ಆಯುರ್ವೇದ ಅಂಶಗಳಿರುವ ಆಹಾರ   ಕುರಿತು ಅರಿವು ಅಗತ್ಯ: ಡಾ.ಚಂದ್ರಶೇಖರ್
ಮೈಸೂರು

ಆಯುರ್ವೇದ ಅಂಶಗಳಿರುವ ಆಹಾರ  ಕುರಿತು ಅರಿವು ಅಗತ್ಯ: ಡಾ.ಚಂದ್ರಶೇಖರ್

October 29, 2020

ಮೈಸೂರು, ಅ.28-ಆರೋಗ್ಯ ಭಾರತಿ ಮತ್ತು ಅಪೂರ್ವ ಸ್ನೇಹ ಬಳಗದ ವತಿ ಯಿಂದ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಮುಂಭಾಗ ಆಯುರ್ವೇದ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ 500 ವಿವಿಧ ಜಾತಿಯ  ಆಯು ರ್ವೇದದ ಸಸಿಗಳನ್ನು ನೀಡುವ ಮೂಲಕ ಆಯುಷ್ಯ ಆಯುರ್ವೇದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಯುರ್ವೇದ ವೈದ್ಯ ಡಾ. ಚಂದ್ರಶೇಖರ್, ಆಯುರ್ವೇದ ಭಾರತದ ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದ್ದು, ಇಂದು ವಿಶ್ವದ ಗಮನ ಸೆಳೆದಿದೆ. ಸಹಜ ಬದುಕಿನ ಆಹಾರ ಶೈಲಿ ಯಲ್ಲಿ ಆಯುರ್ವೇದದ ಚಿಕಿತ್ಸೆ ಗುಣಗಳ ಅಂಶಗಳಿದ್ದು ಇದಕ್ಕೆ ಹೆಚ್ಚು ಒತ್ತು ಕೊಡ ಬೇಕಿದೆ. ಈ ಹಿಂದೆ ಆಯುರ್ವೇದ ಕಾರಣಕ್ಕೆ ತಾವು ತಿನ್ನುವ ಆಹಾರದಲ್ಲಿ ಔಷಧಿಯ ಗುಣವಿತ್ತು. ಇಂದು ಔಷಧಿಗಳೇ ಆಹಾರ ಕ್ರಮವಾಗಿ ಇರುವುದು ವಿಪರ್ಯಾಸದ ಸಂಗತಿ. ಆಯುರ್ವೇದದ ಗಿಡಗಳ ಪೆÇೀಷಣೆ ಮೂಲಕ ಮಕ್ಕಳಿಗೆ ಚಿಕ್ಕಂದಿನಲ್ಲೇ ಸೊಪ್ಪು ತರಕಾರಿ ಸೇವನೆಯ ಅಂಶಗಳು ಹಾಗೂ ಆಯುರ್ವೇದದ ಕುರಿತು ಅರಿವು ಮೂಡಿಸ ಬೇಕಾಗಿದೆ ಎಂದು ಹೇಳಿದರು.

ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ಮಾತನಾಡಿ, ಕೊರೊನಾ ರೋಗಕ್ಕೆ ಆಯುರ್ವೇದ ಔಷಧಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಎಲ್ಲದಕ್ಕೂ ಅಲೋಪತಿ ಔಷಧಿ ಮಾತ್ರೆಗಳು ಪರಿಹಾರವಲ್ಲ. ಸಹಜ ಬದುಕಿನ ಕ್ರಮವಾಗಿ ಬಾಲ್ಯದಿಂದಲೇ ಆಯುರ್ವೇದದ ಅಂಶಗಳ ಸೊಪ್ಪು, ತರಕಾರಿ ಸೇವನೆ, ಸಿರಿಧಾನ್ಯ, ಯೋಗ ಅಂತಹ ಜೀವನ ಕ್ರಮಗಳ ಬಗ್ಗೆ ಪ್ರತಿ ಶಾಲೆ ಗಳಲ್ಲಿ ಅಭಿಯಾನ ಹಮ್ಮಿಕೊಳ್ಳಬೇಕಾ ಗಿದೆ. ದಕ್ಷಿಣ ಆಫ್ರಿಕಾ, ಅಮೇರಿಕಾ, ಫ್ರಾನ್ಸ್, ಇಂಗ್ಲೆಂಡ್ ದೇಶಗಳಲ್ಲಿ ಪಾರಂಪರಿಕ ವೈದ್ಯ ಪದ್ಧತಿಗೆ ಉತ್ತೇಜನ ನೀಡಲಾಗುತ್ತಿದ್ದು, ಅದರಂತೆಯೇ ನಮ್ಮ ಭಾರತದಲ್ಲಿ ಈ ಪದ್ಧ ತಿಗೆ ಪೆÇ್ರೀತ್ಸಾಹ ನೀಡಬೇಕು ಎಂದರು.

ನಗರಪಾಲಿಕೆ ಸದಸ್ಯ ಮಾ.ವಿ.ರಾಮ ಪ್ರಸಾದ್ ಮಾತನಾಡಿ, ಚಾಮುಂಡಿಪುರಂನ ವಾರ್ಡ್‍ನ ಉದ್ಯಾನವನದಲ್ಲಿ ವಿವಿಧ ಜಾತಿಯ ಆಯುರ್ವೇದ ಗಿಡಗಳನ್ನು ನೆಟ್ಟು ಆಯು ರ್ವೇದ ಉದ್ಯಾನವನ ಎಂದೇ ನಾಮಕರಣ ಮಾಡುವ ಮೂಲಕ ಮೈಸೂರಿನಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಲು ಮುಂದಾಗುತ್ತೇವೆ ಎಂದರು. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್‍ಗೌಡ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಡಾ. ಅರುಣಾಚಲ, ಡಾ.ಶೆಣೈ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೃಷ್ಣ ರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಸುಚೀಂದ್ರ, ಶಶಿ, ಸುಮಂತ್ ಶಾಸ್ತ್ರಿ ಇನ್ನಿತರರು ಹಾಜರಿದ್ದರು.

Translate »