ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢಗೊಳಿಸಲು ಹೊಸ ಕಾರ್ಯತಂತ್ರ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢಗೊಳಿಸಲು ಹೊಸ ಕಾರ್ಯತಂತ್ರ

October 16, 2020

ಮೈಸೂರು, ಅ.15(ಆರ್‍ಕೆಬಿ)- ಮುಂಬರುವ ಸಹ ಕಾರ ಸಂಘಗಳು, ಕೆಎಂಎಫ್ ಮತ್ತಿತರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಂಭೀರವಾಗಿ ಪರಿ ಗಣಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಸದೃಢ ಗೊಳಿಸಲು ಹೊಸ ಕಾರ್ಯತಂತ್ರ ರೂಪಿಸಲು ಮೈಸೂ ರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ನಡೆದ ಕಾಂಗ್ರೆಸ್‍ನ ಪ್ರಮುಖ ಮುಖಂಡರ ಸಭೆ ತೀರ್ಮಾ ನಿಸಿತು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಗಟ್ಟಿ ಗೊಳಿಸಲು ತಳಮಟ್ಟದಲ್ಲಿ ಕಾರ್ಯತಂತ್ರ ರೂಪಿಸುವ ಸಂಬಂಧ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣ್, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಆರ್.ಧರ್ಮಸೇನಾ, ಅನಿಲ್ ಚಿಕ್ಕ ಮಾದು, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮ ಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್ ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿ ಹಾಜ ರಿದ್ದು ಹಲವು ಸಲಹೆ ನೀಡಿದರು.

ಸದ್ಯದಲ್ಲೇ ನಡೆಯಲಿರುವ ರಾಜ್ಯ ಯುವ ಕಾಂಗ್ರೆಸ್ ಚುನಾವಣೆಗೆ ಜಿಲ್ಲೆಯ ಹುರಿಯಾಳುಗಳ ಆಯ್ಕೆಯ ಅಂತಿಮ ತೀರ್ಮಾನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ವಹಿಸಲು ಸಭೆ ಸರ್ವಾ ನುಮತದ ತೀರ್ಮಾನ ಕೈಗೊಂಡಿತು. ರಾಜ್ಯ ಚುನಾ ವಣಾ ಆಯೋಗದ ಸುತ್ತೋಲೆ ಅನುಸಾರ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಪ್ರತಿಬೂತ್‍ಗೆ ಒಬ್ಬ ಏಜೆಂಟ್ ನೇಮಿಸುವುದು, ಜಿಲ್ಲೆಯಲ್ಲಿ ಆರೋಗ್ಯ ಹಸ್ತ ಕಾರ್ಯ ಕ್ರಮದ ಪ್ರಗತಿ ಪರಿಶೀಲನೆ, ಕೊರೊನಾ ವಾರಿಯರ್ಸ್‍ಗೆ ಆರೋಗ್ಯ ಕವಚ ಬಾಂಡ್ ವಿತರಣೆ, ಜಿಲ್ಲೆಯಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 2ನೇ ಸಭೆ ಕರೆಯು ವುದು, ಬೇರೆ ರಾಜಕೀಯ ಪಕ್ಷಗಳಿಂದ ಕಾಂಗ್ರೆಸ್‍ಗೆ ಸೇರಬಯಸುವ ಬಹಳಷ್ಟು ಮುಖಂಡರ ಪಟ್ಟಿಗೆ ಸ್ಥಳೀಯ ಮಟ್ಟದಲ್ಲಿಯೇ ತೀರ್ಮಾನ ತೆಗೆದುಕೊಳ್ಳು ವುದು ಮೊದಲಾದ ವಿಚಾರಗಳ ಕುರಿತು ಸಭೆ ಚರ್ಚಿಸಿ ತೀರ್ಮಾನ ಕೈಗೊಂಡಿತು. ಸಭೆಯ ವರದಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲು ತೀರ್ಮಾನಿಸಲಾಯಿತು. ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಡಿ.ರವಿ ಶಂಕರ್, ಟಿ.ನರಸೀಪುರ ಯುವ ಮುಖಂಡ ಸುನಿಲ್ ಬೋಸ್ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Translate »