ಮೈಸೂರು: ಅಪರಾಧ ತಡೆ ಮಾಸಾಚರಣೆ ಕೇವಲ ಡಿಸೆಂಬರ್ ತಿಂಗ ಳಿಗೆ ಸೀಮಿತವಾಗದೆ ವರ್ಷವಿಡಿ ನಡೆಸಬೇಕು ಎಂದು ಮೈಸೂರು ವಿಶ್ವ ವಿದ್ಯಾಲಯ ಅಪ ರಾಧ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಅಶೋಕ್ ಸಲಹೆ ನೀಡಿದರು.
ಮೈಸೂರು ನಗರ ಪೊಲೀಸ್ ವತಿಯಿಂದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಎಸ್‍ಡಿಎಂ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಪರಾಧ ಎಂದ ಕೂಡಲೇ ಅದಕ್ಕೆ ಸಂಬಂ ಧಿಸಿದ ಕೆಲಸಗಳನ್ನು ಪೆÇಲೀಸರೇ ಮಾಡು ತ್ತಾರೆ ಎಂಬ ಭಾವನೆ ಸಾರ್ವಜನಿಕರಲ್ಲಿ ಇರಬಾರದು. ಪೊಲೀಸರ ಕರ್ತವ್ಯಕ್ಕೆ ಜನರೂ ಸಹಕರಿಸಬೇಕು ಎಂದರು.
ಪೆÇಲೀಸರು ಅಪರಾಧಗಳನ್ನು ತಡೆ ಯುವುದಲ್ಲದೇ, ಅಪರಾಧದ ಹಿಂದಿನ ಸತ್ಯಗಳನ್ನು ಪತ್ತೆ ಹಚ್ಚಬೇಕು. ಆದರೆ, ಇತ್ತೀ ಚಿನ ದಿನಗಳಲ್ಲಿ ಪೊಲೀಸರು ವಿಐಪಿ ಮತ್ತು ವಿವಿಐಪಿಗಳಿಗೆ ಭದ್ರತೆ ನೀಡುತ್ತಾ. ತಮ್ಮ ಪ್ರಮುಖ ಕರ್ತವ್ಯವನ್ನೇ ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅಪರಾಧಗಳನ್ನು ನಿಯಂತ್ರಿಸುವುದ ಕ್ಕಿಂತ ಅಪರಾಧಿಗಳ ಮನಃಪರಿವರ್ತನೆ ಪ್ರಮುಖವಾಗಿ ಆಗಬೇಕಾಗಿದೆ. ಹಾಗಾಗಿ ಕ್ರಿಮಿನಾಲಜಿ ಓದಿದವರಿಗೆ ಪೊಲೀಸ್ ಇಲಾಖೆ ಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಇದ ರಿಂದ ಅಪರಾಧ ಪ್ರಕರಣಗಳನ್ನು ವೇಗವಾಗಿ ಪತ್ತೆಹಚ್ಚಲು ಸಹಾಯವಾಗುತ್ತದೆ ಎಂದರು.
ನಗರ ಪೆÇಲೀಸ್ ಆಯುಕ್ತ ಡಾ. ಸುಬ್ರಹ್ಮಣ್ಯೇಶ್ವರ್ ರಾವ್ ಮಾತನಾಡಿ, ಪೊಲೀಸ್ ಇಲಾಖೆಯ ಕುರಿತು ಸರ್ಕಾರ ದಿಂದಾಗಲೀ, ವಿಶ್ವವಿದ್ಯಾಲಯಗಳಿಂದಾ ಗಲೀ ಯಾವುದೇ ಸಂಶೋಧನೆಗಳು ಆಗಿಲ್ಲ. ಕೇವಲ ಅಪರಾಧಗಳು ನಡೆದಾಗ ಮಾತ್ರ ಕೆಲವೊಂದು ಸಂಶೋಧನೆಗಳನ್ನು ಮಾಡ ಲಾಗುತ್ತದೆ. ಹಾಗಾಗಿ ಇಲಾಖೆಯ ಕುರಿತು ವಿಶ್ವವಿದ್ಯಾಲಯದ ಮಟ್ಟದಲ್ಲಿ ಸಂಶೋ ಧನೆಯಾಗುವ ಅಗತ್ಯವಿದೆ ಎಂದರು.
ಅಪರಾಧ ತಡೆಗಟ್ಟಲು ಈ ಒಂದು ತಿಂಗ ಳಿನಲ್ಲಿ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳು ತ್ತೇವೆ ಎಂಬುದನ್ನು ಪ್ರತಿಯೊಬ್ಬರೂ ಅವ ಲೋಕನ ಮಾಡಿಕೊಳ್ಳಬೇಕಿದೆ. ಅಪರಾಧ ನಡೆಯುವುದಕ್ಕೂ ಮುನ್ನ ಎಚ್ಚರಿಕೆ ವಹಿಸ ಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಚೀಟಿಂಗ್ ಫಂಡ್ ದಂಧೆಗಳು ಹೆಚ್ಚಾಗುತ್ತಿವೆ. ಹಿರಿಯ ವ್ಯಕ್ತಿಗಳಿಂದ ಲಕ್ಷಾಂತರ ಹಣ ಕಟ್ಟಿಸಿಕೊಂಡು ಅದನ್ನು ದ್ವಿಗುಣ ಮಾಡುತ್ತೇವೆ ಎಂದು ನಂಬಿಸಿ, ವಂಚಿಸುತ್ತ್ತಿದ್ದಾರೆ. ಇಂತಹ ಪ್ರಸಂಗ ಗಳು ನಡೆಯದಂತೆ ಎಚ್ಚರವಹಿಸಿ, ಚೀಟಿಂಗ್ ಫಂಡ್‍ಗಳನ್ನು ನಡೆಸುವಂತಹ ವ್ಯಕ್ತಿಗಳನ್ನು ಗಮನಿಸಬೇಕು. ಹಾಗೆಯೇ ಯಾವುದೇ ಅಪ ರಾಧ ಪ್ರಕರಣಗಳನ್ನು ತಡೆಯಲು ಸಾರ್ವ ಜನಿಕರು ಹಾಗೂ ಪತ್ರಿಕಾ ಮಾಧ್ಯಮದ ಸಹಕಾರ ಅತ್ಯಗತ್ಯವಾಗಿದೆ ಎಂದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಡಿಸಿಪಿಗಳಾದ ವಿಕ್ರಂ ಅಮಟೆ, ಎನ್. ವಿಷ್ಣು ವರ್ಧನ, ಡಿಸಿಪಿ(ಸಿಆರ್)ಚನ್ನಯ್ಯ ಇದ್ದರು.