ಗಾಂಧೀಜಿ ಪಾದದ ಧೂಳಿಗೆ ನೆಹರೂ ಸಮ
News

ಗಾಂಧೀಜಿ ಪಾದದ ಧೂಳಿಗೆ ನೆಹರೂ ಸಮ

October 13, 2022

ಹೊಸಪೇಟೆ (ವಿಜಯನಗರ), ಅ.12- ಮಹಾತ್ಮ ಗಾಂಧಿ ಅವರ ಪಾದದ ಧೂಳಿಗೆ ನೆಹರೂ ಸಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ನೆಹರೂ ಅವರ ಪಾದಕ್ಕೆ ಮೋದಿ ಅವರು ಸಮ ಎಂದು ಕಾಂಗ್ರೆಸ್ಸಿ ಗರು, ಸಿದ್ದರಾಮಯ್ಯನವರು ಟೀಕಿಸಿದ್ದಾರೆ. ಮಹಾತ್ಮ ಗಾಂಧೀಜಿ ಅವರ ಪಾದದ ಧೂಳಿಗೆ ನೆಹರೂ ಅವರು ಸಮಾನರಾ, ನಾವು ಕೇಳಬಹುದಾ ಎಂದು ಪ್ರಶ್ನಿಸಿದರು.

ದೇಶದ ಜನರನ್ನು ಒಗ್ಗೂಡಿಸಿ ಭಾರತ ಅಗ್ರಗಣ್ಯ ಸ್ಥಾನದಲ್ಲಿ ಬರುವಂತೆ ಕೆಲಸ ಮಾಡುತ್ತಿರುವ ಮೋದಿ ಬಗ್ಗೆ ಹಗುರವಾಗಿ ಮಾತಾಡಬಾರದು ಎಂದು ನಾವು ಹೇಳಿದರೆ, ಸಿದ್ದರಾಮಯ್ಯನವರು ಏನೇನೋ ವಿತಂಡ ವಾಗಿ ಮಾತಾಡುತ್ತಿದ್ದಾರೆ. ಯಾವಾಗಲೂ ಅವರದು ವಿತಂಡವಾದ. ದೇಶದಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ನಮ್ಮ ದೇಶಕ್ಕಿಂತ ಶೇ.10ರಷ್ಟು ಜನಸಂಖ್ಯೆ ಇರುವ ರಾಷ್ಟ್ರಗಳಲ್ಲಿ ಈಗಲೂ ಕೋವಿಡ್ ಇದೆ. ಆದರೆ, ನಮ್ಮಲ್ಲಿ ಅದನ್ನು ಸಮರ್ಥವಾಗಿ ನಿಭಾ ಯಿಸಿದ್ದರಿಂದ ಯಶಸ್ವಿಯಾಗಿದೆ ಎಂದು ಹೇಳಿದರು.

