ ವೇಳೆ ಪರಿವಾರ ಮತ್ತು ತಳವಾರ ಸಮು ದಾಯಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕು. ಉಭಯ ಸದನಗಳಲ್ಲಿ ಇದಕ್ಕೆ ಅನುಮೋ ದನೆ ಪಡೆದು ರಾಷ್ಟ್ರಪತಿಗಳ ಅಂಕಿತ ಹಾಕಿಸಿ ಸಮುದಾಯಕ್ಕೆ ಅನುಕೂಲ ಮಾಡಿಕೊಡ ಬೇಕು ಎಂದು ಕೋರಿದರು.
ಇದಕ್ಕೆ ಸ್ಪಂದಿಸಿದ ಸಂಸದ ಪ್ರತಾಪ್ ಸಿಂಹ, ಈ ಬಾರಿ ಅಧಿವೇಶನದಲ್ಲಿ ಖಂಡಿತ ವಾಗಿಯೂ ಪರಿವಾರ ಮತ್ತು ತಳವಾರ ಸಮು ದಾಯಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸುವ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಚಾಮರಾಜನಗರ ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಪಾಲಿಕೆ ಸದಸ್ಯ ಶಿವಕುಮಾರ, ವಕೀಲ ಪಡುವಾರಹಳ್ಳಿ ಎಂ.ರಾಮಕೃಷ್ಣ, ಮುಖಂಡರಾದ ಗುರು ವಿನಾಯಕ, ಕ್ಯಾತಮಾರನಹಳ್ಳಿ ಜೆ.ವೆಂಕಟೇಶ, ದೇವರಾಜ್ ಟಿ.ಕಾಟೂರು, ರಾಮನಹಳ್ಳಿ ಸಿದ್ದಯ್ಯ, ವೆಂಕಟೇಶನಾಯಕ, ಪ್ರಭಾಕರ್, ರಾಜು ಮಾರ್ಕೆಟ್, ಎಂ.ಶಿವಪ್ರಕಾಶ್, ಎಂ. ಮಹೇಶ್ ಮತ್ತಿತರರು ಹಾಜರಿದ್ದರು.