`ಡಾ.ರಾಜೇಂದ್ರ ಶ್ರೀಗಳವರ ಜೀವನ ಸಂದೇಶ’ ಭಾಷಣ ಸ್ಪರ್ಧೆ ವಿಜೇತರು
ಮೈಸೂರು

`ಡಾ.ರಾಜೇಂದ್ರ ಶ್ರೀಗಳವರ ಜೀವನ ಸಂದೇಶ’ ಭಾಷಣ ಸ್ಪರ್ಧೆ ವಿಜೇತರು

October 29, 2020

ಮೈಸೂರು, ಅ.28-ಮೈಸೂರಿನ ಕುವೆಂಪುನಗರದಲ್ಲಿರುವ ಸ್ಪಂದನಾ ಸಂಸ್ಥೆ ಏರ್ಪಡಿಸಿದ್ದ `ಡಾ. ರಾಜೇಂದ್ರ ಶ್ರೀಗಳವರ ಜೀವನ ಸಂದೇಶ’ ಭಾಷಣ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಸಂಸ್ಥೆಯ ಅಧ್ಯಕ್ಷ ಎಂ.ಜಯಶಂಕರ್ ಬಿಡುಗಡೆ ಮಾಡಿದ್ದಾರೆ. 10ರಿಂದ 14 ವರ್ಷದೊಳಗಿನ ತಂಡದಲ್ಲಿ ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಜೆಎಸ್‍ಎಸ್ ಪಬ್ಲಿಕ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಎಸ್.ವಿನೀತ್ ಪ್ರಥಮ ಹಾಗೂ ಶಿವಮೊಗ್ಗದ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್‍ನ 6ನೇ ತರಗತಿ ವಿದ್ಯಾರ್ಥಿನಿ ಅಕ್ಷತಾ ದ್ವಿತೀಯ ಬಹುಮಾನ ಪಡೆದಿದ್ದಾರೆ. 15ರಿಂದ 25 ವರ್ಷದೊಳಗಿ ನವರ ತಂಡದಲ್ಲಿ ಚಾಮರಾಜನಗರ ಜೆಎಸ್‍ಎಸ್ ಮಹಿಳಾ ಕಾಲೇಜಿನ ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಎನ್.ಮಂದಾರ ಪ್ರಥಮ, ಮೈಸೂರಿನ ಹೆಬ್ಬಾಳುವಿನಲ್ಲಿರುವ ಸುಮುಖ ಶಿಕ್ಷಣ ಸಂಸ್ಥೆಯ ಸಹ ಶಿಕ್ಷಕಿ ಡಿ.ಎಂ.ಅಮೃತ ಮತ್ತು ಯಳಂದೂರಿನ ಎಸ್‍ಡಿವಿಎಸ್ ಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿನಿ ಎಸ್.ರುಚಿತ ದ್ವಿತೀಯ ಬಹುಮಾನ ಪಡೆದಿ ದ್ದಾರೆ. 26 ವರ್ಷ ಮೇಲ್ಪಟ್ಟವರ ತಂಡದಲ್ಲಿ ಮೈಸೂರಿನ ಜೆಎಸ್‍ಎಸ್ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ರಶ್ಮಿ ಬಿ.ಎನ್. ಪ್ರಥಮ, ಮೈಸೂರಿನ ಬಿ.ಬಿ. ಗಾರ್ಡನ್‍ನ ಡಾ.ರೇಖಾ ಕೆ.ಎನ್. ಮತ್ತು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯ ನರ ರೋಗ ತಜ್ಞ ಡಾ.ಶಾಸ್ತಾರ, ಪಿ.ದ್ವಿತೀಯ ಬಹುಮಾನ ಪಡೆದಿದ್ದಾರೆ.

Translate »