ಹೊಸ ಶಿಕ್ಷಣ ನೀತಿ, ಔದ್ಯೋಗಿಕರಣ, ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹರಿದು ಬರುವಂತೆ ಮೋದಿ ಮಾಡಿದರು. ರೈತರ ಯೋಜ ನೆಗಳನ್ನು ರೂಪಿಸಿದರು. ಇತ್ತೀಚಿನ ವಿಶ್ವ ಬ್ಯಾಂಕ್ ವರದಿ ಪ್ರಕಾರ, ಎಲ್ಲ ದೇಶಗಳಲ್ಲಿ ಆರ್ಥಿಕ ಹಿಂಜರಿತ ವಿದೆ. ಆದರೆ, ಭಾರತ ಸಮತೋಲನ ಕಾಪಾಡಿಕೊಂಡು ಮುನ್ನಡೆಯುತ್ತಿದೆ ಎಂದು ಉಲ್ಲೇಖಿಸಿದೆ. ಮೋದಿ ಅವರ ನೀತಿಗಳೇ ಇದಕ್ಕೆ ಕಾರಣ ಎಂದು ಹೇಳಿದರು. ಬಿಜೆಪಿ ಸರ್ಕಾರದಲ್ಲಿ ಜನ ಭಯ ಭೀತರಾಗಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ. ನಮ್ಮ ಸರ್ಕಾರದಿಂದ ಯಾರಿಗೂ ಭಯವಿಲ್ಲ. ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವವರು, ರಾಜಕೀಯ ವಾಗಿ ಕಾಂಗ್ರೆಸ್ಸಿಗರಿಗೆ ಭಯವಿದೆ. ಜನಬೆಂಬಲದೊಂದಿಗೆ ಬಿಜೆಪಿ ಪುನಃ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ಆ ಭಯ ಕಾಂಗ್ರೆಸ್‍ಗೆ ಕಾಡುತ್ತಿದೆ ಎಂದರು. ನಮ್ಮ
ಅವಧಿಯಲ್ಲಿ ಯಾವ ಹಗರಣ ನಡೆದಿದೆ. ಅದರ ಬಗ್ಗೆ ಕಾಂಗ್ರೆಸ್ಸಿಗರು ಮಾಹಿತಿ ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು. ನಮ್ಮ ಮೇಲೆ ಭರವಸೆ ಇಲ್ಲದಿದ್ದಲ್ಲಿ ಲೋಕಾಯುಕ್ತಕ್ಕೆ ದೂರು ಕೊಡಬಹುದು. ಕಾಂಗ್ರೆಸ್ ಸರ್ಕಾರವಿದ್ದಾಗ ಲೋಕಾಯುಕ್ತ ಸಂಸ್ಥೆ ಮುಚ್ಚಿ ಎಸಿಬಿ ಆರಂಭಿಸಿದ್ದರು. ಅವರ ವಿರುದ್ಧದ ಕೇಸ್‍ಗಳನ್ನು ಮುಚ್ಚಿ ಹಾಕಿದ್ದರು. ಲೋಕಾಯುಕ್ತ ಬಂದ ನಂತರ ಕಾಂಗ್ರೆಸ್ ಹಗರಣ ಬೆಳಕಿಗೆ ಬರುತ್ತವೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ. ಕಾಂಗ್ರೆಸ್ ನಿಜವಾದ ಬಣ್ಣ ಬಯಲಿಗೆ ಬರಲಿದೆ ಎಂದು ಸಿಎಂ ಹೇಳಿದರು. ನಮ್ಮ ಸರ್ಕಾರದಲ್ಲಿ ದೀನ ದಲಿತರಿಗೆ ಮೋಸದ ಭಯವಿಲ್ಲ. ವೀರಶೈವ ಲಿಂಗಾಯತರಿಗೆ ಧರ್ಮ ಒಡೆಯುತ್ತೇವೆ ಎಂಬ ಅಳುಕಿಲ್ಲ. ಹಿಂದೆ ಪ್ರಾದೇಶಿಕ ಅಸಮತೋಲನವಿತ್ತು. ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ, ಅನುದಾನ ಒದಗಿಸಿದೆ. ಈ ಹಿಂದೆ ರೈತರ ಬೆಳೆ ನಾಶವಾದರೆ ರೈತರಿಗೆ ಸಕಾಲಕ್ಕೆ ಪರಿಹಾರ ಸಿಗುತ್ತಿರಲಿಲ್ಲ. ಈಗ ತಿಂಗಳೊಳಗೆ ನೇರ ರೈತರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಈ ವರ್ಷ ನಮ್ಮ ಸರ್ಕಾರ ಐದು ಲಕ್ಷ ಯುವಕರಿಗೆ ಕೆಲಸ ಕೊಡಲಿದೆ. ನಮ್ಮ ಸರ್ಕಾರದಲ್ಲಿ ಎಲ್ಲರಿಗೂ ರಕ್ಷಣೆ ನೀಡಲಾಗಿದೆ. ಕಾಂಗ್ರೆಸ್ ತುಷ್ಟೀಕರಣ ಮಾಡಿ ಅನ್ಯ ಕೋಮಿನವರಿಗೆ ಅನ್ಯಾಯವೆಸಗಿತ್ತು. ಅವರ ಅಧಿಕಾರದ ಅವಧಿಯಲ್ಲಿ 24 ಜನ ಕೊಲೆಗೀಡಾಗಿದ್ದರು ಎಂದರು.

Translate »