ಅಧ್ಯಾಪಕರ ಬಡ್ತಿ ಸಂಬಂಧ ಮೈಸೂರು ವಿವಿಗೆ ಪ್ರಧಾನಿ ಕಾರ್ಯಾಲಯದಿಂದ ಪತ್ರ
ಮೈಸೂರು

ಅಧ್ಯಾಪಕರ ಬಡ್ತಿ ಸಂಬಂಧ ಮೈಸೂರು ವಿವಿಗೆ ಪ್ರಧಾನಿ ಕಾರ್ಯಾಲಯದಿಂದ ಪತ್ರ

December 2, 2018

ಮೈಸೂರು: ಮೈಸೂರು ವಿವಿ ಸಹ ಪ್ರಾಧ್ಯಾ ಪಕರಿಗೆ ಪ್ರೊಫೆಸರ್ ಹುದ್ದೆಗೆ ಬಡ್ತಿ ನೀಡದೆ ಸತಾಯಿಸುತ್ತಿರುವ ಮೈಸೂರು ವಿವಿ ಆಡಳಿತ ಮಂಡಳಿ ವಿರುದ್ಧ ಗೌಪ್ಯ ತನಿಖೆ ನಡೆಸಿ ವರದಿ ಸಲ್ಲಿಸಲು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಪತ್ರ ವ್ಯವಹಾರ ನಡೆದಿದೆ ಎನ್ನಲಾಗಿದೆ.

ಮೈಸೂರು ವಿವಿ ವ್ಯಾಪ್ತಿಯ ಮಹಾರಾಜ ಕಾಲೇಜು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ವಿಶ್ವನಾಥ್ ಬಡ್ತಿಯಿಂದ ವಂಚಿತ ರಾದವರು. ಡಾ.ವಿಶ್ವನಾಥ್ ಅವರು ಪ್ರೊಫೆಸರ್ ಹುದ್ದೆಗೆ ಕಳೆದ 10 ವರ್ಷಗಳಿಂದ ಬಡ್ತಿ ನೀಡದ ವಿವಿ ಆಡಳಿತ ಮಂಡಳಿ ವಿರುದ್ಧ ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಅಲ್ಲಿಯೂ ಇವರ ಪರವಾಗಿ ತೀರ್ಪು ಬಂದಿದ್ದರೂ ಇದಕ್ಕೆ ವಿವಿ ಆಡಳಿತ ಮಂಡಳಿ ಸರಿಯಾಗಿ ಸ್ಪಂದಿಸದೆ ನಿರ್ಲಕ್ಷ್ಯ ತೋರಿತ್ತು. ಇದರಿಂದ ರೋಸಿ ಹೋದ ಡಾ. ವಿಶ್ವನಾಥ್, ನ್ಯಾಯಕ್ಕಾಗಿ ನ.12 ರಂದು ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಪ್ರಧಾನಮಂತ್ರಿ ಕಾರ್ಯಾಲಯದ ಮೊರೆ ಹೋಗಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನ ಮಂತ್ರಿ ಕಾರ್ಯಾಲಯ, ರಾಜ್ಯ ಮುಖ್ಯ ಕಾರ್ಯದರ್ಶಿಗೆ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹಾಗೂ ಮೈಸೂರು ವಿವಿ ಮುಖ್ಯಸ್ಥರಿಗೆ ನ.20 ರಂದು ಪತ್ರ ವ್ಯವಹಾರ ನಡೆಸಿ, ತಪ್ಪಿಸ್ಥರ ವಿರುದ್ಧ ಗೌಪ್ಯ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.

ಕಳೆದ ವಾರವಷ್ಟೇ ರಾಷ್ಟ್ರಪತಿಭವನದಿಂದ ಈ ಕೂಡಲೇ ಸಮಸ್ಯೆ ಯನ್ನು ಬಗೆಹರಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದು, ಇದೀಗ ಪ್ರಧಾನಮಂತ್ರಿ ಕಾರ್ಯಾಲಯದಿಂದಲೂ ಸೂಚನೆ ಬಂದಿ ರುವುದು ಪ್ರಕರಣದ ಗಂಭೀರತೆ ಕುರಿತು ಮೈಸೂರು ವಿವಿ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡ¨

Translate »